ರಾಜ್ಯದಲ್ಲಿ ನೈಟ್ ಕರ್ಫ್ಯೂ ಆರಂಭ, ಬೇಕಾಬಿಟ್ಟಿ ಓಡಾಡಿದರೆ ಬೀಳುತ್ತೆ ಕೇಸ್

ರಾಜ್ಯದಲ್ಲಿ ನೈಟ್ ಕರ್ಫ್ಯೂ ಆರಂಭ, ಬೇಕಾಬಿಟ್ಟಿ ಓಡಾಡಿದರೆ ಬೀಳುತ್ತೆ ಕೇಸ್


ಕರ್ನಾಟಕ ಸರ್ಕಾರವು ರಾಜ್ಯಾದ್ಯಂತ ವಿಧಿಸಿರುವ ರಾತ್ರಿ ಕರ್ಫ್ಯೂ ಮಂಗಳವಾರ ರಾತ್ರಿಯಿಂದ ಜಾರಿಯಾಗಿದೆ. ಈ ಹಿನ್ನೆಲೆ ಬೇಕಾಬಿಟ್ಟಿ ಓಡಾಟಕ್ಕೆ ಬ್ರೇಕ್​ ಹಾಕಲು ಪೊಲೀಸರು ಫುಲ್​ ಅಲರ್ಟ್​​ ಆಗಿದ್ದಾರೆ.


ಬೆಂಗಳೂರಿನ ನಾಗರಿಕರು ಕರ್ಫ್ಯೂಗೆ ಬದ್ಧರಾಗಿರಬೇಕು ಎಂದು ಪೊಲೀಸ್​ ಇಲಾಖೆ ಎಚ್ಚರಿಸಿದೆ. ಪೊಲೀಸ್ ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಿ, ರಾತ್ರಿ 10 ಗಂಟೆಯ ನಂತರ ವಾಹನಗಳನ್ನು ತಪಾಸಣೆ ಮಾಡಲಾಗುವುದು ಎಂದು ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಹೇಳಿದ್ದಾರೆ. ಡಿಸೆಂಬರ್ 28 ರಿಂದ ಜನವರಿ 7 ರವರೆಗೆ ರಾತ್ರಿ 10 ರಿಂದ ಬೆಳಿಗ್ಗೆ 5 ರವರೆಗೆ ರಾತ್ರಿ ಕರ್ಫ್ಯೂ ಜಾರಿಯಲ್ಲಿರುತ್ತದೆ.


ಯಾರಿಗೆಲ್ಲಾ ರಾತ್ರಿ ಓಡಾಟಕ್ಕೆ ವಿನಾಯ್ತಿ?

ರಾತ್ರಿ ಕೆಲಸ ಮಾಡುವವರು, ಅಗತ್ಯ ಸೇವೆಗಳಲ್ಲಿ ಕೆಲಸ ಮಾಡುವವರು ಮತ್ತು ತುರ್ತು ವ್ಯವಹಾರದ ಮೇಲೆ ಪ್ರಯಾಣಿಸುವವರಿಗೆ ಮಾತ್ರ ಅನುಮತಿಸಲಾಗುವುದು. ಇವುಗಳನ್ನು ಹೊರತಾಗಿ, ಅಡ್ಡಾದಿಡ್ಡಿಯಾಗಿ ಓಡಾಡುವವರು ಯಾರೇ ಆದರೂ ಬಂಧಿಸಲಾಗುವುದು ಎಂದು ಬೆಂಗಳೂರು ಪೊಲೀಸ್​ ಕಮಿಷನರ್​ ಕಮಲ್ ಪಂತ್ ಹೇಳಿದ್ದಾರೆ. ರಾತ್ರಿ ಕರ್ಫ್ಯೂ ಕಟ್ಟುನಿಟ್ಟಿನ ಜಾರಿಗೆ ನಗರದ ಪ್ರಮುಖ ಫ್ಲೈಓವರ್‌ಗಳನ್ನು ಮುಚ್ಚಲಾಗುವುದು ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ. ಡಿಸೆಂಬರ್ 28 ರಿಂದ, ನಾವು ನಗರದಲ್ಲಿ ಹಲವಾರು ಮೇಲ್ಸೇತುವೆಗಳನ್ನು ಮುಚ್ಚುತ್ತೇವೆ. ಎಲ್ಲಾ ಚಟುವಟಿಕೆಗಳನ್ನು ರಾತ್ರಿ 10 ಗಂಟೆಗೆ ಮುಚ್ಚಬೇಕು. ಕರ್ಫ್ಯೂ ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಬೆಂಗಳೂರು ಪೊಲೀಸ್ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.


ಓಮಿಕ್ರಾನ್ ರೂಪಾಂತರದ ಭಯದ ನಡುವೆ ರಾಜ್ಯದಲ್ಲಿ ಹೊಸ ವರ್ಷಾಚರಣೆಗೆ ತೆರೆ ಎಳೆದ ರಾತ್ರಿ ಕರ್ಫ್ಯೂ ವಿಧಿಸಲಾಗಿದೆ. ಸರ್ಕಾರದ ಆದೇಶದಂತೆ ಬೆಂಗಳೂರಿನಲ್ಲಿ ರಾತ್ರಿ 10 ರಿಂದ ಬೆಳಗ್ಗೆ 5 ಗಂಟೆಯವರೆಗೆ ಕರ್ಫ್ಯೂ ಇರಲಿದೆ. ಪಬ್‌ಗಳು, ಕ್ಲಬ್‌ಗಳು ಮತ್ತು ಇತರ ವಾಣಿಜ್ಯ ಸಂಸ್ಥೆಗಳಲ್ಲಿ ಯಾವುದೇ ಚಟುವಟಿಕೆಗೆ ಅವಕಾಶವಿಲ್ಲ ಎಂದು ಕಮಿಷನರ್​​ ಹೇಳಿದರು.


ಬೇಕಾಬಿಟ್ಟಿ ರಸ್ತೆಗಿಳಿದ್ರೆ ಬೀಳುತ್ತೆ ಸೀರಿಯಸ್​ ಕೇಸ್

ಯಾರಾದರೂ ಕರ್ಫ್ಯೂ ಉಲ್ಲಂಘಿಸುವುದು ಕಂಡು ಬಂದಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ (ಎನ್‌ಡಿಎಂಎ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದು ಅವರು ಎಚ್ಚರಿಸಿದರು. ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಕೋರಮಂಗಲ ಮತ್ತು ಇಂದಿರಾನಗರದಲ್ಲಿ ರಾತ್ರಿ 10 ಗಂಟೆಯ ನಂತರ ವಾಹನಗಳು ಮತ್ತು ಜನರ ಓಡಾಟ ಇರುವುದಿಲ್ಲ ಎಂದು ಅವರು ಒತ್ತಿ ಹೇಳಿದರು. ಹೊಸ ವರ್ಷದ ಮುನ್ನಾದಿನದಂದು ಕರ್ಫ್ಯೂ ಜಾರಿಗೊಳಿಸಲು ಪೊಲೀಸರು ಹೆಚ್ಚುವರಿ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ. ನಡೆಯುತ್ತಿರುವ ಹೆಚ್ಚಿನ ಪಬ್‌ಗಳು ಮತ್ತು ರೆಸ್ಟೋರೆಂಟ್‌ಗಳು ಈ ಪ್ರದೇಶಗಳಲ್ಲಿವೆ. ಬೆಂಗಳೂರಿನ ಜನರು ಸಾಂಪ್ರದಾಯಿಕವಾಗಿ ಹೊಸ ವರ್ಷವನ್ನು ಎಂಜಿ ರಸ್ತೆ ಮತ್ತು ಬ್ರಿಗೇಡ್ ರಸ್ತೆಯಲ್ಲಿ ಆಚರಿಸುತ್ತಾರೆ. ಸಂಭ್ರಮಾಚರಣೆಗೆ ಅನುವು ಮಾಡಿಕೊಡಲು ವಾಹನ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಆದರೆ ಓಮಿಕ್ರಾನ್​​ ಭೀತಿಯಿಂದ ನ್ಯೂ ಇಯರ್​ ಸೆಲೆಬ್ರೆಷನ್​ಗೆ ಅವಕಾಶ ಕೊಟ್ಟಿಲ್ಲ.


ಈ ವರ್ಷ ಸಾಕಷ್ಟು ಕಡೆಗಳಲ್ಲಿ ಸಿಸಿಟಿವಿ ಅಳವಡಿಸಲಾಗುವುದು. ತುರ್ತು ಪರಿಸ್ಥಿತಿಯಲ್ಲಿ ಹೊರಗೆ ಹೋಗುವವರು ಪುರಾವೆ ತೋರಿಸಬೇಕು, ಪ್ರಯಾಣ ಮಾಡುವವರು ಟಿಕೆಟ್ ತೋರಿಸಬೇಕು ಮತ್ತು ಕೆಲಸಕ್ಕೆ ಹೋಗುವವರು ತಮ್ಮ ಗುರುತಿನ ಚೀಟಿಯನ್ನು ತೋರಿಸಬೇಕು ಎಂದು ಕಮಲ್ ಪಂತ್ ಹೇಳಿದರು.
Previous Post Next Post