ದೇಶಾದ್ಯಂತ ಕಳೆದ 24 ಗಂಟೆಯಲ್ಲಿ 58,097 ಪಾಸಿಟಿವ್ ಪ್ರಕರಣ
ಈ ಕುರಿತಂತೆ ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ಬಿಡುಗಡೆ ಮಾಡಿದ್ದು, ಕಳೆದ 24 ಗಂಟೆಗಳಲ್ಲಿ 58,097 ಜನರಿಗೆ ಕೋವಿಡ್ ಹೊಸದಾಗಿ ದೃಢಪಟ್ಟಿದೆ. ಇದರ ಜೊತೆಗೆ 15,389 ಮಂದಿ ಸೋಂಕಿತರು ಗುಣಮುಖಲಾಗಿದ್ದಾರೆ. ಅಲ್ಲದೇ ಕಳೆದ 24 ಗಂಟೆಯಲ್ಲಿ ಸೋಂಕಿತರಾದಂತ 534 ಸಾವನ್ನಪ್ಪಿರೋದಾಗಿ ತಿಳಿಸಿದೆ.
ಇನ್ನೂ ಇಂದಿನ ಕೊರೋನಾ ಪಾಸಿಟಿವ್ ಪ್ರಕರಣದಿಂದಾಗಿ ದೈನಂದಿನ ಧನಾತ್ಮಕತೆ ದರ (Daily positivity rate) ಶೇ.4.18%ಕ್ಕೆ ಏರಿಕೆಯಾಗಿದೆ. ಈಗ ಭಾರತದಲ್ಲಿ 2,14,004 ಸಕ್ರೀಯ ಕೊರೋನ ಪ್ರಕರಣಗಳಿದ್ದಾವೆ. ಇದುವರೆಗೆ 3,43,21,803 ಸೋಂಕಿತರು ಗುಣಮುಖರಾಗಿದ್ದಾರೆ. ಅಲ್ಲದೇ 4,82,551 ಮಂದಿ ಸೋಂಕಿತರು ಕಿಲ್ಲರ್ ಕೊರೋನಾಗೆ ಬಲಿಯಾಗಿದ್ದಾರೆ. ದೇಶದಲ್ಲಿ ಇಲ್ಲಿಯವರೆಗೆ 147.72 ಕೋಟಿ ಡೋಸ್ ಲಸಿಕೆಯನ್ನು ನೀಡಲಾಗಿದೆ.