ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 4,246 ಪಾಸಿಟಿವ್, ಬೆಂಗಳೂರಿನಲ್ಲಿ 3,605 ಕೇಸ್
ಬೆಂಗಳೂರು : ರಾಜ್ಯದಲ್ಲಿ 24 ಗಂಟೆಗಳಲ್ಲಿ ಕೋವಿಡ್ ಪ್ರಕರಣಗಳು ದ್ವಿಗುಣಗೊಂಡಿದ್ದು, ಬುಧವಾರ 4,246 ಪ್ರಕರಣಗಳು ದಾಖಲಾಗಿದ್ದು, . ಪೊಸಿಟಿವಿಟಿ ರೇಟ್ 3.33% ಕ್ಕೆ ಏರಿಕೆಯಾಗಿದೆ.
4,246 ಪ್ರಕರಣಗಳ ಪೈಕಿ ಬೆಂಗಳೂರಿನಲ್ಲಿ 3,605 ಹೊಸ ಪ್ರಕರಣಗಳು ದೃಢಪಟ್ಟಿವೆ. ಹೊಸ ಒಮಿಕ್ರಾನ್ ಪ್ರಕರಣಗಳು ಇಂದು ದೃಢಪಟ್ಟಿಲ್ಲ. ರಾಜ್ಯದಲ್ಲಿ ಇದುವರೆಗೆ 226 ಒಟ್ಟು ಒಮಿಕ್ರಾನ್ ಪ್ರಕರಣಗಳು ದೃಢಪಟ್ಟಿವೆ.
ಇಂದು ಕೋವಿಡ್ ಸೋಂಕಿಗೆ ಗುರಿಯಾಗಿದ್ದ ಬೆಂಗಳೂರಿನ ಇಬ್ಬರು ಮೃತಪಟ್ಟಿರುವುದಾಗಿ ಆರೋಗ್ಯ ಇಲಾಖೆ ತಿಳಿಸಿದೆ. ಇಂದು 1,27,328 ಮಂದಿಯ ಪರೀಕ್ಷೆ ಮಾಡಲಾಗಿದೆ.
ಇಂದು 3,605 ಹೊಸ ಪ್ರಕರಣಗಳೊಂದಿಗೆ ಬೆಂಗಳೂರಿನ ಸಕಾರಾತ್ಮಕತೆಯ ದರವು 6.45% ಕ್ಕೆ ಏರಿದೆ. ಕರ್ನಾಟಕದ ಶೇ.85ರಷ್ಟು ಪ್ರಕರಣಗಳು ಬೆಂಗಳೂರಿನಲ್ಲೇ ದೃಢಪಟ್ಟಿವೆ. 24 ಗಂಟೆಗಳಲ್ಲಿ ಪ್ರಕರಣಗಳು ದ್ವಿಗುಣಗೊಂಡಿದೆ.
ಮಾಸ್ಕ್ ಧರಿಸಿ ಮತ್ತು ಸುರಕ್ಷಿತವಾಗಿರಿ ಬೆಂಗಳೂರಿಗರೇ ಎಂದು ಸಚಿವ ಡಾ.ಸುಧಾಕರ್ ಟ್ವೀಟ್ ಮಾಡಿದ್ದಾರೆ.