ರಾಜ್ಯ ಸರಕಾರದಿಂದ 'ಕೊರೊನ ಕಂಟ್ರೋಲ್' ಗೆ ಹೊಸ ಮಾರ್ಗಸೂಚಿ ಪ್ರಕಟ, ಯಾವುದಕ್ಕೆ ಅನುಮತಿ? ಯಾವುದಕ್ಕಿಲ್ಲ?

ರಾಜ್ಯ ಸರಕಾರದಿಂದ 'ಕೊರೊನ ಕಂಟ್ರೋಲ್' ಗೆ ಹೊಸ ಮಾರ್ಗಸೂಚಿ ಪ್ರಕಟ, ಯಾವುದಕ್ಕೆ ಅನುಮತಿ? ಯಾವುದಕ್ಕಿಲ್ಲ?

ಬೆಂಗಳೂರು: ರಾಜ್ಯ ಸರ್ಕಾರದಿಂದ ಕೊರೋನಾ ನಿಯಂತ್ರಕ್ಕಾಗಿ ಇಂದು ಹೊಸ ಮಾರ್ಗಸೂಚಿಯನ್ನು ಪ್ರಕಟಿಸಲಾಗಿದೆ. ಈ ಮಾರ್ಗಸೂಚಿಯಂತೆ ನಾಳೆಯಿಂದ 19-01-2022ರವರೆಗೆ ಎರಡುವಾರಗಳ ಕಾಲ ಬೆಂಗಳೂರಿನಲ್ಲಿ 10 ಮತ್ತು 12ನೇ ತರಗತಿ ಹೊರತುಪಡಿಸಿ ಶಾಲಾ-ಕಾಲೇಜು ಬಂದ್ ಮಾಡಲಾಗಿದೆ.


ರಾಜ್ಯಾಧ್ಯಂತ ನೈಟ್ ಕರ್ಪ್ಯೂ ಮುಂದುವರೆಸಲಾಗಿದೆ. ಜೊತೆಗೆ ಹೊಸದಾಗಿ ವಾರಾಂತ್ಯ ಕರ್ಪ್ಯೂವನ್ನು ರಾಜ್ಯಾಧ್ಯಂತ ಜಾರಿಗೊಳಿಸಲಾಗಿದೆ.


ಈ ಬಗ್ಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಮಾರ್ಗಸೂಚಿಯನ್ನು ಪ್ರಕಟಿಸಿದ್ದು, ದಿನಾಂಕ 05-01-2022ರಿಂದ 19-01-2022ರವರೆಗೆ ಜಾರಿಗೆ ಬರುವಂತೆ ಬೆಂಗಳೂರು ಹಾಗೂ ರಾಜ್ಯಾದ್ಯಂತ ಈ ಕೆಳಕಂಡ ಮಾರ್ಗಸೂಚಿಗಳನ್ನು ಜಾರಿಗೊಳಿಸಲಾಗಿದೆ ಎಂಬುದಾಗಿ ತಿಳಿಸಿದ್ದಾರೆ.


ಬೆಂಗಳೂರಿಗೆ ಮಾರ್ಗಸೂಚಿ ಕ್ರಮಗಳು

  • ರಾತ್ರಿ ಕರ್ಪ್ಯೂ 10 ರಿಂದ ರಾತ್ರಿ 5ರವರೆಗೆ ಜಾರಿಯಲ್ಲಿ ಇರಲಿದೆ.
  • ಎಲ್ಲಾ ಕಚೇರಿಗಳು ವಾರದಲ್ಲಿ ಐದು ದಿನ ಮಾತ್ರ ಸೋಮವಾರದಿಂದ ಶುಕ್ರವಾರದವರೆಗೆ ಕಾರ್ಯ ನಿರ್ವಹಿಸಲು ಅವಕಾಶ
  • ಶೇ.50ರಷ್ಟು ಸರ್ಕಾರಿ ಕಚೇರಿಗಳಲ್ಲಿ ಸಿಬ್ಬಂದಿಗಳು ಕೆಲಸ ಮಾಡೋದಕ್ಕೆ ಅವಕಾಶ
  • ವಾರಾಂತ್ಯ ಕರ್ಪ್ಯೂ ಶುಕ್ರವಾರ ರಾತ್ರಿ 10ರಿಂದ ಪ್ರಾರಂಭಗೊಂಡು ಸೋಮವಾರ ಬೆಳಿಗ್ಗೆ 5 ಗಂಟೆಯವರೆಗೆ ಜಾರಿಯಲ್ಲಿ ಇರಲಿದೆ.
  • ಬಿಎಂಟಿಸಿ ಬಸ್ ಎಂದಿನಂತೆ ಇರಲಿದೆ.
  • ಬೆಂಗಳೂರು ನಗರದ 10, 11 ಮತ್ತು 12ನೇ ತರಗತಿ ಶಾಲೆಗಳು ಹೊರತುಪಡಿಸಿ, ಎಲ್ಲಾ ಶಾಲಾ-ಕಾಲೇಜುಗಳು ಬಂದ್ ಮಾಡಲು ಸೂಚನೆ.
  • ಪಬ್, ಕ್ಲಬ್, ರೆಸ್ಟೋರೆಂಟ್, ಬಾರ್, ಹೋಟೆಲ್ ಇತರೆ ಸಾರ್ವಜನಿಕ ಸ್ಥಳಗಳಲ್ಲಿ ಶೇ.50ರಷ್ಟು ಜನರು ಸೇರಲು ಅವಕಾಶ
  • ಸಿನಿಮಾ ಹಾಲ್, ಮಲ್ಟಿಫ್ಲೆಕ್ಸ್, ಥಿಯೇಟರ್, ರಂಗಮಂದಿರ, ಆಡಿಟೋರಿಯಂ ಮತ್ತು ಸಾರ್ವಜನಿಕರು ಸೇರುವ ಪ್ರದೇಶಗಳಲ್ಲಿ ಶೇ.50ರಷ್ಟು ಜನರು ಸೇರಲು ಅನುಮತಿ
  • ಹೊರಾಂಗಣದಲ್ಲಿ ನಡೆಯುವಂತ ಮದುವೆ ಸಮಾರಂಭಗಳಿಗೆ 200 ಜನರಿಗೆ ಅವಕಾಶ. ಒಳಾಂಗಣದಲ್ಲಿ ನಡೆಯುವಂತ ಮದುವೆ ಸಮಾರಂಭಗಳಿಗೆ 100 ಜನರು ಮಾತ್ರವೇ ಸೇರಲು ಅವಕಾಶ
  • ದೇವಸ್ಥಾನ, ಧಾರ್ಮಿಕ ಕೇಂದ್ರಗಳಲ್ಲಿ 50 ಜನರಿಗೆ ಮಾತ್ರ ಅವಕಾಶ
  • ಸ್ವಿಮ್ಮಿಂಗ್ ಪೂಲ್, ಜಿಮ್ ಗಳಲ್ಲಿ ಶೇ.50ರಷ್ಟು ಜನರಿಗೆ ಮಾತ್ರ ಅವಕಾಶ
  • ಸ್ಪೋರ್ಟ್ ಕಾಂಬ್ಲೆಕ್ಸ್, ಸ್ಟೇಡಿಯಂಗಳಲ್ಲಿ ಶೇ.50ರಷ್ಟು ಮಿತಿ
  • ಎಲ್ಲಾ ಪ್ರತಿಭಟನಾ ಮೆರವಣಿಗೆ, ಧರಣಿ, Rallyಗಳಿಗೆ ನಿಷೇಧ
  • ಕೇರಳ, ಮಹಾರಾಷ್ಟ್ರ ಗಳಿಂದ ಬರೋರಿಗೆ ಕೊರೋನಾ ನೆಗೆಟಿವ್ ವರದಿ ಕಡ್ಡಾಯ

ರಾಜ್ಯಾಧ್ಯಂತ ವಾರಾಂದ್ಯ ಕರ್ಪ್ಯೂ ಮಾರ್ಗಸೂಚಿ ಕ್ರಮಗಳು

  • ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕಚೇರಿಗಳು ತೆರೆದಿರಲು ಅನುಮತಿ. ತುರ್ತು ಸೇವೆ ಕಚೇರಿಗಳು ತೆರೆದಿರಲು ಅವಕಾಶ
  • ಎಲ್ಲಾ ಸಾರ್ವಜನಿಕ ಪಾರ್ಕ್ ಗಳು ಬಂದ್
  • ಐಟಿ ಕಂಪನಿಗಳು ವಾರಾಂತ್ಯ ಕರ್ಪ್ಯೂ ನಡುವೆಯೂ ಕೆಲಸಕ್ಕೆ ಅವಕಾಶ. ನೌಕರರು ಐಡಿ ಕಾರ್ಡ್ ತೋರಿಸಿ ಕಚೇರಿಗೆ ತೆರಳಲು ಅನುಮತಿ
  • ತುರ್ತು ಸಂದರ್ಭದಲ್ಲಿ ಜನರು ತೆರಳಲು ಅವಕಾಶ
  • ಆಹಾರ, ತರಕಾರಿ, ಹಣ್ಣು, ಮಾಂಸ, ಮೀನು, ಡೈರಿ, ಹಾಲಿನ ಬೂತ್ ತೆರೆಯಲು ಅನುಮತಿ
  • ತಳ್ಳುಗಾಡಿಯಲ್ಲಿ ಮಾರಾಟಮಾಡಲು ಅವಕಾಶ
  • ಹೋಂ ಡಿಲಿವರಿಗೆ ಅವಕಾಶ
  • ರೆಸ್ಟೋರೆಂಟ್ ಗಳಲ್ಲಿ ಪಾರ್ಸಲ್ ಕೊಂಡಯ್ಯಲು ಅನುಮತಿ

أحدث أقدم