ಮುಹಿಮ್ಮಾತ್ ಸನದುದಾನ ಮತ್ತು ಝೈನುಲ್ ಮುಹಖ್ಖಿಖೀನ್ ಸಯ್ಯದ್ ತ್ವಾಹಿರುಲ್ ಅಹ್ದಲ್ ತಙಳ್ ಹದಿನಾರನೇ ಉರೂಸ್ ಮುಬಾರಕ್ ಇಂದು ಸಮಾರೋಪ

ಮುಹಿಮ್ಮಾತ್ ಸನದುದಾನ ಮತ್ತು ಝೈನುಲ್ ಮುಹಖ್ಖಿಖೀನ್ ಸಯ್ಯದ್ ತ್ವಾಹಿರುಲ್ ಅಹ್ದಲ್ ತಙಳ್ ಹದಿನಾರನೇ ಉರೂಸ್ ಮುಬಾರಕ್ ನಾಳೆ ಸಮಾರೋಪ


ಕಾಸರಗೋಡು (ಮಾ.12): ಪ್ರಮುಖ ಆಧ್ಯಾತ್ಮಿಕ ವಿದ್ವಾಂಸರು ಸೂಫಿವರ್ಯರೂ ಮುಹಿಮ್ಮಾತ್ ಶಿಲ್ಪಿಯೂ ಆದ ಝೈನುಲ್ ಮುಹಖ್ಖಿಖೀನ್ ಸಯ್ಯದ್ ತ್ವಾಹಿರುಲ್ ಅಹ್ದಲ್ ತಂಙಳ್ 16 ನೇ ಉರೂಸ್ ಮುಬಾರಕ್ ಸಮಾರೋಪ ಮತ್ತು ಸನದುದಾನ ಸಮ್ಮೇಳನ ಇಂದು ಭಾನುವಾರ ಮುಹಿಮ್ಮಾತಿನಲ್ಲಿ ನಡೆಯಲಿದೆ.  


ಕಳೆದ ಐದು ದಿನಗಳಿಂದ ನಡೆದು ಬರುತ್ತಿದ್ದ ಉರೂಸ್ ಪರಂಪರೆಯು ವಿವಿಧ ದಿನಗಳಲ್ಲಿ ಆಧ್ಯಾತ್ಮಿಕ ಮಜ್ಲಿಸ್ ವಅಳ್ ಕಾರ್ಯಕ್ರಮಗಳು ನಡೆಯಿತು. ಇಂದು ಸಮಾರೋಪ ಗೊಳ್ಳಲಿದೆ. 


ಬೆಳಿಗ್ಗೆ (ಭಾನುವಾರ) ನಡೆಯುವ ಸ್ಥಾನ ವಸ್ತ್ರ ವಿತರಣೆಗೆ ಸಯ್ಯದ್ ಹಸನುಲ್ ಅಹ್ದಲ್ ತಙಳ್ ನೇತೃತ್ವ ನೀಡಲಿದ್ದಾರೆ. 11 ಗಂಟೆಗೆ ಮೌಲಿದ್ ಮಜ್ಲಿಸ್ ಗೆ ಸಯ್ಯದ್ ಕುರಾ ತಙಳ್ ನೇತೃತ್ವ ನೀಡಲಿದ್ದಾರೆ. ರಫೀಖ್ ಸಅದಿ ದೇಲಂಬಾಡಿ ಭಾಷಣಗೈಯ್ಯುವರು. 


1.30 ಕ್ಕೆ ನಡೆಯುವ ಖತಂ ದುಆ ಮಜ್ಲಿಸ್ ಗೆ ಸಯ್ಯದ್ ಶಹೀರ್ ತಙಳ್ ಅಲ್ ಬುಖಾರಿ, ಸ್ವಾಲಿಹ್ ಸಅದಿ ತಳಿಪ್ಪರಂಬು ನೇತೃತ್ವ ನೀಡುವರು. 


ಸಂಜೆ 4.30 ಕ್ಕೆ ಮಹ್ಲರತುಲ್ ಬದ್ರಿಯಾ ದೊಂದಿಗೆ ಸನದುದಾನ ಆಧ್ಯಾತ್ಮಿಕ ಮಜ್ಲಿಸ್ ಆರಂಭಗೊಳ್ಳಲಿದ್ದು ಸೈಯದ್ ಅಲಿ ಬಾಫಖಿ ತಂಙಳ್ ಹಸನುಲ್ ಅಹ್ದಲ್ ತಂಙಳ್ ಸಮಸ್ತ ಅಧ್ಯಕ್ಷರು ಇ ಸುಲೈಮಾನ್ ಉಸ್ತಾದ್ ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎ ಪಿ ಉಸ್ತಾದ್ ಮೌಲಾನಾ ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿ ಡಾ. ಎಮ್ಮೆಸ್ಸೆಂ  ಝೈನಿ ಕಾಮಿಲ್ ಅಬ್ದುಲ್ ಲತೀಫ್ ಸಅದಿ ಶಿಮೊಗ್ಗ ಸೇರಿದಂತೆ ಹಲವು ಗಣ್ಯ ವ್ಯಕ್ತಿಗಳು ಭಾಗವಹಿಸುವರು. 


ಈ ಬಾರಿ ಮುಹಿಮ್ಮಾತ್ 116 ಹಿಮಮಿಗಳನ್ನು ಮತ್ತು 27 ಹಾಫಿಝ್ ಗಳು ಸಮಾಜಕ್ಕೆ ಸಮರ್ಪಿಸುತ್ತಿದೆ.
أحدث أقدم