ಸಚಿವರ ಸಲಹೆಗೆ ಸಿಎಂ ಸಹಮತ, ರಾಜ್ಯದಲ್ಲಿ ವಾರಾಂತ್ಯ ಕರ್ಫ್ಯೂ ರದ್ದು

ಸಚಿವರ ಸಲಹೆಗೆ ಸಿಎಂ ಸಹಮತ, ರಾಜ್ಯದಲ್ಲಿ ವಾರಾಂತ್ಯ ಕರ್ಫ್ಯೂ ರದ್ದು

ಬೆಂಗಳೂರು: ಸರ್ಕಾರದ ಸಚಿವರು, ಕೇಂದ್ರ ಸಚಿವರು ಮತ್ತು ಸಾರ್ಜನಿಕರ ತೀವ್ರ ವಿರೋಧದ ಬಳಿಕ ರಾಜ್ಯ ಸರ್ಕಾರ ಕೊನೆಗೂ ವಾರಾಂತ್ಯ ಕರ್ಫ್ಯೂವನ್ನು ರದ್ದುಪಡಿಸಿದೆ.


ಕಳೆದರೆಡು ವಾರ ರಾಜ್ಯ ಸರ್ಕಾರ ಕೋವಿಡ್-19 ಮೂರನೇ ಅಲೆಯನ್ನು ತಡೆಯಲು ವೀಕೆಂಡ್ ಕರ್ಫ್ಯೂ ಹಾಗೂ ರಾತ್ರಿ ಕರ್ಫ್ಯೂ ಜಾರಿಯಲ್ಲಿತ್ತು.


ಶುಕ್ರವಾರ ಮಧ್ಯಾಹ್ನ ನಡೆದ ಮಹತ್ವದ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದ್ದು, ಇನ್ನು ಮುಂದೆ ವೀಕೆಂಡ್ ಕರ್ಫ್ಯೂ ಹಾಗೂ ಲಾಕ್ ಡೌನ್ ಮಾಡುವುದಿಲ್ಲ, ಮತ್ತು ನೈಟ್ ಕರ್ಫ್ಯೂ ಮುಂದುವರಿಯಲಿದೆ ಎಂಬ ಸರ್ಕಾರ ಸ್ಪಷ್ಪಪಡಿಸಿದೆ. 


ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಮಹತ್ವದ ಕೊರೋನಾ ನಿಯಂತ್ರಣ ಸಭೆಯನ್ನು ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ನಡೆಸಲಾಯಿತು. ಈ ಸಭೆಯಲ್ಲಿ ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಸದಸ್ಯರು, ಸಚಿವ ಆರ್ ಅಶೋಕ್, ಡಾ.ಕೆ.ಸುಧಾಕರ್, ಅರಗ ಜ್ಞಾನೇಂದ್ರ ಸೇರಿದಂತೆ ವಿವಿಧ ತಜ್ಞರು ಭಾಗವಹಿಸಿದ್ದರು.


ಈ ಸಭೆಯಲ್ಲಿ ರಾಜ್ಯದಲ್ಲಿ ಆಸ್ಪತ್ರೆಗೆ ದಾಖಲಾಗುತ್ತಿರೋ ಕೊರೋನಾ ಸೋಂಕಿತರ ಸಂಖ್ಯೆ ಕಡಿಮೆ ಇದೆ. ಜೊತೆಗೆ 3ನೇ ಅಲೆಯ ತೀವ್ರತೆ ಅಷ್ಟೇನು ಹೆಚ್ಚಾಗಿಲ್ಲ. ಒಂದು ವೇಳೆ ಹೆಚ್ಚಾದ್ರೆ, 3ನೇ ಅಲೆಯ ತೀವ್ರತೆ ವ್ಯಾಪಕವಾದ್ರೇ ಮತ್ತೆ ಕಠಿಣ ನಿಯಮಗಳನ್ನು ಜಾರಿಗೆ ತರಬಹುದು. ಹೀಗಾಗಿ ವೀಕೆಂಡ್ ಕರ್ಪ್ಯೂ ರದ್ದು ಪಡಿಸುವಂತೆ ಸಚಿವರು ಸೇರಿದಂತೆ, ತಜ್ಞರು ಸಿಎಂ ಸಲಹೆ ಮಾಡಿದರು.


ಸಚಿವರು, ತಜ್ಞರ ಸಲಹೆಗೆ ಸಹಮತ ವ್ಯಕ್ತ ಪಡಿಸಿದಂತ ಸಿಎಂ ಬಸವರಾಜ ಬೊಮ್ಮಾಯಿಯವರು ಇಂದು ರಾತ್ರಿಯಿಂದ ಜಾರಿಗೊಳ್ಳ ಬೇಕಿದ್ದಂತ ವೀಕೆಂಡ್ ಕರ್ಪ್ಯೂವನ್ನು ರದ್ದುಗೊಳಿಸೋ ನಿರ್ಧಾರವನ್ನು ಕೈಗೊಂಡಿದ್ದಾರೆ. ಸಭೆಯ ಮಹತ್ವದ ನಿರ್ಧಾರವನ್ನು ಸಚಿವ ಆರ್ ಅಶೋಕ್ ಸುದ್ಧಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. 

أحدث أقدم