ಕಾಂಗ್ರೆಸ್ ನ 'ಮೇಕೆದಾಟು ಪಾದಯಾತ್ರೆ'ಗೆ ನಿರ್ಬಂಧ ವಿಧಿಸಿ ರಾಜ್ಯ ಸರಕಾರದ ಆದೇಶ

ಕಾಂಗ್ರೆಸ್ ನ 'ಮೇಕೆದಾಟು ಪಾದಯಾತ್ರೆ'ಗೆ ನಿರ್ಬಂಧ ವಿಧಿಸಿ ರಾಜ್ಯ ಸರಕಾರದ ಆದೇಶ 


ಬೆಂಗಳೂರು : ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆಗೆ ನಿರ್ಬಂಧ ವಿಧಿಸಿ ರಾಜ್ಯ ಸರ್ಕಾರ ಆದೇಶಿಸಿದೆ.


ಈ ಕುರಿತು ರಾಜ್ಯ ಸರ್ಕಾರದ ಕಾರ್ಯದರ್ಶಿ ಸಿ.ಎಸ್ ರವಿಕುಮಾರ್ ಆದೇಶ ಹೊರಡಿಸಿದ್ದು, ಈ ಕೂಡಲೇ ಪಾದಯಾತ್ರೆಯನ್ನು ನಿಲ್ಲಿಸುವಂತೆ ಕಾಂಗ್ರೆಸ್ ನಾಯಕರಿಗೆ ಸೂಚನೆ ನೀಡಿ ಆದೇಶ ಹೊರಡಿಸಿದೆ. ಪಾದಯಾತ್ರೆಯ ವಾಹನ ಸಂಚಾರ,ಜನಸಂಚಾರ ನಿಷೇಧಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ. ಸರ್ಕಾರದ ಆದೇಶ ಉಲ್ಲಂಘಿಸಿ ಪಾದಯಾತ್ರೆ ಮುಂದುವರೆಸಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಸರ್ಕಾರ ಎಚ್ಚರಿಕೆ ನೀಡಿದೆ.


ಮೇಕೆದಾಟು ಪಾದಯಾತ್ರೆ ಪ್ರಶ್ನಿಸಿ ಪಿಐಎಲ್ ವಿಚಾರಣೆ ನಡೆಸಿ ಹೈಕೋರ್ಟ್ ವಿಭಾಗೀಯ ಪೀಠ, ಕೋವಿಡ್ ಹೆಚ್ಚಳದ ವೇಳೆ ಪಾದಯಾತ್ರೆ ನಡೆಸುತ್ತಿದ್ದೀರಾ? ಪಾದಯಾತ್ರೆಗೂ ಮುನ್ನ ನೀವು ಅನುಮತಿ ಪಡೆದಿದ್ದೀರಾ? ಎಂದು ಹೈಕೋರ್ಟ್ ವಿಭಾಗೀಯ ಪೀಠ ತರಾಟೆಗೆ ತೆಗೆದುಕೊಂಡಿತ್ತು. ಸರ್ಕಾರ ಪಾದಯಾತ್ರೆ ತಡೆಯಲು ಅಸಮರ್ಥವಾಗಿದೆಯೇ?ಅನುಮತಿ ಕೊಟ್ಟಿಲ್ಲದಿದ್ದರೂ ಯಾರಿಗಾಗಿ ಕಾಯುತ್ತಿದ್ದೀರಿ? ಸರ್ಕಾರ ಸಂಪುರ್ಣ ಅಸಮರ್ಥವಾಗಿದೆ.ಸಾರ್ವಜನಿಕರ ಹಿತಾಸಕ್ತಿ ವಿರುದ್ಧ ಅನುಮತಿ ಇಲ್ಲದಿದ್ದರೂ ರ್ಯಾಲಿ ಮಾಡುತ್ತೀರುವ ಕಾಂಗ್ರೆಸ್ ವಿರುದ್ಧ ಸರ್ಕಾರ ಏಕೆ ಕ್ರಮ ಕೈಗೊಂಡಿಲ್ಲ ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ತರಾಟೆ ತೆಗೆದುಕೊಂಡಿತ್ತು. ಈ ಬೆನ್ನಲ್ಲೇ ಸರ್ಕಾರ ಈ ಕ್ರಮ ಕೈಗೊಂಡಿದೆ.


ಮೇಕೆದಾಟು ಯೋಜನೆ ಆಗ್ರಹಿಸಿ ಕರ್ನಾಟಕ ಕಾಂಗ್ರೆಸ್ ಪಾದಯಾತ್ರೆ ಮಾಡುತ್ತಿದ್ದು,. ಇಂದು ನಾಲ್ಕನೇ ದಿನದ ಪಾದಯಾತ್ರೆ ನಡೆಯುತ್ತಿತ್ತು. ಚಿಕ್ಕೇನಹಳ್ಳಿಯಿಂದ ರಾಮನಗರ ಟೌನ್ ವರೆಗೂ ಪಾದಯಾತ್ರೆ ನಡೆದಿತ್ತು. ಮೂರು ಎಫ್‌ಐಆರ್ ದಾಖಲಾಗಿದ್ರು ಕ್ಯಾರೆ ಎನ್ನದ ಕಾಂಗ್ರೆಸ್ ನಾಯಕರು ಪಾದಯಾತ್ರೆ ಮುಂದುವರಿಸಿದ್ದರು. .ರಾಮನಗರ ಸರ್ಕಲ್​ ತಲುಪಿದ ಕಾಂಗ್ರೆಸ್ ಪಾದಯಾತ್ರೆಯಲ್ಲಿ ಜೆಸಿಬಿ ಮೇಲಿಂದ ಡಿ.ಕೆ.ಶಿವಕುಮಾರ್​ಗೆ ಹೂವಿನ ಸುರಿಮಳೆ ಸುರಿಸಲಾಗಿತ್ತು. ಕೆಪಿಸಿಸಿ ವ್ಯಾನ್ ಮೇಲೇರಿ ಡಿ.ಕೆ.ಶಿವಕುಮಾರ್​ ನಮಸ್ಕರಿಸಿದ್ದರು.


ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿನ (Corona Virus) ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಕಾಂಗ್ರೆಸ್ ನವರು ಇಂದು ಪಾದಯಾತ್ರೆಯನ್ನು ನಿಲ್ಲಿಸಬಹುದು. ಇಲ್ಲದಿದ್ದರೆ ನಾವು ಕ್ರಮ ಕೈಗೊಳ್ಳುತ್ತೇವೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ (Home Minister Aaraga Gyanendra) ಹೇಳಿದ್ದರು. ಮೇಕೆದಾಟು ಯೋಜನೆಗಾಗಿ ಕಾಂಗ್ರೆಸ್ ನಡೆಸುತ್ತಿರುವ ಪಾದಯಾತ್ರೆಯನ್ನು ಇಂದು ನಿಲ್ಲಿಸಬೇಕು. ಇಲ್ಲದಿದ್ದರೆ ನಾವು ಕ್ರಮ ಕೈಗೊಳ್ಳುತ್ತೇವೆ ಎಂದಿದ್ದರು. ಈ ಬೆನ್ನಲ್ಲೇ ಸರ್ಕಾರ ಈ ಆದೇಶ ಹೊರಡಿಸಿದೆ.



أحدث أقدم