ಮರ್ಕಝುಲ್ ಹುದಾ ರಿಯಾದ್ ಘಟಕ: ಅಶ್ರಫ್ ಕಿಲ್ಲೂರು,ಅಶ್ರಫ್ ಕೆಎಮ್ಮೆಸ್,ಹಬೀಬ್ ತೆಕ್ಕಾರ್ ಸಾರಥಿಗಳು

ಮರ್ಕಝುಲ್ ಹುದಾ ರಿಯಾದ್ ಘಟಕ: ಅಶ್ರಫ್ ಕಿಲ್ಲೂರು,ಅಶ್ರಫ್ ಕೆಎಮ್ಮೆಸ್,ಹಬೀಬ್ ತೆಕ್ಕಾರ್ ಸಾರಥಿಗಳು 
ಪುತ್ತೂರು-ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ ರಿಯಾದ್ ಘಟಕದ ಮಹಾಸಭೆ ಮತ್ತು ಶೈಕ್ಷಣಿಕ ಸಮಾವೇಶವು ರಿಯಾದ್, ಬತ್ತಾ,,ಲುಹಾ ಆಡಿಟೋರಿಯಂನಲ್ಲಿ ಕೇಂದ್ರ ಸಮಿತಿಯ ಉಪಾಧ್ಯಕ್ಷ ಡಾ. ಎಮ್ಮೆಸ್ಸೆಂ. ಅಬ್ದುಲ್ ರಶೀದ್ ಸಖಾಫಿ ಝೈನೀ ಕಾಮಿಲ್ ಅವರ ನೇತೃತ್ವದಲ್ಲಿ ನಡೆಯಿತು.

ಗಸೀಂ ಮೆಡಿಕಲ್ ಯೂನಿವರ್ಸಿಟಿ ಅಸಿಸ್ಟೆಂಟ್ ಪ್ರೊಫೆಸರ್ ಡಾ. ಮಹ್‌ಮೂದ್ ಮೂತೇಡತ್ತ್ ಉದ್ಘಾಟಿಸಿದರು.
ಮುಂದಿನ ಅವಧಿಯ ಕಾರ್ಯಕಾರಿ ಸಮಿತಿಯ ಅಧ್ಯಕ್ಷರಾಗಿ ಅಶ್‌ರಫ್ ಕಿಲ್ಲೂರು, ಪ್ರಧಾನ ಕಾರ್ಯದರ್ಶಿಯಾಗಿ ಕೆ.ಎಂ.ಎಸ್.ಅಶ್‌ರಫ್ ನೀರಕಟ್ಟೆ, ಕೋಶಾಧಿಕಾರಿಯಾಗಿ ಟಿ.ಎಚ್.ಹಬೀಬುಲ್ಲಾ ತೆಕ್ಕಾರ್, ಉಪಾಧ್ಯಕ್ಷರಾಗಿ ಯೂಸುಫ್ ಚೆನ್ನಾರ್,ಅಬ್ದುಲ್ ರವೂಫ್ ಇಂಜಿನಿಯರ್ ಸುಳ್ಯ, ಜತೆ ಕಾರ್ಯದರ್ಶಿಗಳಾಗಿ ಶಿಹಾಬುದ್ದೀನ್  ಹಳೆಯಂಗಡಿ,ಅನ್ಸಾರ್ ಕೈಕಂಬ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಅಬ್ದುಸ್ಸಲಾಂ ಎಣ್ಮೂರ್,ದಾವೂದ್ ಸ‌ಅದಿ ಉಪ್ಪಿನಂಗಡಿ, ಹನೀಫ್ ಬೆಳ್ಳಾರೆ, ಅಬ್ದುಸ್ಸಲಾಂ ಹಳೆಯಂಗಡಿ,ಅಬ್ದುಲ್ ಮಜೀದ್ ಕಕ್ಕಿಂಜೆ,ಫಝಲ್ ಬನ್ನೂರು,ಫಾರೂಖ್ ಪಾಣೆಮಂಗಳೂರು ಇವರನ್ನು ಆರಿಸಲಾಯಿತು.
ಸಲಹೆಗಾರರಾಗಿ ಮುಸ್ತಫಾ ಸ‌ಅದಿ ಸೂರಿಕುಮೇರು, ಶಿಹಾಬುದ್ದೀನ್ ಸಖಾಫಿ ಮರವೂರು,ಬಶೀರ್ ತಲಪಾಡಿ, ಯೂಸುಫ್ ಕಳಂಜಿಬೈಲ್, ಅಝೀಝ್ ಬಜಪೆ, ಇಸ್ಮಾಯಿಲ್ ಕನ್ನಂಗಾರ್ ಅವರನ್ನು ಆರಿಸಲಾಯಿತು.

ಸಮಾರಂಭದಲ್ಲಿ ನಿಕಟಪೂರ್ವ ಅಧ್ಯಕ್ಷ ಬಶೀರ್ ತಲಪಾಡಿ ಅಧ್ಯಕ್ಷತೆ ವಹಿಸಿದರು, ಮರ್ಕಝುಲ್ ಹುದಾ ಗಲ್ಫ್ ಕೌನ್ಸಿಲ್ ಸಂಚಾಲಕ ಬಶೀರ್ ಇಂದ್ರಾಜೆ, ಸೌದಿ ರಾಷ್ಟ್ರೀಯ ಸಮಿತಿಯ ಪ್ರಧಾನ ಕಾರ್ಯದರ್ಶಿ ನೌಶಾದ್ ಪೋಲ್ಯ, ಕಾರ್ಯದರ್ಶಿ ಶಂಸುದ್ದೀನ್ ಬೈರಿಕಟ್ಟೆ, ಸಂಚಾಲಕ  ಅಬ್ದುಲ್ ರಶೀದ್ ಸಖಾಫಿ ಮಿತ್ತೂರು, ಕೆಸಿಎಫ್ ನಾಯಕ ಶಿಹಾಬುದ್ದೀನ್ ಸಖಾಫಿ ಮರವೂರು,ಡಿಕೆಎಸ್ಸಿ ನಾಯಕ ಅಝೀಝ್ ಬಜಪೆ, ಶುಭ ಹಾರೈಸಿದರು. ಅಶ್ರಫ್ ಕಿಲ್ಲೂರು ಸ್ವಾಗತಿಸಿ ಅಶ್ರಫ್ ಕೆಎಮ್ಮೆಸ್ ಧನ್ಯವಾದ ಸಲ್ಲಿಸಿದರು.
أحدث أقدم