ಯುಎಇ ಅಧ್ಯಕ್ಷ ಶೇಖ್ ಸುಲ್ತಾನ್ ಬಿನ್ ಝಾಯೆದ್ ಅಲ್ ನಹ್ಯಾನ್ ನಿಧನ
ಯುಎಇ: ಯುಎಇ ಅಧ್ಯಕ್ಷ ಶೇಖ್ ಸುಲ್ತಾನ್ ಬಿನ್ ಜಾಯೆದ್ ಅಲ್-ನಹ್ಯಾನ್ ಇಂದು ಅನಾರೋಗ್ಯದಿಂದ ಇಂದು ನಿಧನರಾದರು.
ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶೇಖ್ ಬಿನ್ ಝಾಯೆದ್ ಅವರ ನಿಧನವನ್ನು ಯುಎಇ ವ್ಯವಹಾರಗಳ ಸಚಿವಾಲಯ ಧೃಡಪಡಿಸಿದೆ.
ಶೇಖ್ ಖಲೀಫಾ ಅವರು ಯುಎಇಯ ಎರಡನೇ ಅಧ್ಯಕ್ಷರಾಗಿದ್ದರು. ಅವರಿಗೆ 73 ವರ್ಷ ವಯಸ್ಸಾಗಿತ್ತು. ಶೇಖ್ ಬಿನ್ ಝಾಯೆದ್ ನಿಧನದ ಹಿನ್ನೆಲೆಯಲ್ಲಿ ಶುಕ್ರವಾರದಿಂದ ಮೂರು ದಿನಗಳ ಕಾಲ ಸಾರ್ವಜನಿಕ ಮತ್ತು ಖಾಸಗಿ ವಲಯಗಳ ಕೆಲಸವನ್ನು ನಿಲ್ಲಿಸಬೇಕು ಎಂದು ದುಬೈ ಮಾಧ್ಯಮ ಕಚೇರಿ ಸ್ಪಷ್ಟಪಡಿಸಿದೆ. ಅಧ್ಯಕ್ಷೀಯ ವ್ಯವಹಾರಗಳ ಸಚಿವಾಲಯವು ಶುಕ್ರವಾರದಿಂದ 40 ದಿನಗಳ ಕಾಲ ಅಧ್ಯಕ್ಷರ ನಿಧನಕ್ಕೆ ಅಧಿಕೃತ ರಾಷ್ಟ್ರೀಯ ಶೋಕಾಚರಣೆಯನ್ನು ಘೋಷಿಸಿದೆ.
ಅವರು ತಮ್ಮ ತಂದೆ ದಿವಂಗತ ಶೇಖ್ ಜಾಯೆದ್ ಬಿನ್ ಸುಲ್ತಾನ್ ಅಲ್ ನಹ್ಯಾನ್ ಅವರ ಉತ್ತರಾಧಿಕಾರಿಯಾಗಿ ಆಡಳಿತ ನಡೆಸಿದ್ದರು. 1971 ರಲ್ಲಿ ಯುಎಇಯ ಮೊದಲ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಶೇಖ್ ಜಾಯೆದ್ ಬಿನ್ ಸುಲ್ತಾನ್ ಅಲ್ ನಹ್ಯಾನ್ ಅವರು ನವೆಂಬರ್ 2, 2004 ರಂದು ನಿಧನರಾದರು.
1948 ರಲ್ಲಿ ಜನಿಸಿದ ಶೇಖ್ ಖಲೀಫಾ ಯುಎಇಯ ಎರಡನೇ ಅಧ್ಯಕ್ಷ ಮತ್ತು ಅಬುಧಾಬಿ ಎಮಿರೇಟ್‌ನ 16 ನೇ ಆಡಳಿತಗಾರರಾಗಿದ್ದರು.