ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ ಅಂತ್ಯ: ಸಹಜ ಸ್ಥಿತಿಗೆ ಮರಳಿದ ಜನಜೀವನ

ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ ಅಂತ್ಯ: ಸಹಜ ಸ್ಥಿತಿಗೆ ಮರಳಿದ ಜನಜೀವನ 


ಬೆಂಗಳೂರು : ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಶುಕ್ರವಾರ ರಾತ್ರಿ 10 ಗಂಟೆಯಿಂದ ಆರಂಭವಾಗಿದ್ದ ವೀಕೆಂಡ್ ಕರ್ಪ್ಯೂ ಗೆ ಇಂದು ಬೆಳಗ್ಗೆ 5 ಗಂಟೆಗೆ ಅಂತ್ಯವಾಗಿದ್ದು, ಜನಜೀವನ, ವ್ಯಾಪಾರ, ವಹಿವಾಟು ಸಹಜಸ್ಥಿತಿಗೆ ಬರಲಿದೆ.


ಶುಕ್ರವಾರ ರಾತ್ರಿ 10 ಗಂಟೆಯಿಂದ ಆರಂಭವಾಗಿದ್ದ ವೀಕೆಂಡ್ ಕರ್ಪ್ಯೂ ಇಂದು ಮುಂಜಾನೆ 5 ಗಂಟೆಗೆ ಅಂತ್ಯವಾಗಿದ್ದು, ಇಂದಿನಿಂದ ಶುಕ್ರವಾರ ರಾತ್ರಿಯವರೆಗೆ ಜನಜೀವನ ಸಹಜ ಸ್ಥಿತಿಯಲ್ಲಿ ಇರುತ್ತದೆ. ಈ ಅವಧಿಯಲ್ಲಿ ನೈಟ್ ಕರ್ಪ್ಯೂ ಮುಂದುವರೆಯಲಿದೆ. ಜನವರಿ 14 ರ ರಾತ್ರಿಯಿಂದ ಜನವರಿ 17 ರ ಮುಂಜಾನೆ 5 ಗಂಟೆಯವರೆಗೆ ಮತ್ತೆ ವೀಕೆಂಡ್ ಕರ್ಪ್ಯೂ ಜಾರಿಯಾಗಲಿದೆ.
Previous Post Next Post