ರಾಜ್ಯದ ಜನತೆಗೆ ಭರ್ಜರಿ ಗುಡ್ ನ್ಯೂಸ್: ಐದು ಗ್ಯಾರಂಟಿಗಳ ಜಾರಿ ಘೋಷಣೆ ಮಾಡಿದ ಸರಕಾರ
ಮೊದಲ ಗ್ಯಾರಂಟಿಯಾಗಿ 'ಗೃಹ ಜ್ಯೋತಿ' ಯೋಜನೆ ಜಾರಿ
ಒಂದನೇ ಗ್ಯಾರಂಟಿ ಅಂದ್ರೆ ಗೃಹಜ್ಯೋತಿ ಯೋಜನೆ. ಮೊದಲು ಕೊಟ್ಟ ವಾಗ್ದಾನವನ್ನೇ ನಾವು ಮೊದಲು ಈಡೇರಿಸುತ್ತೇವೆ. 200 ಯೂನಿಟ್‌ವರೆಗೆ ಉಚಿತವಾಗಿ ವಿದ್ಯುತ್ ಕೊಡಲು ಸರ್ಕಾರ ನಿರ್ಧರಿಸಿದೆ. ಇದಕ್ಕಾಗಿ 12 ತಿಂಗಳಲ್ಲಿ ವಿದ್ಯುತ್ ಬಳಕೆ ಮಾಡಿರುವ ಸರಾಸರಿ ತೆಗೆದುಕೊಳ್ತೇವೆ. ಒಂದು ವರ್ಷದಲ್ಲಿ ಬಳಕೆ ಮಾಡಿರುವ ವಿದ್ಯುತ್ ಸರಾಸರಿಯಲ್ಲಿ 200 ಯೂನಿಟ್‌ಗಿಂತ ಕಡಿಮೆ ಇದ್ದವರು ಗೃಹಜ್ಯೋತಿ ಫಲಾನುಭವಿಗಳಾಗಲಿದ್ದಾರೆ.
ಜುಲೈ 1ರಿಂದ ಗೃಹಜ್ಯೋತಿ ಯೋಜನೆ ಫಲಾನುಭವಿಗಳು ಕರೆಂಟ್ ಬಿಲ್ ಕಟ್ಟುವಂತಿಲ್ಲ. ತಿಂಗಳಿಗೆ 200 ಯೂನಿಟ್ ವಿದ್ಯುತ್ ಉಚಿತ. ಜುಲೈ 1ರಿಂದ ವಿದ್ಯುತ್ ಬಳಸುವವರು ಆಗಸ್ಟ್ ತಿಂಗಳಿಗೆ ಕರೆಂಟ್ ಬಿಲ್ ಕಟ್ಟಬೇಕಿಲ್ಲ. ಆದರೆ ಈಗಿನ ಬಿಲ್ ಬಾಕಿ ಉಳಿಸಿಕೊಂಡವರು ಅವರೇ ಬಾಕಿ ಬಿಲ್ ಕಟ್ಟಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ
ಶಕ್ತಿ ಯೋಜನೆಯಲ್ಲಿ ಘೋಷಿಸಿದಂತೆ ರಾಜ್ಯದ ಎಲ್ಲಾ ಮಹಿಳೆಯರಿಗೂ ಉಚಿತ ಪ್ರಯಾಣ ಘೋಷಿಸಿದೆ. ಜೂನ್ 11ರಿಂದ ಮಹಿಳೆಯರು ಕಿಲೋ ಮೀಟರ್ ಮಿತಿಯಿಲ್ಲದೆ ಕೆಂಪು ಬಸ್ಗಳಲ್ಲಿ ರಾಜ್ಯಾದ್ಯಂತ ಉಚಿತವಾಗಿ ಓಡಾಡಬಹುದು ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
ಯಾವೆಲ್ಲ ಬಸ್ಗಳಲ್ಲಿ ಉಚಿತ ಪ್ರಯಾಣ?
- ಕೆಎಸ್ಆರ್ಟಿಸಿ, ಬಿಎಂಟಿಸಿ ಬಸ್ಗಳಲ್ಲಿ ಉಚಿತ ಪ್ರಯಾಣ
- ಸ್ಲೀಪರ್ ಬಸ್ಗಳಲ್ಲಿ ಉಚಿತ ಪ್ರಯಾಣವಿಲ್ಲ
- ಎಸಿ ಮತ್ತು ಐಷಾರಾಮಿ ಬಸ್ಗಳಲ್ಲಿ ಉಚಿತ ಪ್ರಯಾಣವಿಲ್ಲ
- ಅಂತಾರಾಜ್ಯ ಪ್ರಯಾಣಕ್ಕಿಲ್ಲ ಉಚಿತ ಸೌಲಭ್ಯ
ಗೃಹ ಲಕ್ಷ್ಮಿ ಯೋಜನೆ: ಆಗಸ್ಟ್ 15 ರಿಂದ ಎಲ್ಲಾ ತಿಂಗಳು ಮನೆ ಯಜಮಾನಿಗೆ 2000₹ ಜಮೆ
ಮನೆ ಯಜಮಾನಿ ಖಾತೆಗೆ 2000 ರೂ. ಜಮೆ ಮಾಡುತ್ತೇವೆ: ಸಿದ್ದರಾಮಯ್ಯ
ಮನೆ ಯಜಮಾನಿ ಅಕೌಂಟ್ಗೆ ತಿಂಗಳಿಗೆ 2 ಸಾವಿರ ರೂ. ಜಮಾ ಮಾಡುತ್ತೇವೆ ಎಂದಿದ್ದೇವೆ. ಆದರೆ ಇದಕ್ಕಾಗಿ ಅಕೌಂಟ್ ನಂಬರ್, ಆಧಾರ್ ನಂಬರ್, ಅರ್ಜಿ ಮುಂತಾದವನ್ನು ನೀಡಬೇಕು. ನಂತರ ಇಲಾಖೆಯವರು ಈ ಮಾಹಿತಿಯನ್ನು ಪ್ರಾಸೆಸ್ ಮಾಡಿ ಆಗಸ್ಟ್ 15ನೇ ತಾರೀಕಿನಿಂದ ಈ ಯೋಜನೆಯನ್ನು ಜಾರಿಗೆ ತರುತ್ತಾರೆ. ಈಗಾಗಲೇ ಸಾಮಾಜಿಕ ಭದ್ರತಾ ಯೋಜನೆಯಡಿ ಪಿಂಚಣಿ ಪಡೆಯತ್ತಿರುವವರಿಗೂ ಈ ಭತ್ಯೆ ಸಿಗಲಿದೆ. ಈ ಯೋಜನೆ ಎಲ್ಲಾ ಬಿಪಿಎಲ್ ಹಾಗೂ ಎಪಿಎಲ್ ಮಹಿಳೆಯರಿಗೆ ಈ ಲಾಭ ಸಿಗಲಿದೆ' ಎಂದು ಸುದ್ದಿಗೋಷ್ಟಿಯಲ್ಲಿ ಹೇಳಿದರು.
ಯುವ ನಿಧಿ ಯೋಜನೆ
2022-23ರಲ್ಲಿ ವ್ಯಾಸಂಗ ಮಾಡಿ ಯಾವುದೇ ಪದವಿ ಪಡೆದವರಿಗೆ 24 ತಿಂಗಳವರೆಗೆ ಪ್ರತಿ ತಿಂಗಳಿಗೆ 3000 ರೂ, ಡಿಪ್ಲೊಮಾ ಮಾಡಿದವರಿಗೆ 1500 ನೀಡಲಾಗುವುದು.
ಈ ಎರಡು ವರ್ಷದೊಳಗೆ ಉದ್ಯೋಗ ಪಡೆದರೆ ಹಣ ನಿಲ್ಲಿಸಲಾಗುವುದು. ಇದು ತೃತೀಯ ಲಿಂಗಿಗಳಿಗೂ ಈ ಯೋಜನೆ ಅನ್ವಯವಾಗಲಿದೆ. ಅರ್ಹರು ಅರ್ಜಿ ಸಲ್ಲಿಸಬೇಕಾಗುತ್ತದೆ. ಅರ್ಜಿ ಸಲ್ಲಿಸಲು ಆರು ತಿಂಗಳವರೆಗೆ ಅವಕಾಶವಿದೆ.
ಅನ್ನ ಭಾಗ್ಯ ಯೋಜನೆ
ಜುಲೈ 1ರಿಂದ ಎಲ್ಲಾ ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್ ದಾರರಿಗೆ ತಲಾ ಹತ್ತು ಕೆಜಿ ಆಹಾರ ಧಾನ್ಯ ಉಚಿತ.