SSLC ಫಲಿತಾಂಶಕ್ಕೆ ಕ್ಷಣಗಣನೆ: 12.30 ಕ್ಕೆ ಫಲಿತಾಂಶ ಪ್ರಕಟ, ಚೆಕ್ ಮಾಡುವ ರೀತಿ ಇಲ್ಲಿದೆ

SSLC ಫಲಿತಾಂಶಕ್ಕೆ ಕ್ಷಣಗಣನೆ: 12.30 ಕ್ಕೆ ಫಲಿತಾಂಶ ಪ್ರಕಟ, ಚೆಕ್ ಮಾಡುವ ರೀತಿ ಇಲ್ಲಿದೆ

ಬೆಂಗಳೂರು (ಮೇ.19):
 ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದೆ. ಮೇ 19ರ ಮಧ್ಯಾಹ್ನ 12.30ಕ್ಕೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ (karnataka sslc result 2022) ಪ್ರಕಟಿಸಲಾಗುತ್ತಿದ್ದು, ಮಧ್ಯಾಹ್ನ 1 ಗಂಟೆಗೆ ವೆಬ್‌ಸೈಟ್ https://karresults.nic.in/ ನಲ್ಲಿ ಪ್ರಕಟಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಬಿ.ಸಿ. ನಾಗೇಶ್ (Minister of Primary and SecondEducation BC Nagesh) ಟ್ವೀಟ್ ಮಾಡಿ ಈಗಾಗಲೇ ಮಾಹಿತಿ ನೀಡಿದ್ದಾರೆ.


ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ (Karnataka Secondary Education Examination Board) ಇದಕ್ಕೆ ಸಂಪೂರ್ಣ ತಯಾರಿ ಮಾಡಿಕೊಂಡಿದೆ. 

ಫಲಿತಾಂಶ ನೋಡಲು ಇಚ್ಚಿಸುವ ಅಭ್ಯರ್ಥಿಗಳು https://karresults.nic.in/ ಗೆ ಭೇಟಿ ನೀಡಿ ಮೊದಲಿಗೆ ತಮ್ಮ ಪರೀಕ್ಷಾ ರಿಜಿಸ್ಟರ್ ನಂಬರ್ ಅನ್ನು ದಾಖಲಿಸಿ. ತದ ನಂತರ ಹಾಲ್ ಟಿಕೆಟ್ ನಲ್ಲಿ ನಮೂದಿಸಿರುವ ಹುಟ್ಟಿದ ದಿನಾಂಕ, ತಿಂಗಳು ಮತ್ತು ವರ್ಷವನ್ನು ನಮೂದಿಸಿ ಬಳಿಕ ಸಬ್‌ಮಿಟ್ ಬಟನ್ ಒತ್ತಿ. ಕೂಡಲೇ ನಿಮ್ಮ ಅಂಕಗಳ ಪಟ್ಟಿ ವಿಷಯಾವಾರು ಕಾಣಿಸಿಕೊಳ್ಳಯತ್ತದೆ. ಮುಂದಿನ ದಾಖಲಾತಿಗೆ ಇದನ್ನು ಡೌನ್ ಲೋಡ್ ಮಾಡಿ ಇಟ್ಟುಕೊಳ್ಳಿ.


ಇಷ್ಟು ಮಾತ್ರವಲ್ಲ ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿರುವ ಫೋನ್ ನಂಬರ್‌ಗಳಿಗೆ SMS ಮೂಲಕ ಫಲಿತಾಂಶ ಕಳುಹಿಸಲಾಗುತ್ತದೆ ಎಂದು ಸಚಿವ ಬಿ.ಸಿ. ನಾಗೇಶ್ ಹೇಳಿದ್ದಾರೆ.


ನಿರಂತರ ಸುರಿಯುತ್ತಿರುವ ಮಳೆಯ ಕಾರಣ ಮಕ್ಕಳ ಸುರಕ್ಷತಾ ದೃಷ್ಟಿಯಿಂದ ಮೈಸೂರು, ದಕ್ಷಿಣ ಕನ್ನಡ ಮತ್ತು ಶಿವಮೊಗ್ಗ , ಮಂಡ್ಯ ಜಿಲ್ಲೆಯ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ಒಂದು ದಿನ (ಮೇ.19) ರಜೆ ಘೋಷಿಸಲಾಗಿದೆ.

أحدث أقدم