ಅಗ್ನಿವೀರ್' ಯೋಜನೆಯನ್ನು ತೆಗೆದುಹಾಕುವಂತೆ ಜೆಡಿಯು ಒತ್ತಾಯ

'ಅಗ್ನಿವೀರ್' ಯೋಜನೆಯನ್ನು ತೆಗೆದುಹಾಕುವಂತೆ ಜೆಡಿಯು ಒತ್ತಾಯ


ನವದೆಹಲಿ: 'ಅಗ್ನಿವೀರ್ ಯೋಜನೆ ಬಗ್ಗೆ ಒಂದು ವರ್ಗದ ಮತದಾರರು ತೀವ್ರ ಅಸಮಾಧಾನಗೊಂಡಿದ್ದಾರೆ. ಸಾರ್ವಜನಿಕರಿಂದ ಪ್ರಶ್ನಿಸಲ್ಪಟ್ಟಿರುವ ಯೋಜನೆಗಳ ಕುರಿತು ವಿವರವಾಗಿ ಚರ್ಚಿಸಿ ತೆಗೆದುಹಾಕಬೇಕು ಎಂದು ಜೆಡಿಯು ವಕ್ತಾರ ಕೆ.ಸಿ.ತ್ಯಾಗಿ ಅವರು ಗುರುವಾರ ಹೇಳಿದ್ದಾರೆ. ಇನ್ನೂ ಎನ್​ಡಿಎ ಸರ್ಕಾರ ರಚಿಸುವ ಮುನ್ನವೇ ಬಿಹಾರ ಮುಖ್ಯಮಂತ್ರಿ ನಿತೀಶ್​ ಕುಮಾರ್​ ನೇತೃತ್ವದ ಜೆಡಿಯು ಕ್ಯಾತೆ ತೆಗೆದಿದ್ದು, ಕೆಲವು ಯೋಜನೆಗಳ ಕುರಿತು ಮರುಚಿಂತನೆ ನಡೆಸುಂತೆ ಬಿಜೆಪಿಗೆ ಹೇಳಿದೆ.


"ಏಕರೂಪ ನಾಗರಿಕ ಸಂಹಿತೆ ಬಗ್ಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ, ಬಿಹಾರ ಮುಖ್ಯಮಂತ್ರಿಗಳು ಕಾನೂನು ಆಯೋಗದ ಮುಖ್ಯಸ್ಥರಿಗೆ ಪತ್ರ ಬರೆದಿದ್ದಾರೆ. ನಾವು ಅದನ್ನು ವಿರೋಧಿಸುವುದಿಲ್ಲ ಆದರೆ ಎಲ್ಲಾ ಮಿತ್ರಪಕ್ಷಗಳೊಂದಿಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕು" ಎಂದು ತ್ಯಾಗಿ ತಿಳಿಸಿದ್ದಾರೆ.

Previous Post Next Post