SSLC ಮುಖ್ಯ ಪರೀಕ್ಷೆಗೆ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ: ಮಾರ್ಚ್ 28ರಿಂದ ಆರಂಭವಾಗುವ ಪರೀಕ್ಷಾ ವೇಳಾಪಟ್ಟಿ ಈ ರೀತಿ ಇದೆ

SSLC ಮುಖ್ಯ ಪರೀಕ್ಷೆಗೆ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ: ಮಾರ್ಚ್ 28ರಿಂದ ಆರಂಭವಾಗುವ ಪರೀಕ್ಷಾ ವೇಳಾಪಟ್ಟಿ ಈ ರೀತಿ ಇದೆ 

ಬೆಂಗಳೂರು: ಮಾರ್ಚ್, ಏಪ್ರಿಲ್ 2022ರಲ್ಲಿ ನಡೆಯಲಿರುವಂತ ಎಸ್ ಎಸ್ ಎಲ್ ಸಿ ಮುಖ್ಯ ಪರೀಕ್ಷೆಯ ( SSLC Main Exam ) ತಾತ್ಕಾಲಿಕ ವೇಳಾಪಟ್ಟಿಯನ್ನು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಪ್ರಕಟಿಸಿದೆ.


ಈ ಬಗ್ಗೆ ಮಾಹಿತಿ ಬಿಡುಗಡೆ ಮಾಡಿರುವಂತ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು, ಮಾರ್ಚ್, ಏಪ್ರಿಲ್ 2022ರ ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು ದಿನಾಂಕ 28-03-2022ರಿಂದ ದಿನಾಂಕ 11-04-2022ರವರೆಗೆ ನಡೆಸಲು ತೀರ್ಮಾನಿಸಲಾಗಿದೆ. ಈ ವೇಳಾಪಟ್ಟಿಗೆ ಅಭ್ಯರ್ಥಿಗಳು, ಪೋಷಕರು ಆಕ್ಷೇಪಣೆಯನ್ನು ದಿನಾಂಕ 06-01-2022ರಿಂದ 14-01-2022ರೊಳಗಾಗಿ ಸಲ್ಲಿಸುವಂತೆ ತಿಳಿಸಿದೆ.

ಹೀಗಿದೆ ಎಸ್ ಎಸ್ ಎಲ್ ಸಿ ಮುಖ್ಯ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ

  • ದಿನಾಂಕ 28-03-2022 ರಂದು ಪ್ರಥಮ ಭಾಷೆಗಳಾದಂತ ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲೀಷ್, ಇಂಗ್ಲೀಷ್ ( ಕೇಂದ್ರ ಪಠ್ಯಕ್ರಮ) ಸಂಸ್ಕೃತ ಪರೀಕ್ಷೆ ನಿಗದಿ ಪಡಿಸಲಾಗಿದೆ.
  • ದಿನಾಂಕ 29-03-2022ರಂದು ಯಾವುದೇ ಪರೀಕ್ಷೆ ಇರುವುದಿಲ್ಲ
  • ದಿನಾಂಕ 30-03-2022ರಂದು ದ್ವಿತೀಯ ಭಾಷೆ - ಇಂಗ್ಲೀಷ್, ಕನ್ನಡ
  • ದಿನಾಂಕ 31-03-2022ರಂದು ಯಾವುದೇ ಪರೀಕ್ಷೆ ಇರುವುದಿಲ್ಲ
  • ದಿನಾಂಕ 01-04-2022ರಂದು ಕೋರ್ ಸಬ್ಜೆಕ್ಟ್ - ಎಲಿಮೆಂಟ್ಸ್ ಆಫ್ ಮೆಕಾನಿಕಲ್ ಮತ್ತು ಎಲೆಕ್ಟ್ರಿಕಲ್ ಇಂಜಿನಿಯರಿಂಗ್ 2, ಇಂಜಿನಿಯರಿಂಗ್ ಗ್ರಾಫಿಕ್ಸ್ 2, ಎಲಿಮೆಂಟ್ಸ್ ಆಫ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್, ಎಲಿಮೆಂಟ್ಸ್ ಆಫ್ ಕಂಪ್ಯೂಟರ್ ಸೈನ್ಸ್, ಅರ್ಥ ಶಾಸ್ತ್ರ
  • ದಿನಾಂಕ 02-04-2022ರಂದು ಯುಗಾದಿ ಹಬ್ಬ, ಯಾವುದೇ ಪರೀಕ್ಷೆ ಇರುವುದಿಲ್ಲ
  • ದಿನಾಂಕ 03-04-2022ರಂದು ಭಾನುವಾರ ರಜೆ
  • ದಿನಾಂಕ 04-04-2022ರಂದು ಕೋರ್ ಸಬ್ಜೆಕ್ಟ್ - ಗಣಿತ, ಸಮಾಜ ಶಾಸ್ತ್ರ
  • ದಿನಾಂಕ 05-04-2022ರಂದು ಯಾವುದೇ ಪರೀಕ್ಷೆ ಇಲ್ಲ
  • ದಿನಾಂಕ 06-04-2022ರಂದು ಕೋರ್ ಸಬ್ಜೆಕ್ಟ್ - ಸಮಾಜ ವಿಜ್ಞಾನ
  • ದಿನಾಂಕ 07-04-2022ರಂದು ಯಾವುದೇ ಪರೀಕ್ಷೆ ಇರೋದಿಲ್ಲ
  • ದಿನಾಂಕ 08-04-2022ರಂದು - ತೃತೀಯ ಭಾಷೆ - ಹಿಂದಿ ( ಕೇಂದ್ರ ಪಠ್ಯಕ್ರಮ ), ಹಿಂದಿ, ಕನ್ನಡ, ಇಂಗ್ಲೀಷ್, ಅರೇಬಿಕ್, ಪರ್ಷಿಯನ್, ಉರ್ದು, ಸಂಸ್ಕೃತ, ಕೊಂಕಣಿ, ತುಳು.
  • ದಿನಾಂಕ 08-04-2022ರಂದು ಎನ್ ಎಸ್ ಕ್ಯೂ ಎಫ್ ಪರೀಕ್ಷಾ ವಿಷಯಗಳು - ಮಾಹಿತಿ ತಂತ್ರಜ್ಞಾನ, ರೀಟೇಲ್, ಆಟೋಮೊಬೈಲ್, ಹೆಲ್ತ್ ಕೇರ್, ಬ್ಯೂಟಿ ಆಡ್ ವೆಲ್ ನೆಸ್
  • ದಿನಾಂಕ 09-04-2022ರಂದು ಮತ್ತು ದಿನಾಂಕ 10-04-2022ರಂದು ಯಾವುದೇ ಪರೀಕ್ಷೆ ಇಲ್ಲ
  • ದಿನಾಂಕ 11-04-2022ರಂದು ಕೋರ್ ಸಬ್ಜೆಕ್ಟ್ - ವಿಜ್ಞಾನ, ರಾಜ್ಯ ಶಾಸ್ತ್ರ, ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ
أحدث أقدم