2020 ಆಗಸ್ಟ್ ನಲ್ಲಿ ಸುಲ್ತಾನುಲ್ ಉಲಮಾ ಎ.ಪಿ.ಉಸ್ತಾದ್ ಉದ್ಘಾಟಿಸಿದ 'ಖಮರಿಯಾ' ಹದಿನೆಂಟು ತಿಂಗಳ ಕೋರ್ಸ್ ಆಗಿದ್ದು ಇದರಲ್ಲಿ ಖುರ್‌ಆನ್, ಹದೀಸ್, ಫಿಖ್‌ಹ್, ಅಖಾಇದ್, ತಸವ್ವುಫ್ ಹಾಗೂ ಕುಟುಂಬ ಜೀವನ, ಪೇರೆಂಟಿಂಗ್, ಸೈಕಾಲಜಿ, ಇತಿಹಾಸ ಮುಂತಾದ ಸಮಗ್ರ ಪಠ್ಯ ಕ್ರಮಗಳನ್ನು ಅಳವಡಿಸಿಕೊಳ್ಳಲಾಗಿದೆ. ಈ ವಿದ್ಯಾ ಕೇಂದ್ರಕ್ಕೆ ಪ್ರಿನ್ಸಿಪಾಲ್ ಸಈದಾ ಫಾತಿಮಾ ಅಲ್ ಮಾಹಿರಾ ನೇತೃತ್ವ ನೀಡುತ್ತಿದ್ದಾರೆ.
ಸಾಮಾನ್ಯ ಮಹಿಳೆಯರ ಖುರ್‌ಆನ್ ಪಾರಾಯಣವನ್ನು ಕ್ರಮಬದ್ಧಗೊಳಿಸುವುದಕ್ಕಾಗಿ ಸಮರ್ಥ ಟ್ರೈನರ್‌ಗಳನ್ನು ಸೃಷ್ಟಿಸಲು ಆರಂಭಿಸಿದ 'ಅಲ್ ಮುಜವ್ವಿದಾತ್ ತಜ್‌ವೀದ್ ಟ್ರೈನರ್ಸ್ ಕೋರ್ಸ್'ನ ಮೂಲಕ ಈಗಾಗಲೇ 23 ಮಹಿಳಾ ತರಬೇತುದಾರರು ಯಶಸ್ವಿಯಾಗಿದ್ದಾರೆ. ಪ್ರಸಿದ್ಧ ಖುರ್‌ಆನ್ ತರಬೇತುದಾರ ಖಾರಿ ಅಬ್ದುಲ್ ಜಲೀಲ್ ಇಂದಾದಿ ಕಣ್ಣೂರು ಅವರು ಸಂಸ್ಥೆಯ ಪ್ರಿನ್ಸಿಪಾಲ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಪದವಿ ಪ್ರದಾನ ಕಾರ್ಯಕ್ರಮಗಳಿಗೆ ಝೈನುಲ್ ಉಲಮಾ ಮಾಣಿ ಉಸ್ತಾದ್ ಹಾಗೂ ಉಜಿರೆ ಇಸ್ಮಾಯಿಲ್ ತಂಙಳ್ ನೇತೃತ್ವ ನೀಡಲಿದ್ದಾರೆ. ನಂತರ ನಡೆಯುವ ಮಹಿಳಾ ಸಮಾವೇಶದಲ್ಲಿ ಇತ್ತೀಚೆಗೆ ಮಂಗಳೂರು ವಿಶ್ವವಿದ್ಯಾನಿಲಯದಿಂದ ಕೆಮಿಸ್ಟ್ರಿಯಲ್ಲಿ ಡಾಕ್ಟರೇಟ್ ಪದವಿ ಪಡೆದ, ವಿಮೆನ್ಸ್ ಇಸ್ಲಾಮಿಕ್ ಎಜುಕೇಶನ್ ಕೌನ್ಸಿಲ್‌ನ ಸಹ ಸಂಸ್ಥೆಯಾದ 'ಬುಕ್ ಮಿಷನ್'ನ ನಿರ್ದೇಶಕಿ, ಉಜಿರೆ ಎಸ್. ಡಿ.ಎಂ. ಕಾಲೇಜಿನ ಕೆಮಿಸ್ಟ್ರಿ ಪಿಜಿ ವಿಭಾಗದ ಪ್ರೊ., ಡಾ. ನಫೀಸತ್ ಪಿ.ಚಾರ್ಮಾಡಿ ಅವರಿಗೆ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ. ಮಂಗಳೂರಿನ 'ಮೋಟಿವಿಟಲ್ಸ್'ನ ಆಡಳಿತ ನಿರ್ದೇಶಕಿ ನಸ್ರೀನ್ ಬಿನ್ತ್ ಅಹ್ಮದ್ ಬಾವ ಸನ್ಮಾನಿಸಲಿದ್ದು ಕಾಟಿಪಳ್ಳ ಮಿಸ್ಬಾಹ್ ಕಾಲೇಜಿನ ಪ್ರಿನ್ಸಿಪಾಲ್ ಝಾಹಿದಾ ಜಲೀಲ್ ಅಭಿನಂದನಾ ಭಾಷಣ ಮಾಡಲಿದ್ದಾರೆ. ಕಾರ್ಯಕ್ರಮವು ಖಾಸಗಿಯಾಗಿದ್ದು ಸಾರ್ವಜನಿಕರಿಗೆ ಪ್ರವೇಶ ಇರುವುದಿಲ್ಲ ಎಂದು ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.