ಕೊವಿಡ್: ರಾಜ್ಯದಲ್ಲಿ ಇಂದು 1290 ಪಾಸಿಟಿವ್, ಬೆಂಗಳೂರಿನಲ್ಲಿ 1041

ಕೊವಿಡ್: ರಾಜ್ಯದಲ್ಲಿ ಇಂದು 1290 ಪಾಸಿಟಿವ್, ಬೆಂಗಳೂರಿನಲ್ಲಿ  1041


ರಾಜ್ಯದಲ್ಲಿ ಒಂದು ದಿನದಲ್ಲಿ 1290 ಕೊರೊನಾ ಸೋಂಕು ಪ್ರಕರಣಗಳು ವರದಿಯಾಗಿದ್ದು, ಇದರಿಂದ ಸತತ ಮೂರನೇ ದಿನ ಸಾವಿರಕ್ಕೂ ಅಧಿಕ ಸೋಂಕು ಪ್ರಕರಣಗಳು ವರದಿಯಾದಂತಾಗಿದೆ.


ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೋಮವಾರ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ ರಾಜ್ಯದಲ್ಲಿ ಒಂದೇ ದಿನದಲ್ಲಿ 5 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಸ್ಫೋಟಗೊಂಡಿದ್ದು, ಒಂದೇ ದಿನದಲ್ಲಿ 1041 ಪ್ರಕರಣಗಳು ದೃಢಪಟ್ಟಿದೆ. ಈ ಮೂಲಕ ರೆಡ್ ಅಲರ್ಟ್ ಆಗಿದೆ.Previous Post Next Post