ಸರಕಾರ ರಚನೆಯ ಕಸರತ್ತು 'ಕೈ'ಬಿಟ್ಟ ಇಂಡಿಯಾ ಮೈತ್ರಿಕೂಟ, ಸರಿಯಾದ ಸಮಯದಲ್ಲಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆಂದ ಖರ್ಗೆ

ಸರಕಾರ ರಚನೆಯ ಕಸರತ್ತು 'ಕೈ'ಬಿಟ್ಟ ಇಂಡಿಯಾ ಮೈತ್ರಿಕೂಟ, ಸರಿಯಾದ ಸಮಯದಲ್ಲಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆಂದ ಖರ್ಗೆ


ಹೊಸದಿಲ್ಲಿ: “ಕಿಂಗ್‌ಮೇಕರ್‌’ಗಳಾದ ಟಿಡಿಪಿ ಮತ್ತು ಜೆಡಿಯು ವರಿಷ್ಠರು ಎನ್‌ಡಿಎಗೆ ಬೆಂಬಲ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಸರಕಾರ ರಚಿಸುವ ಪ್ರಯತ್ನವನ್ನು ಕಾಂಗ್ರೆಸ್‌ ನೇತೃತ್ವದ ಐಎನ್‌ಡಿಐಎ ಒಕ್ಕೂಟವು ಕೈಬಿಟ್ಟಿದ್ದು, ವಿಪಕ್ಷ ಸ್ಥಾನದಲ್ಲಿ ಕುಳಿತುಕೊಳ್ಳಲು ನಿರ್ಧರಿಸಿದೆ.


ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ಬುಧವಾರ ನಡೆದ ಐಎನ್‌ಡಿಐಎ ಒಕ್ಕೂಟದ ನಾಯಕರ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

ಎರಡು ತಾಸಿನ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ ಅವರು, “ಬಿಜೆಪಿ ಸರಕಾರ ಆಡಳಿತ ನಡೆಸಬಾರದು ಎಂಬ ಜನರ ಆಶಯವನ್ನು ಈಡೇರಿಸಲು ಐಎನ್‌ಡಿಐಎ ಒಕ್ಕೂಟವು ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರಗಳನ್ನು ಕೈಗೊಳ್ಳುತ್ತದೆ’ ಎಂದು ಹೇಳಿದರು. ಇದೇ ವೇಳೆ ಅವರು ಸಭೆಯಲ್ಲಿ
ಚರ್ಚಿಸಿ ನಿರ್ಧಾರ ಕೈಗೊಳ್ಳಲಾದ ಹೇಳಿಕೆಯನ್ನು ಓದಿ ಹೇಳಿದರು. ಐಎನ್‌ಡಿಐಎ ಒಕ್ಕೂಟವನ್ನು ಯಾವುದೇ ಪಕ್ಷ ಯಾವುದೇ ಸಮಯದಲ್ಲಿ ಬೇಕಿದ್ದರೂ ಬಂದು ಸೇರಿಕೊಳ್ಳಬಹುದು ಎಂಬ ಮುಕ್ತ ಆಹ್ವಾನವನ್ನೂ ನೀಡಿದರು.

ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರದ ದಬ್ಟಾಳಿಕೆ ಆಡಳಿತದ ವಿರುದ್ಧ ವಿಪಕ್ಷ ನಾಯಕರು ತಮ್ಮ ಹೋರಾಟವನ್ನು ಮುಂದುವರಿಸಲಿದ್ದಾರೆ. ನಾವು ಜತೆಯಾಗಿ ಕೆಲಸ ಮಾಡಲು ನಿರ್ಧರಿಸಿದ್ದು, ಚುನಾವಣೆ ಯಲ್ಲಿ ಜನರಿಗೆ ನೀಡಲಾದ ಭರವಸೆ ಗಳನ್ನು ಈಡೇರಿಸಲು ಬದ್ಧರಾಗಿದ್ದೇವೆ ಎಂದು ತಿಳಿಸಿದರು.

ಬಿಜೆಪಿಯ ದ್ವೇಷ, ಭ್ರಷ್ಟಾಚಾರ ಮತ್ತು ಒಡೆದಾಳುವ ನೀತಿಯ ವಿರುದ್ಧ ಜನರು ಮತಗಳ ಮೂಲಕ ತಕ್ಕ ಉತ್ತರ ನೀಡಿದ್ದಾರೆ. ಹಾಗಾಗಿ ಅವರನ್ನು ಐಎನ್‌ಡಿಐಎ ಒಕ್ಕೂಟವು ಅಭಿನಂದಿಸುತ್ತದೆ. ಭಾರತದ ಸಂವಿಧಾನ ರಕ್ಷಣೆ, ಬೆಲೆ ಏರಿಕೆ ಹಾಗೂ ನಿರುದ್ಯೋಗದ ವಿರುದ್ಧ, ಪ್ರಜಾಪ್ರಭುತ್ವ ರಕ್ಷಣೆ, ಬಂಡವಾಳ ಶಾಹಿಗಳ ವಿರುದ್ಧ ಜನರು ಫ‌ಲಿತಾಂಶ ನೀಡಿದ್ದಾರೆ. ಈ ಫ‌ಲಿತಾಂಶವು ನರೇಂದ್ರ ಮೋದಿ ನೇತೃತ್ವದ ಸರಕಾರದ ವಿರುದ್ಧ ಜನರು ನೀಡಿರುವ ತೀರ್ಪು ಎಂದು ಮಲ್ಲಿಕಾರ್ಜುನ ಖರ್ಗೆ ಪ್ರತಿಪಾದಿಸಿದ್ದಾರೆ.

ಐಎನ್‌ಡಿಐಎ ಸಭೆಯಲ್ಲಿ ಏನೇನಾಯಿತು?
-ಬಿಜೆಪಿ ಸರಕಾರದ ವಿರುದ್ಧ ಸೂಕ್ತ ಸಮಯ
ದಲ್ಲಿ ಸೂಕ್ತ ನಿರ್ಧಾರ
-ಪ್ರಚಾರ ವೇಳೆ ನೀಡಿದ್ದ ಭರವಸೆ ಈಡೇರಿಸಲು ಐಎನ್‌ಡಿಐಎ ಬದ್ಧ


ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದೇನು?


ಭಾರತ ಮೈತ್ರಿಕೂಟದ ನಾಯಕರು ಮುಂದಿನ ಕಾರ್ಯತಂತ್ರದ ಬಗ್ಗೆ ದೆಹಲಿಯಲ್ಲಿ ಸಭೆ ನಡೆಸಿದರು. ಎಲ್ಲಾ ಮಿತ್ರಪಕ್ಷಗಳ ಸಭೆಯ ನಂತರ, ಇಂಡಿಯಾ ಬಣವು ಸರ್ಕಾರ ರಚಿಸಲು ಹಕ್ಕು ಮಂಡಿಸುವುದಿಲ್ಲ ಎಂದು ನಿರ್ಧರಿಸಲಾಯಿತು. ಈ ಜನಾದೇಶವು ಭಾರತದ ಸಂವಿಧಾನವನ್ನು ರಕ್ಷಿಸಲು ಮತ್ತು ಹಣದುಬ್ಬರ, ನಿರುದ್ಯೋಗ, ಕ್ರೋನಿ ಕ್ಯಾಪಿಟಲಿಸಂ ವಿರುದ್ಧ ಮತ್ತು ಸಂವಿಧಾನವನ್ನು ಉಳಿಸಲು ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳುತ್ತಾರೆ. ಬಿಜೆಪಿಯ ಫ್ಯಾಸಿಸ್ಟ್ ಆಡಳಿತದ ವಿರುದ್ಧ ಭಾರತ ಮೈತ್ರಿಕೂಟ ಹೋರಾಟ ಮುಂದುವರಿಸಲಿದೆ. ಮೋದಿ ಆಡಳಿತ ಬೇಡ ಎಂಬ ಜನರ ಭಾವನೆಯನ್ನು ಗಮನದಲ್ಲಿಟ್ಟುಕೊಂಡು ನಾವು ಸರಿಯಾದ ಸಮಯದಲ್ಲಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ.


ಬಿಜೆಪಿ ವಿರುದ್ಧದ ತಮ್ಮ ಹೋರಾಟ ಇನ್ನೂ ಮುಂದುವರಿಯುತ್ತದೆ ಎಂದು ಭಾರತ ಮೈತ್ರಿಕೂಟದ ನಾಯಕರು ನಿರ್ಧರಿಸಿದ್ದಾರೆ. ಇದೇ ವೇಳೆ ಮೈತ್ರಿ ವಿಸ್ತರಣೆ ಬಗ್ಗೆಯೂ ಚರ್ಚೆ ನಡೆಯಿತು. ಸಮಾನ ಮನಸ್ಕ ಪಕ್ಷಗಳನ್ನು ಮೈತ್ರಿಕೂಟಕ್ಕೆ ಸೇರಲು ಆಹ್ವಾನಿಸಲಾಗುವುದು ಎಂದು ಸಭೆಯಲ್ಲಿ ನಿರ್ಧರಿಸಲಾಯಿತು.

Previous Post Next Post