ರಾಜ್ಯಾದ್ಯಂತ ಕೊವಿಡ್ ಪಾಸಿಟಿವ್ ಪ್ರಕರಣಗಳಲ್ಲಿ ಇಳಿಕೆ, ಇಂದಿನ ಪಾಸಿಟಿವಿಟಿ ದರ ಶೇ.19.37, 69,902ಮಂದಿ ಗುಣಮುಖರು
ಬೆಂಗಳೂರು: ರಾಜ್ಯದಲ್ಲಿ ಶನಿವಾರ 33,337 ಮಂದಿ ಕೊರೊನಾ ಸೋಂಕಿಗೆ ತುತ್ತಾಗಿದ್ದು, ವಿವಿಧ ಜಿಲ್ಲೆಯಲ್ಲಿ ಸೋಂಕಿನ ಪ್ರಮಾಣ ಇಳಿಕೆಯಾಗಿದೆ. ಆ ಮೂಲಕ ರಾಜ್ಯದ ಒಟ್ಟು ಸೋಂಕಿನ ಪಾಸಿಟಿವಿಟಿ ದರ ಶೇ.19.37ಗೆ ಇಳಿಕೆಯಾಗಿದೆ. 69,902ಮಂದಿ ಗುಣಮುಖರಾಗಿದ್ದಾರೆ.
ಬೆಂಗಳೂರು ನಗರ 16586, ಮೈಸೂರು 2431,ಧಾರವಾಡ 1278, ತುಮಕೂರು 1192, ಹಾಸನ 1039, ಮಂಡ್ಯ 986, ಬೆಳಗಾವಿ 798, ಶಿವಮೊಗ್ಗ 674, ಉತ್ತರ ಕನ್ನಡ 665, ದಕ್ಷಿಣ ಕನ್ನಡ 627,ಬಳ್ಳಾರಿ 602, ಉಡುಪಿ 579, ಕಲಬುರಗಿ 577, ಚಾಮರಾಜನಗರ 573, ಕೋಲಾರ 567, ಕೊಡಗು 540, ಹಾವೇರಿ 460, ಬಾಗಲಕೋಟೆ 394, ಬೆಂಗಳೂರು ಗ್ರಾಮಾಂತರ 367,ಚಿತ್ರದುರ್ಗ 309, ಚಿಕ್ಕಬಳ್ಳಾಪುರ 307, ಚಿಕ್ಕಮಗಳೂರು 292, ಕೊಪ್ಪಳ 269, ರಾಮನಗರ 237, ದಾವಣಗೆರೆ 216, ಬೀದರ್ 209, ಗದಗ 171, ವಿಜಯಪುರ 139, ರಾಯಚೂರು 137, ಯಾದಗಿರಿ ಜಿಲ್ಲೆಯ 116 ಮಂದಿ ಸೋಂಕಿಗೆ ತುತ್ತಾಗಿದ್ದಾರೆ.