ಪುಣ್ಯಭೂಮಿಗೆ ವಿದಾಯ ಹೇಳತೊಡಗಿದ ಹಜ್ ಯಾತ್ರಿಕರು, ಸ್ವದೇಶಿ ಹಜ್ಜಾಜಿಗಳು ಪವಿತ್ರ ನಗರಕ್ಕೆ ಇಂದು ವಿದಾಯ

ಪುಣ್ಯಭೂಮಿಗೆ ವಿದಾಯ ಹೇಳತೊಡಗಿದ ಹಜ್ ಯಾತ್ರಿಕರು, ಸ್ವದೇಶಿ ಹಜ್ಜಾಜಿಗಳು ಪವಿತ್ರ ನಗರಕ್ಕೆ ಇಂದು ವಿದಾಯ 

ಮಕ್ಕಾ। ದೇಶೀಯ ಹಜ್ ಯಾತ್ರಾರ್ಥಿಗಳು ತಮ್ಮ ಹಜ್ ವಿಧಿವಿಧಾನಗಳನ್ನು ಪೂರ್ಣಗೊಳಿಸಿ ಪುಣ್ಯ ಭೂಮಿಗೆ ವಿದಾಯ ಹೇಳಲು ತೊಡಗಿದರು.


ಸೋಮವಾರ ಮತ್ತು ಮಂಗಳವಾರದಂದು ದೇಶೀಯ ಯಾತ್ರಾರ್ಥಿಗಳಿಗೆ ವಿದಾಯ ತವಾಫ್‌ಗೆ ಸಮಯವನ್ನು ಅನುಮತಿಸಲಾಗಿದೆ. ಜನ ದಟ್ಟಣೆ ಹೆಚ್ಚಾದ ಕಾರಣ ಮತಾಫ್‌ನ ಸಂಪೂರ್ಣ ಸಾಮರ್ಥ್ಯವನ್ನು ಪ್ರಸ್ತುತ ಬಳಸಲಾಗಿದೆ.


ಹೊರ ದೇಶಗಳಿಂದ ಬರುವ ಯಾತ್ರಾರ್ಥಿಗಳಿಗೆ ಬುಧವಾರದಿಂದ ತವಾಫ್ ಸಮಯ. ಹರಮಿನಲ್ಲಿ ಕಠಿಣ ಜನಸಂದಣಿಯನ್ನು ತಪ್ಪಿಸುವ ಭಾಗವಾಗಿದೆ ಈ ನಿಯಮ.


ಈ ವರ್ಷ 8,99,353 ಯಾತ್ರಿಕರು ಹಜ್ಜ್ ನಿರ್ವಹಿಸಿದರು

ಮಕ್ಕಾ |  ಈ ವರ್ಷ 8,99,353 ಯಾತ್ರಿಕರು ಪವಿತ್ರ ಹಜ್‌ನಲ್ಲಿ ಪಾಲ್ಗೊಂಡಿದ್ದಾರೆ ಎಂದು ಸೌದಿ ಜನರಲ್ ಅಥಾರಿಟಿ ಫಾರ್ ಸ್ಟ್ಯಾಟಿಸ್ಟಿಕ್ಸ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.


ವಿದೇಶಗಳಿಂದ 779,919 ಯಾತ್ರಿಕರು ಮತ್ತು ಸೌದಿ ಅರೇಬಿಯಾದಿಂದ 119,434 ಯಾತ್ರಿಕರು ಹಜ್‌ನಲ್ಲಿ ಭಾಗವಹಿಸಿದ್ದಾರೆ.  ಹೊರ ದೇಶಗಳ ಎಂಟೂವರೆ ಲಕ್ಷ ಮಂದಿ ಹಾಗೂ ಸೌದಿ ಅರೇಬಿಯಾದಲ್ಲಿ ನೆಲೆಸಿರುವ ಒಂದೂವರೆ ಲಕ್ಷ ಸ್ಥಳೀಯರು ಮತ್ತು ವಿದೇಶಿಗರಿಗೆ ಈ ವರ್ಷ ಹಜ್ ಯಾತ್ರೆಗೆ ಅವಕಾಶ ಕಲ್ಪಿಸಲಾಗಿದೆ.


ಈ ಬಾರಿಯ ಹಜ್ ತೀರ್ಥಾಟನೆ ಅದ್ಭುತ ಯಶ ಕಂಡಿದೆ: ಮಕ್ಕಾ ಗವರ್ನರ್ 

ಮಕ್ಕಾ |  ಈ ವರ್ಷದ ಹಜ್ ಯಾತ್ರೆಯು ಸುರಕ್ಷತೆ, ಸೇವೆ ಮತ್ತು ಆರೋಗ್ಯದಂತಹ ಎಲ್ಲಾ ಹಂತಗಳಲ್ಲೂ ಉತ್ತಮ ಕಾಳಜಿಯನ್ನು ನೀಡುವ ಮೂಲಕ ಉತ್ತಮ ಯಶಸ್ಸನ್ನು ಸಾಧಿಸಿದೆ ಎಂದು ಮಕ್ಕಾ ಗವರ್ನರ್ ಮತ್ತು ಕಿಂಗ್ ಸಲ್ಮಾನ್ ಅವರ ಸಲಹೆಗಾರ ರಾಜಕುಮಾರ ಖಾಲಿದ್ ಅಲ್ ಫೈಸಲ್ ಹೇಳಿದರು.


ಭದ್ರತಾ ಸಿಬ್ಬಂದಿ, ಆರೋಗ್ಯ ಕಾರ್ಯಕರ್ತರು, ಸ್ವಯಂಸೇವಕರು, ವಿವಿಧ ಸರ್ಕಾರಿ ಮತ್ತು ಖಾಸಗಿ ಏಜೆನ್ಸಿಗಳು ಯಾತ್ರಿಕರ ಸೇವೆ ಮತ್ತು ಭದ್ರತೆ ಮತ್ತು ಅಗತ್ಯ ಭದ್ರತೆ ಮತ್ತು ವೈದ್ಯಕೀಯ ಸೇವೆಗಳನ್ನು ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಹಜ್ ಯಾತ್ರೆಯ ಯಶಸ್ಸಿಗೆ ಅವರ ಶ್ರಮವೇ ಕಾರಣ ಎಂದು ಮಕ್ಕಾದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ರಾಜಕುಮಾರ ಖಾಲಿದ್ ಅಲ್ ಫೈಸಲ್ ಹೇಳಿದ್ದಾರೆ.
Previous Post Next Post