ಹಿಜಾಬ್ ವಿವಾದ 'ವಿಸ್ತೃತ ಪೀಠ'ಕ್ಕೆ ವರ್ಗಾವಣೆ

ಹಿಜಾಬ್ ವಿವಾದ 'ವಿಸ್ತೃತ ಪೀಠ'ಕ್ಕೆ ವರ್ಗಾವಣೆ 


ಬೆಂಗಳೂರು: ಹಿಜಾಬ್​​ ಪ್ರಕರಣ ಮುಖ್ಯ ನ್ಯಾಯಮೂರ್ತಿಗಳಿಗೆ ವರ್ಗಾವಣೆ ಮಾಡಲಾಗಿದೆ. ವಿಸ್ತೃತ ಪೀಠ ರಚಿಸುವ ಬಗ್ಗೆ ಹೈಕೋರ್ಟ್ ಸಿಜೆ ತೀರ್ಮಾನಿಸಲಿ. ಈ ಪ್ರಕರಣ ವಿಸ್ತೃತ ಪೀಠದಲ್ಲಿ ವಿಚಾರಣೆಗೆ ಯೋಗ್ಯವಾಗಿದೆ. ಈ ಬಗ್ಗೆ ಹೈಕೋರ್ಟ್ ಸಿಜೆ ವಿವೇಚನಾಧಿಕಾರ ಹೊಂದಿದ್ದಾರೆ. ತಕ್ಷಣವೇ ಸಂಪೂರ್ಣ ಕಡತ ಮುಖ್ಯ ನ್ಯಾಯಮೂರ್ತಿಗಳಿಗೆ ಕಳುಹಿಸಿ ಎಂದು ಹೈಕೋರ್ಟ್ ರಿಜಿಸ್ಟ್ರಾರ್​​ಗೆ ನ್ಯಾಯಮೂರ್ತಿಗಳ ನಿರ್ದೇಶನ ನೀಡಿದ್ದಾರೆ. ಅರ್ಜಿದಾರರು ಮುಂದಿನ ವಿಚಾರಣೆ ವೇಳೆ ಮನವಿ ಸಲ್ಲಿಸಬಹುದು. ಮಧ್ಯಂತರ ಆದೇಶದ ಬಗ್ಗೆ ಮನವಿ ಸಲ್ಲಿಸಬಹುದು ಎಂದು ಹೇಳಿದ್ದಾರೆ.


ಹಿಜಾಬ್​​ ಪ್ರಕರಣ ಮುಖ್ಯ ನ್ಯಾಯಮೂರ್ತಿಗಳಿಗೆ ವರ್ಗಾವಣೆ ಮಾಡಲಾಗಿದೆ. ಹೈಕೋರ್ಟ್ ಏಕಸದಸ್ಯ ಪೀಠದಿಂದ ವರ್ಗಾವಣೆ ಹಿನ್ನೆಲೆ, ಶಾಂತಿಯಿಂದ ಕೋರ್ಟ್​ನಿಂದ ತೆರಳಲು ವಕೀಲರಿಗೆ ಮನವಿ ಮಾಡಲಾಗಿದೆ. ನಿಮ್ಮ ವಾದಮಂಡನೆಯಿಂದ ನಮ್ಮ ಜ್ಞಾನ ವಿಸ್ತಾರವಾಗಿದೆ ಎಂದು ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅಭಿಪ್ರಾಯ ತಿಳಿಸಿದ್ದಾರೆ. ಹಿಜಾಬ್​​ ಪ್ರಕರಣ ಹೈಕೋರ್ಟ್ ಏಕಸದಸ್ಯ ಪೀಠದಿಂದ ವರ್ಗಾವಣೆ ಹಿನ್ನೆಲೆ, ನಾವೆಲ್ಲರೂ ನ್ಯಾಯಮೂರ್ತಿಗಳಿಗೆ ತುಂಬಾ ಆಭಾರಿಯಾಗಿದ್ದೇವೆ. ಬಹಳ ತಾಳ್ಮೆಯಿಂದ ಅರ್ಥಪೂರ್ಣ ವಿಚಾರಣೆ ನಡೆಸಿದ್ದೀರಿ. ಸೌಹಾರ್ದತೆಯಿಂದ ವಾದಮಂಡಿಸಿದ ವಕೀಲರಿಗೆ ಅಭಿನಂದನೆ. ವಕೀಲರಾದ ದೇವದತ್ ಕಾಮತ್, ಸಂಜಯ್​​ ಹೆಗ್ಡೆ ಅಭಿನಂದನೆ ಸಲ್ಲಿಸಿದ್ದಾರೆ.


ಈ ಪ್ರಕರಣವನ್ನು ವಿಸ್ತೃತ ಪೀಠಕ್ಕೆ ವಹಿಸುವ ಅಗತ್ಯವಿದೆ ಎಂದು ನ್ಯಾಯಮೂರ್ತಿ ಕೃಷ್ಣಾ ಎಸ್​ ದೀಕ್ಷಿತ್​ ಅಭಿಪ್ರಾಯ ಪಟ್ಟಿದ್ದರು. ನೀವು ಒಪ್ಪಿದರೇ ವಿಸ್ತೃತ ಪೀಠಕ್ಕೆ ವಹಿಸುವೆ. ನಿನ್ನೆ ವಾದ ಮಾಡಿದ ಅಂಶಗಳು, ದಾಖಲೆ ಪರಿಶೀಲಿಸಿದ್ದೇನೆ ಎಂದು ಹೇಳಿದ್ದರು. ಹಿರಿಯ ವಕೀಲ ಸಂಜಯ ಹೆಗಡೆ ವಾದ ಮಂಡನೆ ಮಾಡಿ, ವಿಸ್ತೃತ ಪೀಠಕ್ಕೆ ವಹಿಸುವುದು ಕೋರ್ಟ್​ಗೆ ಬಿಟ್ಟ ವಿಚಾರ. ಆದರೆ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಈ ಶೈಕ್ಷಣಿಕ ವರ್ಷದಲ್ಲಿ 2 ತಿಂಗಳು ಮಾತ್ರ ಬಾಕಿ ಇದೆ ಎಂದು ಹೇಳಿದ್ದಾರೆ. ವಾದಿ ಪ್ರತಿವಾದಿಗಳ ಪ್ರತಿಕ್ರಿಯೆ ಕೇಳಿದ ಹೈಕೋರ್ಟ್​ಗೆ ಅರ್ಜಿದಾರರ ಪರ ಸಂಜಯ್ ಹೆಗ್ಡೆ ವಾದ ಮಂಡಿಸಿದ್ದಾರೆ. ವಿಸ್ತೃತ ಪೀಠಕ್ಕೆ ವಹಿಸುವುದು ನ್ಯಾಯಮೂರ್ತಿಗಳ ವಿವೇಚನಾಧಿಕಾರ ಎಂದು ಹೇಳಿದ್ದಾರೆ.


ಎಜಿ ಪ್ರಭುಲಿಂಗ ನಾವದಗಿ ವಾದ ಮಂಡಿಸಿ ನಮಗೆ ಭಾವನಾತ್ಮಕ ವಿಷಯ ಇರಬಹುದು. ಆದರೆ ನಮಗೆ ತೀರ್ಪು ಬರುವುದು ಮುಖ್ಯ. ವಿಸ್ತೃತ ಪೀಠಕ್ಕೆ ವಹಿಸುವುದು ನ್ಯಾಯಮೂರ್ತಿಗಳಿಗೆ ಬಿಟ್ಟದ್ದು. ಧಾರ್ಮಿಕ ಅಗತ್ಯ, ಆಚರಣೆಯೇ ಎಂಬುವುದನ್ನ ನಿರ್ಧರಿಸಬೇಕಿದೆ. ಸರ್ಕಾರದ ಪರ ವಕೀಲ ಪ್ರಭುಲಿಂಗ ನಾವದಗಿ ವಾದ ಮಾಡಿದ್ದಾರೆ. ಎಲ್ಲರೂ ಕೂಡ ಕೋರ್ಟ್​​ ತೀರ್ಪಿಗೆ ಎದುರು ನೋಡುತ್ತಿದ್ದಾರೆ. ಈಗಾಗಲೇ ಅರ್ಜಿದಾರರು ವಾದ ಮಂಡಿಸಿದ್ದಾರೆ. ಈಗ ಸರ್ಕಾರದ ಪರ ವಕೀಲರು ವಾದ ಮಂಡಿಸಬೇಕು ಎಂದು ಅರ್ಜಿದಾರ ವಿದ್ಯಾರ್ಥಿನಿ ಪರ ವಕೀಲ ಸಜ್ಜನ್​ ಪೂವಯ್ಯ ವಾದ ಮಂಡಿಸಿದ್ದಾರೆ. ಈ ಪ್ರಕರಣ ವಿಸ್ತೃತ ಪೀಠಕ್ಕೆ ವಹಿಸುವ ಅಗತ್ಯವಿಲ್ಲ ಎಂದು ಅವರು ಹೇಳಿದ್ದಾರೆ.


ವಕೀಲ ಕಾಳೇಶ್ವರಂ ರಾಜ್​ರಿಂದ ವಾದ ಮಂಡನೆ ಮಾಡಲಾಗಿದೆ. ಹೈಕೋರ್ಟ್​​ಗಳ ಏಕಸದಸ್ಯ ಪೀಠಗಳು ತೀರ್ಪು ನೀಡಿವೆ. ಈ ಪ್ರಕರಣದಲ್ಲಿ ತೀರ್ಪಿನ ತುರ್ತು ಅಗತ್ಯತೆ ಇದೆ ಎಂದು ಹೇಳಿದ್ದಾರೆ. ಇದೀಗ ಅಂತಿಮವಾಗಿ ವಿಸ್ತೃತ ಪೀಠಕ್ಕೆ ಪ್ರಕರಣ ವರ್ಗಾಯಿಸಿ ಏಕಸದಸ್ಯ ಪೀಠ ಆದೇಶ ನೀಡಿದೆ. ಹೈಕೋರ್ಟ್ ಏಕಸದಸ್ಯ ಪೀಠದಿಂದ ಪ್ರಕರಣ ವರ್ಗಾವಣೆ ಮಾಡಲಾಗಿದೆ. ಹಿಜಾಬ್‌ಗೆ ಅನುಮತಿ ಕೋರಿದ್ದ ಅರ್ಜಿ ವಿಚಾರಣೆ ವರ್ಗಾವಣೆ ಮಾಡಲಾಗಿದೆ.

Previous Post Next Post