ಸಂತೋಷ್ ಪಾಟಿಲ ಆತ್ಮಹತ್ಯೆ: ಇಕ್ಕಟ್ಟಿನಲ್ಲಿ ರಾಜ್ಯ ಸರಕಾರ, ಈಶ್ವರಪ್ಪ ರಾಜಿನಾಮೆಗೆ ವಿಪಕ್ಷ ಪಟ್ಟು

ಸಂತೋಷ್ ಪಾಟಿಲ ಆತ್ಮಹತ್ಯೆ: ಇಕ್ಕಟ್ಟಿನಲ್ಲಿ ರಾಜ್ಯ ಸರಕಾರ, ಈಶ್ವರಪ್ಪ ರಾಜಿನಾಮೆಗೆ ವಿಪಕ್ಷ ಪಟ್ಟು


ಬೆಂಗಳೂರು/ಉಡುಪಿ: 
ಕಾಮಗಾರಿಗಳ ಬಾಕಿ ಬಿಲ್‌ ಮೊತ್ತ ಬಿಡುಗಡೆಗೆ ಶೇಕಡ 40ರಷ್ಟು ಲಂಚಕ್ಕೆ ಬೇಡಿಕೆ ಇಟ್ಟಿರುವುದಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೆ.ಎಸ್‌. ಈಶ್ವರಪ್ಪ ವಿರುದ್ಧ ಆರೋಪ ಮಾಡಿದ್ದ ಬೆಳಗಾವಿಯ ಹಿಂಡಲಗಾ ಗ್ರಾಮದ ಗುತ್ತಿಗೆದಾರ ಸಂತೋಷ್‌ ಪಾಟೀಲ ಉಡುಪಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.


ಸೋಮವಾರ ಉಡುಪಿಗೆ ಬಂದು ಲಾಡ್ಜ್‌ ಒಂದರಲ್ಲಿ ತಂಗಿದ್ದ ಸಂತೋಷ್‌, 'ನನ್ನ ಸಾವಿಗೆ ಸಚಿವ ಈಶ್ವರಪ್ಪ ಅವರೇ ಕಾರಣ...' ಎಂದು ಪರಿಚಿತರಿಗೆ ವಾಟ್ಸ್‌ ಆಯಪ್‌ನಲ್ಲಿ ಸಂದೇಶ ಕಳುಹಿಸಿ ವಿಷ ಸೇವಿಸಿ, ಸಾವನ್ನಪ್ಪಿದ್ದಾರೆ. ಮಂಗಳವಾರ ಬೆಳಿಗ್ಗೆ ಪ್ರಕರಣ ಬಹಿರಂಗವಾಗಿದ್ದು, ವಿರೋಧ ಪಕ್ಷಗಳಾದ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಈಶ್ವರಪ್ಪ ರಾಜೀನಾಮೆಗೆ ಪಟ್ಟು ಹಿಡಿದಿವೆ. ಇದರಿಂದ ಸರಕಾರವು ಇಕ್ಕಟ್ಟಿಗೆ ಸಿಲುಕಿದೆ. 


Previous Post Next Post