ಇಂದಿನಿಂದ ಕರ್ನಾಟಕ ಅನ್ಲಾಕ್: ನೈಟ್ ಕರ್ಫ್ಯೂ ರದ್ದು, ಬೆಂಗಳೂರಿನಲ್ಲಿ ಶಾಲಾ ಕಾಲೇಜ್ ಆರಂಭ, ಹೋಟೆಲ್ ರೆಸ್ಟೋರೆಂಟ್ ಗಳಲ್ಲಿನ ಶೇ.50ರ ಮಿತಿ ವಾಪಸ್

ಇಂದಿನಿಂದ ಕರ್ನಾಟಕ ಅನ್ಲಾಕ್: ನೈಟ್ ಕರ್ಫ್ಯೂ ರದ್ದು, ಬೆಂಗಳೂರಿನಲ್ಲಿ ಶಾಲಾ ಕಾಲೇಜ್ ಆರಂಭ, ಹೋಟೆಲ್ ರೆಸ್ಟೋರೆಂಟ್ ಗಳಲ್ಲಿನ ಶೇ.50ರ ಮಿತಿ ವಾಪಸ್


ಬೆಂಗಳೂರು: ಕೊರೋನಾ ನಿಯಂತ್ರಣಕ್ಕಾಗಿ ರಾಜ್ಯಾಧ್ಯಂತ ಜಾರಿಗೊಳಿಸಲಾಗಿದ್ದಂತ ನೈಟ್ ಕರ್ಪ್ಯೂವನ್ನು ರದ್ದುಪಡಿಸಲಾಗಿದ್ದು, (ಡಿ.31) ಇಂದಿನಿಂದ ಜನರಿಗೆ ಬಿಗ್ ರಿಲೀಫ್ ಸಿಗಲಿದೆ.

ಹೌದು. ಕೊರೋನಾ ನಿಯಂತ್ರಣಕ್ಕಾಗಿ ರಾಜ್ಯಾಧ್ಯಂತ ಜಾರಿಗೊಳಿಸಲಾಗಿದ್ದಂತ ನೈಟ್ ಕರ್ಪ್ಯೂವನ್ನು ರದ್ದುಪಡಿಸಲಾಗಿದೆ. ಇದಲ್ಲದೇ ಹೋಟೆಲ್, ರೆಸ್ಟೋರೆಂಟ್, ಪಬ್ ಗಳಲ್ಲಿನ ಶೇ.50ರ ಮಿತಿಯನ್ನು ವಾಪಾಸ್ ಪಡೆಯಲಾಗಿದೆ. ಆದ್ರೇ ಸಿನಿಮಾ ಮಂದಿರಗಳಲ್ಲಿ ಶೇ.50ರ ಮಿತಿಯನ್ನು ಮುಂದುವರೆಸಲಾಗಿದೆ. ಕೊರೊನಾ ಸೋಂಕು ಕಡಿಮೆಯಾದ ಹಿನ್ನೆಲೆ ಹಲವು ವಲಯಗಳಿಗೆ ವಿಧಿಸಿದ್ದ ನಿರ್ಬಂಧಗಳು ಅನ್ ಲಾಕ್ ಆಗುತ್ತಿವೆ. ಇಂದಿನಿಂದ ಕರುನಾಡು ಪುಲ್ ಪ್ರೀಯಾಗಿರಲಿದೆ.


ಕರ್ನಾಟಕದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿರೋ ಕಾರಣದಿಂದಾಗಿ ಜನವರಿ 31ರಿಂದ ಜಾರಿಗೆ ಬರುವಂತೆ ರಾಜ್ಯಾಧ್ಯಂತ ನೈಟ್ ಕರ್ಪ್ಯೂ ಅನ್ನು ರದ್ದು ಪಡಿಸಲಾಗಿದೆ . ಇನ್ನೂ ಮುಚ್ಚಿದ ಸ್ಥಳಗಳಲ್ಲಿ 200 ಜನರಿಗೆ ಮದುವೆಗೆ ಅವಕಾಶ, ಓಪನ್ ಸ್ಥಳದಲ್ಲಿ 300ಕ್ಕೆ ಅವಕಾಶ ನೀಡಲಾಗಿದೆ. ಕಚೇರಿ ಕೆಲಸದ ಶೇ.50ರ ಮಿತಿಯನ್ನು ವಾಪಾಸ್ ಪಡೆಯಲಾಗಿದೆ. ಧಾರ್ಮಿಕ ಸ್ಥಳಗಳಲ್ಲಿ ಸೇವೆ ಬಂದ್ ಆಗಿತ್ತು. ಆ ಸೇವೆಗಳನ್ನು ಪುನರಾರಂಭಿಸೋದಕ್ಕೆ ಅವಕಾಶ ನೀಡಲಾಗಿದೆ. ಅರ್ಚನೆ, ಮಂಗಳಾರತಿಗೆ ಅವಕಾಶ ನೀಡಲಾಗಿದೆ. ಶೇ.50ರ ಜನರ ಮುತಿ ಮುಂದುವರೆಯಲಿದೆ .


ಜಾತ್ರೆ, Rally, ಧರಣಿ, ಪ್ರತಿಭಟನೆ ಸೇರಿದಂತೆ ಹೆಚ್ಚು ಜನರು ಸೇರುವಂತ ಕಾರ್ಯಕ್ರಮಗಳನ್ನು ನಿರ್ಬಂಧಿಸಲಾಗಿದೆ. ಜಿಮ್ ಗಳಿಗೆ ಶೇ.50ರ ಮಿತಿಯನ್ನು ನಿಗದಿ ಪಡಿಸಲಾಗಿದೆ. ಸ್ಪೋರ್ಟ್ಸ್ ಸ್ಟೇಡಿಯಂಗಳ ಮಿತಿ ಶೇ.50ರಷ್ಟು ಮುಂದುವರೆಸಲಾಗಿದೆ. ಮಹಾರಾಷ್ಟ್ರಾ, ಕೇರಳ, ಗೋವಾದಿಂದ ಬರೋರಿಗೆ ಕೋವಿಡ್ ಪರೀಕ್ಷೆ ಕಡ್ಡಾಯಗೊಳಿಸಲಾಗಿದೆ ಎಂದು ಸರ್ಕಾರ ಆದೇಶ ಹೊರಡಿಸಿದೆ.

أحدث أقدم