ಕರ್ನಾಟಕ ರಾಜ್ಯ ಎಸ್ಸೆಸ್ಸೆಫ್: ಶಿವಮೊಗ್ಗದಲ್ಲಿ ಇಂದು 'ಅಲ್ ವಿಫಾಕ್-22' ದಅವಾ ಮೀಟ್
ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್ ದಅವಾ ವಿಭಾಗದ ವತಿಯಿಂದ ಅಲ್ ವಿಫಾಕ್ ದಅವಾ ಮೀಟ್ ಕಾರ್ಯಕ್ರಮವು ಶಿವಮೊಗ್ಗ ಮರ್ಕಝು ಸ್ಸಆದಾಲ್ಲಿ ಇಂದು (ಜನವರಿ 13 ರಂದು) ಗುರುವಾರ ಮಧ್ಯಾಹ್ನ 1ಗಂಟೆಗೆ ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಅಬ್ದುಲ್ಲತೀಫ್ ಸಅದಿ ಅವರ ನೇತ್ರತ್ವದಲ್ಲಿ ನಡೆಯಲಿದೆ.
ಎಸ್ ವೈಎಸ್ ನಾಯಕ ಸೈಯದ್ ಯೂಸುಫ್ ಅಲ್ ಬುಖಾರಿ ಮಾಳಿಕೊಪ್ಪ ದುವಾ ನೆರವೇರಿಸುವರು. ಎಸ್ಸೆಸ್ಸೆಫ್ ರಾಜ್ಯ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮರಿಕ್ಕಳ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಚರ್ಚಾ ಗೋಷ್ಠಿ ನಡೆಯಲಿದ್ದು, ರಾಜ್ಯದ ಎಲ್ಲಾ ಜಿಲ್ಲೆಗಳ ಹಾಗು ಡಿವಿಷನ್ ಗಳ ದಅವಾ ಕಾರ್ಯದರ್ಶಿಗಳು ಮತ್ತು ಕನ್ವೀನರ್ ಗಳು ಭಾಗವಹಿಸಲಿದ್ದಾರೆ ಎಂದು ಎಸ್ಸೆಸ್ಸೆಫ್ ಪ್ರಕಟಣೆಯಲ್ಲಿ ತಿಳಿಸಿದೆ.