ಕೆಸಿಎಫ್ ಒಮಾನ್ ಪ್ರಾಯೋಜಕತ್ವದ ಮಾಝಿನ್ ಹೆರಿಟೇಜ್ ದಾರುಲ್ ಉಲೂಮ್ ಇಹ್ಸಾನಿಯ್ಯಾ ಉದ್ಘಾಟನೆ ಜುಲೈ 13

ಕೆಸಿಎಫ್ ಒಮಾನ್ ಪ್ರಾಯೋಜಕತ್ವದ ಮಾಝಿನ್ ಹೆರಿಟೇಜ್ ದಾರುಲ್ ಉಲೂಮ್ ಇಹ್ಸಾನಿಯ್ಯಾ ಉದ್ಘಾಟನೆ ಜುಲೈ 13 

ಜಗಳೂರು: ಉತ್ತರ ಕರ್ನಾಟಕದಲ್ಲಿ ಅಕ್ಷರ ಕ್ರಾಂತಿಯನ್ನು ಸೃಷ್ಟಿಸಿ ಅಧಾರ್ಮಿಕತೆಯ ಅಂಧಕಾರಕ್ಕೆ ಕಂದೀಲು ಹಿಡಿದು ಶೈಕ್ಷಣಿಕ ಬೆಳಕು ಚೆಲ್ಲುತ್ತಿರುವ ಇಹ್ಸಾನ್ ಕರ್ನಾಟಕ ಇದರ ಮತ್ತೊಂದು ಮೈಲಿಗಲ್ಲು ಕೆಸಿಎಫ್ ಒಮಾನ್ ಪ್ರಾಯೋಜಕತ್ವದ ಮಾಝಿನ್ ಹೆರಿಟೇಜ್ ದಾರುಲ್ ಉಲೂಮ್ ಇಹ್ಸಾನಿಯ್ಯಾ ದಾವಣಗೆರೆ ಜಿಲ್ಲೆಯ ಜಗಳೂರು ಪಟ್ಟಣದಲ್ಲಿ ತಲೆ ಎತ್ತಿ ನಿಂತಿದ್ದು 2022 ಜುಲೈ ಹದಿಮೂರು ಬುಧವಾರ ಬೆಳಿಗ್ಗೆ ಹತ್ತು ಗಂಟೆಗೆ ಉದ್ಘಾಟನೆಗೊಳ್ಳಲಿದೆ. 


ಆಧ್ಯಾತ್ಮಿಕ ನಾಯಕ ಹಜರತ್ ಡಾ ಮುಹಮ್ಮದ್ ಫಾಝಿಲ್ ರಝ್ವಿ ಕಾವಲಕಟ್ಟೆ ಸಂಸ್ಥೆಯನ್ನು ಉದ್ಘಾಟಿಸಲಿದ್ದು, ಕರ್ನಾಟಕ ವಕ್ಫ್ ಮಂಡಳಿ ಅಧ್ಯಕ್ಷರಾದ ಮೌಲಾನ ಶಾಫಿ ಸಅದಿ, ಜಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಎಸ್ ವಿ ರಾಮಚಂದ್ರ, ಇಹ್ಸಾನ್ ಕರ್ನಾಟಕ ಅಧ್ಯಕ್ಷರಾದ ಹಫೀಲ್ ಸಅದಿ ಕೊಡಗು, ಎಸ್ ವೈಎಸ್ ರಾಜ್ಯಾಧ್ಯಕ್ಷ ರಾದ ಡಾ. ಎಮ್ಮೆಸ್ಸೆಂ ಝೈನಿ ಕಾಮಿಲ್, ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ರಾದ ಅಬ್ದುಲ್ ಲತೀಫ್ ಸಅದಿ ಶಿವಮೊಗ್ಗ, ಕೆಸಿಎಫ್ ಐಎನ್ ಸಿ ಅಧ್ಯಕ್ಷರಾದ ಡಾ. ಶೇಖ್ ಬಾವ ಹಾಜಿ, ಕೆಸಿಎಫ್ ಒಮಾನ್ ಅಧ್ಯಕ್ಷರಾದ ಜನಾಬ್ ಅಯ್ಯೂಬ್ ಕೋಡಿ ಸೇರಿದಂತೆ ಧಾರ್ಮಿಕ, ರಾಜಕೀಯ ಮುಖಂಡರು, ಸಂಘ ಕುಟುಂಬದ ನಾಯಕರು, ಸ್ಥಳೀಯ ನೇತಾರರು, ಕೆಸಿಎಫ್ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.  

أحدث أقدم