ಫಿಫಾ ವಿಶ್ವ ಕಪ್: ಕಾಲ್ಚೆಂಡಾಟದ ಫೈನಲ್ ಇಂದು, ವಿಶ್ವ ಕಿರೀಟಕ್ಕಾಗಿ ಬಲಿಷ್ಠ ಅರ್ಜೆಂಟೀನ ಫ್ರಾನ್ಸ್‌‌ ನಡುವೆ ಮಹಾಸಮರ

ಫಿಫಾ ವಿಶ್ವ ಕಪ್: ಕಾಲ್ಚೆಂಡಾಟದ ಫೈನಲ್ ಇಂದು, ವಿಶ್ವ ಕಿರೀಟಕ್ಕಾಗಿ ಬಲಿಷ್ಠ ಅರ್ಜೆಂಟೀನ ಫ್ರಾನ್ಸ್‌‌ ನಡುವೆ ಮಹಾಸಮರ 

ಖತಾರ್: ಭಾರತೀಯ ಕಾಲಮಾನದ ಪ್ರಕಾರ ಇಂದು ರಾತ್ರಿ 08.30ಕ್ಕೆ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಎರಡು ಬಲಿಷ್ಠ ತಂಡಗಳಾದ ಅರ್ಜೆಂಟೀನಾ ಹಾಗೂ ಫ್ರಾನ್ಸ್ ಪ್ರಶಸ್ತಿಗಾಗಿ ಸೆಣೆಸಾಟ ನಡೆಸಲಿದೆ. ಲುಸೈಲ್‌ ಕ್ರೀಡಾಂಗಣದಲ್ಲಿ 88 ಸಾವಿರಕ್ಕೂ ಅಧಿಕ ಪ್ರೇಕ್ಷಕರ ಮುಂದೆ ಈ ಹೈವೋಲ್ಟೇಜ್ ಕದನ ಏರ್ಪಡಿಸಲಾಗಿದೆ.

ಕತಾರ್‌ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್‌ (FIFA World Cup) ಅಂತಿಮ ಹಂತಕ್ಕೆ ಬಂದು ನಿಂತಿದೆ. ಭಾರತೀಯ ಕಾಲಮಾನದ ಪ್ರಕಾರ ಇಂದು ರಾತ್ರಿ 08.30ಕ್ಕೆ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಎರಡು ಬಲಿಷ್ಠ ತಂಡಗಳಾದ ಅರ್ಜೆಂಟೀನಾ ಹಾಗೂ ಫ್ರಾನ್ಸ್ (Argentina vs France) ಪ್ರಶಸ್ತಿಗಾಗಿ ಸೆಣೆಸಾಟ ನಡೆಸಲಿದೆ. ಲುಸೈಲ್‌ ಕ್ರೀಡಾಂಗಣದಲ್ಲಿ 88 ಸಾವಿರಕ್ಕೂ ಅಧಿಕ ಪ್ರೇಕ್ಷಕರ ಮುಂದೆ ಈ ಹೈವೋಲ್ಟೇಜ್ ಕದನ ಏರ್ಪಡಿಸಲಾಗಿದೆ. ಗುಂಪು ಹಂತದಲ್ಲಿ ಸೌಧಿ ಅರೇಬಿಯಾ ವಿರುದ್ಧ ಅಚ್ಚರಿಯ ಸೋಲಿನ ಆಘಾತ ಅನುಭವಿಸಿ ಬಳಿಕ ಪುಟಿದೆದ್ದು ಫೈನಲ್ ತಲುಪಿರುವ  ಮೆಸ್ಸಿ (Lionel Messi) ನಾಯಕತ್ವದ ಅರ್ಜೆಂಟೀನಾ ಪ್ರಶಸ್ತಿ ಗೆಲ್ಲುವ ಗೆಲ್ಲುವ ನೆಚ್ಚಿನ ತಂಡ. ಹಾಲಿ ಚಾಂಪಿಯನ್ ಫ್ರಾನ್ಸ್ ಕೂಡ ಬಲಿಷ್ಠವಾಗಿದ್ದು ಚಾಂಪಿಯನ್ ಪಟ್ಟ ಉಳಿಸಲು ತಯಾರಿ ನಡೆಸಿದೆ. 

ಕ್ರೊವೇಷಿಯಾ ಮೂರನೇ ಸ್ಥಾನ:

ಕ್ರೊವೇಷಿಯಾ ತಂಡ ಫಿಫಾ ವಿಶ್ವಕಪ್​ನ ಪ್ಲೇ ಆಫ್​ ಪಂದ್ಯದಲ್ಲಿ ಗೆಲುವು ಸಾಧಿಸಿ ಮೂರನೇ ಸ್ಥಾನ ಪಡೆದುಕೊಂಡಿದೆ. ಶನಿವಾರ ರಾತ್ರಿ ನಡೆದ ಮೂರನೇ ಸ್ಥಾನಕ್ಕಾಗಿನ ಪಂದ್ಯದಲ್ಲಿ ಮೊರಾಕ್ಕೊ ವಿರುದ್ಧ 2-1 ಗೋಲ್​ಗಳ ಜಯ ಸಾಧಿಸಿತು. ಈ ಮೂಲಕ ವಿಶ್ವಕಪ್​ ಇತಿಹಾಸದಲ್ಲಿ ಮೂರನೇ ಬಾರಿ ಟಾಪ್​ 3 ಸ್ಥಾನ ಗಿಟ್ಟಿಸಿಕೊಂಡಿತು. ಕಳೆದ ಆವೃತ್ತಿಯ ವಿಶ್ವಕಪ್​ನಲ್ಲಿ ಕ್ರೊವೇಷಿಯಾ ರನ್ನರ್​ ಅಪ್​ ಸ್ಥಾನ ಪಡೆದುಕೊಂಡಿದ್ದರೆ, 1998ರಲ್ಲಿ ನೆದರ್ಲೆಂಡ್ಸ್​ ತಂಡವನ್ನು 2-1 ಗೋಲ್​ಗಳಿಂದ ಸೋಲಿಸಿ ಎರಡನೇ ರನ್ನರ್​ಅಪ್​ ಸ್ಥಾನ ಪಡೆದುಕೊಂಡಿತ್ತು. ಗೆದ್ದ ಕ್ರೊವೇಷಿಯಾ ತಂಡಕ್ಕೆ 225 ಕೋಟಿ ರೂಪಾಯಿ ಬಹುಮಾನ ಲಭಿಸಿದೆ. ನಾಲ್ಕನೇ ಸ್ಥಾನ ಪಡೆದ ಮೊರಾಕ್ಕೊಗೆ 205 ಕೋಟಿ ರೂಪಾಯಿ ಬಹುಮಾನ ನೀಡಲಾಯಿತು.

أحدث أقدم