ರಾಜ್ಯಾದ್ಯಂತ ಎರಡು ವಾರಗಳ ಕಾಲ ವೀಕೆಂಡ್ ಕರ್ಫ್ಯೂ ಜಾರಿ, ನೈಟ್ ಕರ್ಫ್ಯೂ ಮುಂದುವರಿಕೆ

ರಾಜ್ಯಾದ್ಯಂತ ಎರಡು ವಾರಗಳ ಕಾಲ ವೀಕೆಂಡ್ ಕರ್ಫ್ಯೂ ಜಾರಿ, ನೈಟ್ ಕರ್ಫ್ಯೂ ಮುಂದುವರಿಕೆ


ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಹಿನ್ನೆಲೆಯಲ್ಲಿ ಲಾಕ್​​ಡೌನ್​ ಸೇರಿದಂತೆ ಕಠಿಣ ಕ್ರಮಗಳ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ, ಆರೋಗ್ಯ ಸಚಿವ ಕೆ.ಸುಧಾಕರ್ ನೇತೃತ್ವದಲ್ಲಿ ತಜ್ಞರೊಂದಿಗೆ ಮಹತ್ವದ ಸಭೆ ನಡೆಸಿದರು.


ಸಭೆ ಬಳಿಕ ಕಂದಾಯ ಸಚಿವ ಆರ್​.ಅಶೋಕ್ ಮಾತನಾಡಿ, ಓಮಿಕ್ರಾನ್​ ಕೋವಿಡ್​ಗಿಂತ 5 ಪಟ್ಟು ಹೆಚ್ಚಾಗುತ್ತಿದೆ ಎಂದು ತಜ್ಞರು ಹೇಳಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು. ಇಂದು ಒಂದೇ ದಿನ 147 ಓಮಿಕ್ರಾನ್​​ ಕೇಸ್​ ದಾಖಲಾಗಿದೆ, ಕಳೆದ 3 ದಿನಗಳಿಂದ ಕೊರೊನಾ ಪಾಸಿಟಿವ್​ ಪ್ರಕರಣಗಳ ಸಂಖ್ಯೆ ದುಪ್ಪಟ್ಟಾಗುತ್ತಿದೆ. ವಿಶೇಷವಾಗಿ ಬೆಂಗಳೂರಿನಲ್ಲಿ ಕಠಿಣ ನಿಮಯಗಳನ್ನು ತರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಸಿಲಿಕಾನ್​ ಸಿಟಿಯಲ್ಲೇ ಶೇ.85ರಷ್ಟು ಪ್ರಕರಣಗಳಿವೆ. ನಮ್ಮ ದೇಶದಲ್ಲಿ ಪಾಸಿಟಿವಿಟಿ ರೇಟ್​ ಶೇ.3ಕ್ಕಿಂತ ಹೆಚ್ಚಾಗುತ್ತಿದೆ ಎಂದರು.


ಜ.6ರಿಂದ ಮುಂದಿನ 2 ವಾರ ಬೆಂಗಳೂರಲ್ಲಿ 10, 12ನೇ ತರಗತಿ ಹೊರತು ಪಡಿಸಿ ಉಳಿದೆಲ್ಲಾ ತರಗತಿಗಳಿಗೆ ಆನ್​​ಲೈನ್​ ಕ್ಲಾಸ್​ ನಡೆಸಲು ನಿರ್ಧಾರ. 10ನೇ ತರಗತಿ, ದ್ವಿತೀಯ ಪಿಯು ತರಗತಿಗಳು ಮಾತ್ರ ನಡೆಯಲಿದೆ. ಉಳಿದೆಲ್ಲಾ ಶಾಲೆಗಳು ಗುರುವಾರದಿಂದ ಬಂದ್​ ಆಗಲಿವೆ. ಮುಂದಿನ ಎರಡು ವಾರ ಶುಕ್ರವಾರ ರಾತ್ರಿ 10 ಗಂಟೆಯಿಂದ ಸೋಮವಾರ ಬೆಳಗ್ಗೆವರೆಗೆ ವೀಕೆಂಡ್ ಕರ್ಫ್ಯೂ ಇರಲಿದೆ. ಸಾರ್ವಜನಿಕ ಸ್ಥಳಗಳಲ್ಲಿ ಶೇ.50ರಷ್ಟು ಮಾತ್ರ ಅನುಮತಿ. ಡಬಲ್ ಡೋಸ್ ಲಸಿಕೆ ಕಡ್ಡಾಯ. ಹೊರಾಂಗಣ ಮದುವೆಯಲ್ಲಿ 200 ಮಂದಿ, ಒಳಾಂಗಣ ಮದುವೆಯಲ್ಲಿ 100 ಜನ ಮಾತ್ರ ಭಾಗಿಯಾಗಬಹುದು. ಇಡೀ ರಾಜ್ಯ ಎರಡು ವಾರ ನೈಟ್ ಕರ್ಪ್ಯೂ ಇರಲಿದೆ.


Previous Post Next Post