ಎಸ್ಸೆಸ್ಸೆಫ್ ದಕ್ಷಿಣ ಕನ್ನಡ ಈಸ್ಟ್ ಜಿಲ್ಲಾ ಸಾಹಿತ್ಯೋತ್ಸವ ಇಂದಿನಿಂದ ಈಶ್ವರಮಂಗಲದಲ್ಲಿ
ಪುತ್ತೂರು: ಎಸ್ಸೆಸ್ಸೆಫ್ ದ.ಕ ಈಸ್ಟ್ ಜಿಲ್ಲಾ ಸಾಹಿತ್ಯೋತ್ಸವದ ಕಲಾ ಸಾಹಿತ್ಯ ಸ್ಪರ್ಧೆಗಳು ಇಂದಿನಿಂದ ಎರಡು ದಿನಗಳ ಕಾಲ (ನವೆಂಬರ್ 09, 10) ಈಶ್ವರಮಂಗಲ ತ್ವೈಬ ಎಜ್ಯುಕೇಶನ್ ಸೆಂಟರ್ ನಲ್ಲಿ ನಡೆಯಲಿದೆ.
ನಿನ್ನೆ ಮಧ್ಯಾಹ್ನ ಜುಮಾ ನಮಾಝಿನ ಬಳಿಕ ಜಿಲ್ಲಾ ವ್ಯಾಪ್ತಿಯ ಹಲವು ದರ್ಗಾ ಕೇಂದ್ರಗಳಲ್ಲಿ ಝಿಯಾರತ್ ನೊಂದಿಗೆ ಕಾರ್ಯಕ್ರಮಕ್ಕೆ ಅಧಿಕೃತ ಚಾನೆಯಾಗಿದೆ. ಇಂದು ಮಧ್ಯಾಹ್ನ 2.30ಕ್ಕೆ ಸರಿಯಾಗಿ ಧ್ವಜಾರೋಹಣ ಹಾಗೂ 3 ಗಂಟೆಗೆ ಪ್ರಧಾನ ವೇದಿಕೆ ಉದ್ಘಾಟನೆಗೊಳ್ಳಲಿದೆ. ಜ್ಯೂನಿಯರ್, ಸೀನಿಯರ್, ಜನರಲ್ ಮತ್ತು ಕ್ಯಾಂಪಸ್ ವಿಭಾಗಗಳ ಕಾರ್ಯಕ್ರಮಗಳು 5 ವೇದಿಕೆಗಳಲ್ಲಿ ನಡೆಯಲಿದೆ. ಎರಡು ದಿವಸಗಳಲ್ಲಿ ನಡೆಯುವ ಜಿಲ್ಲಾ ಮಟ್ಟದ ಕಲಾ ಸಾಹಿತ್ಯ ಕಾರ್ಯಕ್ರಮದಲ್ಲಿ ಬೆಳ್ತಂಗಡಿ, ಉಪ್ಪಿನಂಗಡಿ, ವಿಟ್ಲ, ಕಡಬ, ಪುತ್ತೂರು, ಸುಳ್ಯ ಡಿವಿಷನ್ ವ್ಯಾಪ್ತಿಯ ಸುಮಾರು 700ರಷ್ಟು ಸ್ಪರ್ಧಾರ್ಥಿಗಳು ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.