ಹೈಕೋರ್ಟ್ ನ ಮಧ್ಯಂತರ ಆದೇಶವನ್ನು ಪ್ರಶ್ನಿಸಿ ಸುಪ್ರಿಂಕೋರ್ಟ್ ಕದ ತಟ್ಟಿದ ವಿದ್ಯಾರ್ಥಿನಿಯರು

ಹೈಕೋರ್ಟ್ ನ ಮಧ್ಯಂತರ ಆದೇಶವನ್ನು ಪ್ರಶ್ನಿಸಿ ಸುಪ್ರಿಂಕೋರ್ಟ್ ಕದ ತಟ್ಟಿದ ವಿದ್ಯಾರ್ಥಿನಿಯರು 


ಬೆಂಗಳೂರು: ಧಾರ್ಮಿಕ ಗುರುತುಗಳನ್ನು ಹಾಕಿ ಕಾಲೇಜುಗಳಿಗೆ ಹೋಗಬೇಡಿಯೆಂದಿದ್ದ ಕರ್ನಾಟಕ ಹೈಕೋರ್ಟ್ ತ್ರಿಸದಸ್ಯ ಪೀಠದ ಮಧ್ಯಂತರ ಮೌಖಿಕ ಆದೇಶವನ್ನು ಪ್ರಶ್ನಿಸಿ ಉಡುಪಿ ಕಾಲೇಜಿನ ವಿದ್ಯಾರ್ಥಿಗಳು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.


ನಿನ್ನೆಯಷ್ಟೇ ಕರ್ನಾಟಕ ಹೈಕೋರ್ಟ್ ಮಧ್ಯಂತರ ಆದೇಶ ನೀಡಿದ್ದು, ಧಾರ್ಮಿಕ ಗುರುತು ಧರಿಸಿ ಹೋಗದಂತೆ ಮೌಖಿಕ ಸೂಚನೆಯನ್ನು ನೀಡಿತ್ತು. ಗುರುವಾರ ವಿಚಾರಣೆಯನ್ನು ಫೆಬ್ರವರಿ 14 ಕ್ಕೆ ಮುಂದೂಡಿರುವ ಕರ್ನಾಟಕ ಹೈಕೋರ್ಟ್ ನ ತ್ರಿಸದಸ್ಯ ಪೀಠ ಈ ಕುರಿತು ಆದೇಶ ಹೊರಡಿಸುವುದಾಗಿ ಹೇಳಿದೆ. ಕಾಲೇಜುಗಳಲ್ಲಿ ಹಿಜಾಬ್ ನಿಷೇಧವನ್ನು ಪ್ರಶ್ನಿಸಿ ಮುಸ್ಲಿಂ ವಿದ್ಯಾರ್ಥಿಗಳು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ನಡೆಸುತ್ತಿದೆ.


ಹಿಜಾಬ್ ನಿಷೇಧದ ಕುರಿತು ವಿಚಾರಣೆ ಕೈಗೆತ್ತಿಕೊಳ್ಳಿ ಎಂದಿದ್ದ ಹಿರಿಯ ವಕೀಲ ಕಪಿಲ್ ಸಿಬಲ್  ವಾದಕ್ಕೆ ಸುಪ್ರೀಂ ಕೋರ್ಟ್, ಕರ್ನಾಟಕ ಹೈಕೋರ್ಟ್ ಆದೇಶ ಕಾಯೋಣ ಎಂದು ಹೇಳಿತ್ತು. ಆದರೆ ಸುಪ್ರೀಂ CJI  ಹೈಕೋರ್ಟ್ ವಿಚಾರಣೆ ವೇಳೆ ಮಧ್ಯ ಪ್ರವೇಶ ಮಾಡಲ್ಲ ಎಂದಿತ್ತು.  ಹೈಕೋರ್ಟ್ ವಿಚಾರಣೆ ಬಾಕಿ ಇರುವಾಗಲೇ ಅರ್ಜಿದಾರರು ಸುಪ್ರೀಂ ಕದ ತಟ್ಟಿದ್ದಾರೆ
Previous Post Next Post