ಹಿರಿಯ ವಿದ್ವಾಂಸ ತಾಝೆಕ್ಕೋಡ್ ಉಸ್ತಾದ್ ನಿಧನ: ಎಸ್. ವೈ.ಎಸ್.ಸಂತಾಪ

ಹಿರಿಯ ವಿದ್ವಾಂಸ ತಾಝೆಕ್ಕೋಡ್ ಉಸ್ತಾದ್ ನಿಧನ: ಎಸ್. ವೈ.ಎಸ್.ಸಂತಾಪ


ಉಳ್ಳಾಲ‌ ಸಯ್ಯಿದ್ ಮದನಿ‌ ಅರಬಿಕ್ ಕಾಲೇಜಿನಲ್ಲಿ ಸುದೀರ್ಘ ನಾಲ್ಕು ದಶಕಗಳ ಕಾಲ ಮುದರ್ರಿಸ್ ಆಗಿದ್ದ ಪ್ರಮುಖ ವಿದ್ವಾಂಸ  ಕೆ.ಎನ್. ಅಬ್ದುಲ್ಲಾ ಮುಸ್ಲಿಯಾರ್ ತಾಝೆಕ್ಕೋಡ್ (ಪೆರಿಂದಲ್ ಮಣ್ಣ, ಮಲಪ್ಪುರಂ ಜಿಲ್ಲೆ, ಕೇರಳ) ಇಂದು ಮುಂಜಾನೆ (ಫೆಬ್ರವರಿ 18,2022 ಶುಕ್ರವಾರ) ತನ್ನ ತಾಝೆಕ್ಕೋಡಿನ ವಸತಿಯಲ್ಲಿ ನಿಧನರಾಗಿದ್ದಾರೆ.ಅವರಿಗೆ ತೊಂಬತ್ತೊಂದು ವಯಸ್ಸಾಗಿತ್ತು.


 ತಾಝೆಕ್ಕೋಡ್ ಮೊಹಲ್ಲಾ ಖಾಝಿ ಮತ್ತು ಅಧ್ಯಕ್ಷರಾಗಿದ್ದರು. ಅವರ ನಿಧನಕ್ಕೆ ಸುನ್ನೀ ಯುವಜನ ಸಂಘ ರಾಜ್ಯ ಸಮಿತಿಯು ತೀವ್ರ ಸಂತಾಪ ವ್ಯಕ್ತಪಡಿಸಿದೆ.


ಪತ್ನಿ ಆಸಿಯಾ ಮಡತ್ತೊಡಿ,ಮಕ್ಕಳಾದ ಫಾರೂಖ್,ಖದೀಜ,ಅಸ್ಮಾ,ಅಳಿಯ ಮಂಗಳೂರು ಜೆಪ್ಪು ಮುದರ್ರಿಸ್ ಮುಹಮ್ಮದ್ ಮದನಿ ಸಮೇತ ಅಪಾರ ಬಂಧು ಬಳಗ ಮತ್ತು  ಸಾವಿರಾರು ಶಿಷ್ಯಂದಿರನ್ನು ಅವರು ಅಗಲಿದ್ದಾರೆ. ದಫನ ಕಾರ್ಯವು ಇಂದು ಸಂಜೆ ನಾಲ್ಕು ಗಂಟೆಗೆ ತಾಝೆಕ್ಕೋಡ್ ಜುಮಾ ಮಸ್ಜಿದ್ ಖಬರ್‌ಸ್ಥಾನದಲ್ಲಿ ನಡೆಯಲಿದೆ.


ತಾಜುಲ್ ಉಲಮಾರ  ಶಿಷ್ಯರಲ್ಲಿ ಪ್ರಮುಖರೂ ಸಮಸ್ತ ಮುಶಾವರ ಸದಸ್ಯರೂ ಆಗಿದ್ದ ಅವರು ಎಲ್ಲ ಜ್ಞಾನ ಶಾಖೆಗಳಲ್ಲಿ ಪರಿಣತರೂ ಕವಿಯೂ ಉಜ್ವಲ ವಾಗ್ಮಿಯೂ ಆಗಿದ್ದರು.ಸಾವಿರಾರು ಮದನಿ‌ ಉಲಮಾಗಳ ಪ್ರಧಾನ ಗುರುವರ್ಯರೂ ಆಗಿದ್ದಾರೆ


ಅವರ ಹೆಸರಲ್ಲಿ ಎಸ್.ವೈ.ಎಸ್.ಶಾಖೆಗಳಲ್ಲಿ ಪ್ರಾರ್ಥನಾ ಸಂಗಮಗಳನ್ನು ಏರ್ಪಡಿಸಲು ಮತ್ತು ಮಯ್ಯಿತ್ ನಮಾಝ್ ನಿರ್ವಹಿಸಲು ರಾಜ್ಯಾಧ್ಯಕ್ಷ ಡಾ.ಎಮ್ಮೆಸ್ಸೆಂ ಝೈನೀ ಕಾಮಿಲ್ ವಿನಂತಿಸಿದ್ದಾರೆ

أحدث أقدم