ಮರ್ಕಝುಲ್ ಇಸ್ಲಾಮೀ: ಎಸ್ಸೆಸ್ಸೆಫ್ ಫಿನಿಷಿಂಗ್ ಚಾಲೆಂಜ್ ನಾವುಂದದಲ್ಲಿ ಅದ್ದೂರಿ ಚಾಲನೆ

ಮರ್ಕಝುಲ್ ಇಸ್ಲಾಮೀ: ಎಸ್ಸೆಸ್ಸೆಫ್ ಫಿನಿಷಿಂಗ್ ಚಾಲೆಂಜ್ ನಾವುಂದದಲ್ಲಿ ಅದ್ದೂರಿ ಚಾಲನೆ
ಉಡುಪಿ: ಸುನ್ನೀ ಸಂಘಟನೆಗಳ ಕೇಂದ್ರ ಕಛೇರಿ ಮರ್ಕಝುಲ್ ಇಸ್ಲಾಮೀ ಇದರ ಫಿನಿಷಿಂಗ್ ಚಾಲೆಂಜ್ ಪ್ರಯುಕ್ತ ಎಸ್ಸೆಸ್ಸೆಫ್ ರಾಜ್ಯ ನಾಯಕರ ಸೆಕ್ಟರ್ ಸಂಚಾರ ನಾವುಂದದಲ್ಲಿ ಅದ್ದೂರಿಯಾಗಿ ಆರಂಭಗೊಂಡಿತು. 

    ಮಂಗಳೂರು ಅಡ್ಯಾರ್ ಕಣ್ಣೂರಿನಲ್ಲಿ ನಿರ್ಮಾಣ ಹಂತದಲ್ಲಿರುವ ಮರ್ಕಝುಲ್ ಇಸ್ಲಾಮೀ ಇದರ ಕಾಮಗಾರಿ ಕೊನೆಯ ಹಂತದಲ್ಲಿದ್ದು ಎಸ್ಸೆಸ್ಸೆಫ್ ಕಾರ್ಯಕರ್ತರಿಂದ ಒಂದು ಚೀಲ ಸಿಮೆಂಟ್‌ ಸಂಗ್ರಹಿಸಲು ರಾಜ್ಯ ನಾಯಕರು ಸೆಕ್ಟರ್ ಸಂಚಾರ ಹಮ್ಮಿಕೊಂಡಿದ್ದಾರೆ. 

  ಮೂರು ತಂಡಗಳಾಗಿ ರಾಜ್ಯ ನಾಯಕರು 117 ಸೆಕ್ಟರ್‌ಗಳಿಗೆ ಭೇಟಿ ನೀಡಲಿದ್ದು ಸಾವಿರಾರು ಕಾರ್ಯಕರ್ತರ ಜೊತೆ ಸಮಾಲೋಚನೆ ನಡೆಸಲಿದ್ದಾರೆ. ಫಿನಿಷಿಂಗ್ ಚಾಲೆಂಜ್ ಉದ್ಘಾಟನೆಯಲ್ಲಿ ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಹಾಫಿಝ್ ಸುಫ್ಯಾನ್ ಸಖಾಫಿ ಅಲ್ ಹಿಕಮಿ, ಮಾಜಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಡ್ವೊಕೇಟ್ ಇಲ್ಯಾಸ್ ನಾವುಂದ, ರಾಜ್ಯ ಕಾರ್ಯದರ್ಶಿ ಕೆಕೆ ಅಶ್ರಫ್ ಸಖಾಫಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ತ್ವಾಹಿರ್ ಮೂಡುಗೋಪಾಡಿ ಉಪಸ್ಥಿತರಿದ್ದರು.
Previous Post Next Post