ಕೊವಿಡ್: ರಾಜ್ಯದಲ್ಲಿ ಇಂದು 5031 ಪಾಸಿಟಿವ್ ಪತ್ತೆ, ಬೆಂಗಳೂರಿನಲ್ಲಿ 4,324 ಕೇಸ್

ಕೊವಿಡ್: ರಾಜ್ಯದಲ್ಲಿ ಇಂದು 5031 ಪಾಸಿಟಿವ್ ಪತ್ತೆ, ಬೆಂಗಳೂರಿನಲ್ಲಿ 4,324 ಕೇಸ್


ಬೆಂಗಳೂರು : ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು 4 ಸಾವಿರ ದಾಟುತ್ತಿದ್ದಂತೆ ಬೆಂಗಳೂರಿನಲ್ಲಿ ಪಾಸಿಟಿವಿಟಿ ಪ್ರಮಾಣವು 7.5% ಕ್ಕೆ ಏರಿಕೆಯಾಗಿದೆ.ಸೋಂಕಿನಿಂದ ಬೆಂಗಳೂರಿನಲ್ಲಿ ಒಂದು ಸಾವು ಸಂಭವಿಸಿದೆ.


ರಾಜ್ಯದಲ್ಲಿ ಗುರುವಾರ 5,031 ಹೊಸ ಪ್ರಕರಣಗಳು ದಾಖಲಾಗಿವೆ. ರಾಜಧಾನಿ ಬೆಂಗಳೂರಿನಲ್ಲಿ 4,324 ಹೊಸ ಪ್ರಕರಣಗಳು ದ್ರಢಪಟ್ಟಿವೆ.


ರಾಜ್ಯದಲ್ಲಿ ಪಾಸಿಟಿವಿಟಿ ದರ 3.95% ಇದ್ದು, ಇಂದು ಹೊಸ ಒಮಿಕ್ರಾನ್ ಪ್ರಕರಣಗಳು ಕಂಡುಬಂದಿಲ್ಲ.ರಾಜ್ಯದಲ್ಲಿ ಇದುವರೆಗೆ ಒಟ್ಟು 226 ಒಮಿಕ್ರಾನ್ ಪ್ರಕರಣಗಳು ಕಂಡು ಬಂದಿವೆ. ರಾಜ್ಯದೆಲ್ಲೆಡೆ ಇಂದು 1,27,194 ಜನರನ್ನು ಪರೀಕ್ಷೆಗೊಳಪಡಿಸಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

Previous Post Next Post