ಎಸ್ಸೆಸ್ಸೆಲ್ಸಿ (SSLC) ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿ: ಪಠ್ಯಕ್ರಮದಲ್ಲಿ ಶೇ.20ರಷ್ಟು ಕಡಿತ, ಈ ಪಾಠಗಳು ಇರೋದಿಲ್ಲ
ಬೆಂಗಳೂರು : 2021-22 ನೇ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿ (SSLC)ಯ ಶೇ. 20 ರಷ್ಟು ಪಠ್ಯ ಕಡಿತಗೊಳಿಸಿ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ (DSERT) ಆದೇಶ ಹೊರಡಿಸಿದೆ.
ಕೋವಿಡ್ ಹಿನ್ನೆಲೆಯಲ್ಲಿ ಎಸ್‌ಎಸ್‌ಎಲ್ ಸಿ ವಿದ್ಯಾರ್ಥಿಗಳಿಗೆ 2021-22 ನೇ ಸಾಲಿಗೆ ಪರೀಕ್ಷೆಗೆ ಪರಿಗಣಿಸಬಹುದಾದ ಮತ್ತು ಪರಿಗಣಿಸಬಾರದ ಪಠ್ಯಗಳ ಪಟ್ಟಿಯನ್ನು ಡಿಎಸ್ ಇಆರ್ ಟಿ ಬಿಡುಗಡೆ ಮಾಡಿದೆ.
ಸರ್ಕಾರ ಈ ಹಿಂದೆ ಆದೇಶಿಸಿದ್ದಂತೆ ಶೇ. 20 ರಷ್ಟು ಪಠ್ಯ ಕಡಿಗೊಳಿಸಲಾಗಿದ್ದು, ಶಿಕ್ಷಕರು ವಿದ್ಯಾರ್ಥಿಗಳಿಗೆ ಬೋಧನೆ ಮಾಡಬೇಕಾದ ಉಳಿದ ಶೇ.80 ರಷ್ಟು ಪಠ್ಯಗಳ ಬಗ್ಗೆ ವಿವರಗಳನ್ನು ಪ್ರಕಟಿಸಿದೆ. ಕಡಿತ ಮಾಡಿರುವ ಪಠ್ಯದ ಮಾಹಿತಿಯನ್ನು ಇಲಾಖೆಯ ವೆಬ್ ಸೈಟ್ http://dsert.kar.nic.in ಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದು.
ಪಠ್ಯ ಕಡಿತ ಮಾಡಿರುವ ವಿವರ
ಕನ್ನಡ -8 ನೇ ಅಧ್ಯಾಯ ಸುಕುಮಾರ ಸ್ವಾಮಿ ಕತೆ ಹಾಗೂ ಕೆಮ್ಮನೆ ಮೀಸೆವೊತ್ತೋನೆ ಪದ್ಯವನ್ನು ಬೋಧನೆಯಿಂದ ಕೈಬಿಡಲಾಗಿದೆ.
ಇಂಗ್ಲಿಷ್- ಡಿಸ್ಕವರಿ, ಸೈನ್ಸ್ ಆಯಂಡ್ ಹೋಪ್ ಆಫ್ ಸರ್ವೈವಲ್, ದಿಬರ್ಡ್ ಆಫ್ ಹ್ಯಾಪಿನೆಸ್ ಪಾಠಗಳು ಹಾಗೂ ಬ್ಯಾಲೆಡ್ ಆಫ್ ದಿ ಟೆಂಪೆಸ್ಟ್, ಆಫ್ ಟು ಔಟರ್ ಸ್ಪೇಸ್, ಟುಮಾರೋ ಮಾರ್ನಿಂಗ್ ಪದ್ಯಗಳನ್ನು ಕಡಿತಗೊಳಿಸಲಾಗಿದೆ.
ಹಿಂದಿ- ದುನಿಯಾ ಮೆ ಪಹಲಾ ಮಕ್ಕಾನ್, ರೋಬೋಟ್ ಹಾಗೂ ಬಾಲ್-ಶಕಿತ್ ಪಠ್ಯ ಕಡಿತಗೊಳಿಸಲಾಗಿದೆ.
ವಿಜ್ಞಾನ- 3 ನೇ ಅಧ್ಯಾಯ ಲೋಹಗಳು ಮತ್ತು ಅಲೋಹಗಳು, 4 ನೇ ಅಧ್ಯಾಯ ಕಾರ್ಬನ್ ಮತ್ತು ಅದರ ಸಂಯುಕ್ತಗಳು, 8 ನೇ ಅಧ್ಯಾಯ ಜೀವಿಗಳೂ ಹೇಗೆಸಂತಾನೋತ್ಪತ್ತಿ ನಡೆಸುತ್ತವೆ. ಮಾನವನ ಕಣ್ಣು ಮತ್ತು ವರ್ಣಮಯ ಜಗತ್ತು ಹಾಗೂ ನೈಸರ್ಗಿಕ ಸಂಪನ್ಮೂಲಗಳ ಸುಸ್ಥಿರ ನಿರ್ವಹಣೆ ಪಾಠಗಳನ್ನು ಕಡಿತಗೊಳಿಸಲಾಗಿದೆ.
ಸಮಾಜ ವಿಜ್ಞಾನ- 10 ನೇ ಅಧ್ಯಾಯ 20 ನೇ ಶತಮಾನದ ರಾಜಕೀಯ ಆಯಾಮಗಳು, ರಾಜ್ಯಶಾಸ್ತ್ರದ 5 ನೇ ಅಧ್ಯಾಯ ಜಾಗತಿಕ ಸಂಸ್ಥೆಗಳು, ಸಮಾಜಶಾಸ್ತ್ರದ 4 ನೇ ಅಧ್ಯಾಯ ಸಾಮಾಜಿಕ ಸಮಸ್ಯೆಗಳು ಎಂಬ ಪಾಠವನ್ನು ಕಡಿತಗೊಳಿಸಲಾಗಿದೆ.
ಗಣಿತ - 8 ನೇ ಅಧ್ಯಾಯ ವಾಸ್ತವ ಸಂಖ್ಯೆಗಳು, 9 ನೇ ಅಧ್ಯಾಯ ಬಹು ಪದೋಕ್ತಿಗಳು, 14 ನೇ ಅಧ್ಯಾಯ ಸಂಭವನೀಯತೆ ಪಾಠವನ್ನು ಕಡಿತಗೊಳಿಸಲಾಗಿದೆ.