ರಾಜ್ಯಕ್ಕೆ ಮತ್ತೆ ಕೊರೊನ ಕಂಟಕ: ಬೆಂಗಳೂರಿನಲ್ಲಿ ಕೊರೊನ ಸ್ಪೋಟ: ರಾಜ್ಯದಲ್ಲಿ ಇಂದು 1,033 ಪಾಸಿಟಿವ್

ರಾಜ್ಯಕ್ಕೆ ಮತ್ತೆ ಕೊರೊನ ಕಂಟಕ: ಬೆಂಗಳೂರಿನಲ್ಲಿ ಕೊರೊನ ಸ್ಪೋಟ: ರಾಜ್ಯದಲ್ಲಿ ಇಂದು 1,033 ಪಾಸಿಟಿವ್ 


ಬೆಂಗಳೂರು : ಹೊಸವರ್ಷಾರಂಭಕ್ಕೆ ಕೋವಿಡ್ ಮತ್ತು ರೂಪಾಂತರಿ ಒಮಿ ಕ್ರಾನ್ ಆತಂಕ ಎದುರಾಗಿದ್ದು, ಜನವರಿ ಮೊದಲ ದಿನ ರಾಜ್ಯದಲ್ಲಿ 1,033 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿವೆ.


ರಾಜಧಾನಿ ಬೆಂಗಳೂರಿನಲ್ಲಿ ಇಂದು ಶನಿವಾರ 810 ಪ್ರಕರಣಗಳು ವರದಿಯಾಗಿದ್ದು, ರಾಜ್ಯದಲ್ಲಿ ಐದು ಹೊಸ ಕೋವಿಡ್ ಸಾವುಗಳು ವರದಿಯಾಗಿವೆ. ಇದೆ ವೇಳೆ 354 ಮಂದಿಯ ಚೇತರಿಕೆಗಳು ದಾಖಲಾಗಿವೆ.


ದಕ್ಷಿಣ ಕನ್ನಡದಲ್ಲಿ 48 ,ಮೈಸೂರು 29 ಉಡುಪಿ 28, ಮಂಡ್ಯದಲ್ಲಿ 23 ಪ್ರಕರಣಗಳು ದಾಖಲಾಗಿದೆ. ಹೊಸ ವರ್ಷದ ಮುನ್ನಾದಿನದಂದು ಶುಕ್ರವಾರ ಸಂಜೆ 6 ಗಂಟೆಯಿಂದ ಸಾರ್ವಜನಿಕರಿಗೆ ಎಂಜಿ ರಸ್ತೆ, ಚರ್ಚ್ ಸ್ಟ್ರೀಟ್, ಬ್ರಿಗೇಡ್ ರಸ್ತೆ, ಇಂದಿರಾನಗರ, ಕೋರಮಂಗಲ ಸೇರಿದಂತೆ ಎಲ್ಲಾ ಪ್ರಮುಖ ರಸ್ತೆಗಳನ್ನು ಮುಚ್ಚಿ ಬೆಂಗಳೂರು ನಗರ ಸಂಚಾರ ಪೊಲೀಸರು ನಿರ್ಬಂಧ ಹೇರಿದ್ದರು.


ಸಿಲಿಕಾನ್ ಸಿಟಿಯಲ್ಲಿ ಕೊರೊನ ಸ್ಪೋಟ, ನಾಳೆ ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಮಹತ್ವದ ಸಭೆ 



ಬೆಂಗಳೂರು : ರಾಜ್ಯದಲ್ಲಿ ಮತ್ತೆ ಕೊರೊನಾ ಸೋಂಕಿನ ಪ್ರಕರಣಗಳು ಏರಿಕೆಯಾಗುತ್ತಿದ್ದು, ರಾಜ್ಯದ ಜನತೆಯಲ್ಲಿ ಆತಂಕ ಮೂಡಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲೂ ಕೊರೊನಾ ಸ್ಪೋಟವಾಗಿದ್ದು, ಮತ್ತೆ ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಆತಂಕ ಶುರುವಾಗಿದೆ.


ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ನಾಳೆ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದೆ. ಸಿಎಂ ಬೊಮ್ಮಾಯಿ ಬೆಂಗಳೂರು ಭಾಗದ ಸಚಿವರ ಜೊತೆ ಮಹತ್ವದ ಸಭೆ ನಡೆಸಲಿದ್ದು, ಬೆಂಗಳೂರಿನಲ್ಲಿ ಮತ್ತೆ ಟಫ್ ರೂಲ್ಸ್ ಜಾರಿಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.


ಇನ್ನೂ, ಹೊಸ ವರ್ಷ ದಂದೇ ರಾಜ್ಯದ ಜನತೆಗೆ ಬಿಗ್‌ ಶಾಕಿಂಗ್‌ ಸುದ್ದಿ ಸಿಕ್ಕಿದೆ. ಹೌದು, 1033 ಮಂದಿಗೆ ಸೋಂಕು ಇರುವುದು ಪತ್ತೆಯಾಗಿದ್ದು, ಈ ಮೂಲಕ ಜನತೆಯಲ್ಲಿ ಮತ್ತೆ ಆತಂಕವನ್ನು ಹೆಚ್ಚಳ ಮಾಡಿದೆ. ಇಂದು ಒಟ್ಟು 5 ಮಂದಿ ಸಾವನ್ನಪ್ಪಿದ್ದಾರೆ ಅಂತ ರಾಜ್ಯ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದೆ. ಇನ್ನೂ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಳೆದ 24 ಗಂಟೆಯಲ್ಲಿ 810 ಜನರಿಗೆ ಕರೋನ ಸೋಂಕು ಇಬ್ಬರು ಸಾವನ್ನಪ್ಪಿದ್ದು, ಇದೇ ವೇಳೆ 218 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದು, 7876 ಸಕ್ರಿಯ ಪ್ರಕರಣಗಳಿವೆ ಅಂತ ಹೇಳಿದೆ.

أحدث أقدم