ಕಾರು ಅಪಘಾತ: ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಆಂಡ್ರ್ಯೂ ಸೈಮಂಡ್ಸ್ ಇನ್ನಿಲ್ಲ

ಕಾರು ಅಪಘಾತ: ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಆಂಡ್ರ್ಯೂ ಸೈಮಂಡ್ಸ್ ಇನ್ನಿಲ್ಲ


ನವದೆಹಲಿ: 
ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಆಂಡ್ರ್ಯೂ ಸೈಮಂಡ್ಸ್ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಇತ್ತೀಚೆಗಷ್ಟೇ ಥಾಯ್ಲೆಂಡ್‌ನಲ್ಲಿ ಹೃದಯಾಘಾತದಿಂದ ಸಾರ್ವಕಾಲಿಕ ಶ್ರೇಷ್ಠ ಲೆಗ್‌ ಸ್ಪಿನ್ನರ್, ಕ್ರಿಕೆಟ್‌ ದಂತಕತೆ ಶೇನ್‌ ವಾರ್ನ್‌ ಹಠಾತ್‌ ನಿಧನರಾಗಿದ್ದರು.


ಇದೀಗ ಆಂಡ್ರ್ಯೂ ಸೈಮಂಡ್ಸ್ ಕೂಡ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದು, ಕಾಂಗರೋ ನಾಡಿಗೆ ಬರಸಿಡಿಲು ಬಡಿದಂತಾಗಿದೆ. ಮಾಜಿ ಲೆಜೆಂಡರಿ ಕ್ರಿಕೆಟಿಗ ಆಂಡ್ರ್ಯೂ ಸೈಮಂಡ್ಸ್ ಶನಿವಾರ ತಡರಾತ್ರಿ ಸಾವನ್ನಪ್ಪಿದ್ದಾರೆ. ಕ್ವೀನ್ಸ್‌ಲ್ಯಾಂಡ್‍ನಲ್ಲಿ ಸಂಭವಿಸಿದ ಕಾರು ಅಪಘಾತದಲ್ಲಿ ಸೈಮಂಡ್ಸ್ ಕೊನೆಯುಸಿರೆಳೆದಿದ್ದಾರೆ. ಸೈಮಂಡ್ಸ್ ನಿಧನದ ನಂತರ ಕ್ರಿಕೆಟ್ ಲೋಕ ಹಾಗೂ ಅವರ ಕೋಟ್ಯಂತರ ಅಭಿಮಾನಿಗಳಲ್ಲಿ ಶೋಕದ ಅಲೆ ಎದ್ದಿದೆ.


1975ರ ಜೂನ್ 9ರಂದು ಜನಿಸಿದ್ದ ಸೈಮಂಡ್ಸ್ ಗೆ ಕೇವಲ 47 ವರ್ಷವಾಗಿತ್ತು. ಆಂಡ್ರ್ಯೂ ಸೈಮಂಡ್ಸ್ ನಿಧನಕ್ಕೆ ಭಾರತೀಯ ಸೇರಿದಂತೆ ವಿಶ್ವದ ಕ್ರಿಕೆಟಿಗರು ಕಂಬನಿ ಮಿಡಿದಿದ್ದಾರೆ.
Previous Post Next Post