ಗೋವಾದಲ್ಲಿ ಇಂದಿನಿಂದ ರಾಷ್ಟ್ರ ಮಟ್ಟದ ಸಾಹಿತ್ಯೋತ್ಸವ
ಗೋವಾ: ಅಖಿಲ ಭಾರತ ಎಸ್ಸೆಸ್ಸೆಫ್ ಪ್ರತಿ ವರ್ಷ ನಡೆಸಿಕೊಂಡು ಬರುವ ಸಾಹಿತ್ಯೋತ್ಸವ ಈ ಬಾರಿ ಗೋವಾದಲ್ಲಿ ನಡೆಯಲಿದೆ. ಯುನಿಟ್ ಸೆಕ್ಟರ್ ಡಿವಿಷನ್ ಜಿಲ್ಲೆ ರಾಜ್ಯ ಮಟ್ಟದ ಸಾಹಿತ್ಯೋತ್ಸವ ಎಲ್ಲಾ ರಾಜ್ಯಗಳಲ್ಲೂ ಮುಗಿದು ಇಂದಿನಿಂದ ಮೂರು ದಿನಗಳ ಕಾಲ ಗೋವಾದ ಮಡ್ಗಾಗಾವ್ ನಲ್ಲಿ ರಾಷ್ಟ್ರಮಟ್ಟದ ಸಾಹಿತ್ಯೋತ್ಸವ ನಡೆಯಲಿದೆ.
ದೇಶದ 26 ರಾಜ್ಯಗಳಿಂದ ಸ್ಪರ್ಧಾರ್ತಿಗಳು ಭಾಗವಹಿಸುತ್ತಿದ್ದು ಭಾನುವಾರ ಮಧ್ಯಾಹ್ನ ಸಮಾರೋಪ ಗೊಳ್ಳಲ್ಲಿದೆ. ವಿದ್ಯಾರ್ಥಿಗಳಲ್ಲಿ ಅಡಗಿರುವ ಸಪ್ತ ಪ್ರತಿಭೆಗಳನ್ನು ಗುರುತಿಸಿ ಪೋಷಿಸಿ ಬೆಳೆಸಲು ಎಸ್ಸೆಸ್ಸೆಫ್ ಪ್ರತಿ ವರ್ಷ ಸಾಹಿತ್ಯೋತ್ಸವ ನಡೆಸಿ ಬರುತ್ತಿದೆ. ಕಳೆದ ಸಾಲಿನ ಸಾಹಿತ್ಯೋತ್ಸವದಲ್ಲಿ ಕರ್ನಾಟಕ ಪ್ರಥಮ ಸ್ಥಾನವನ್ನು ಕೇರಳ ದ್ವಿತೀಯ ಸ್ಥಾನವನ್ನು ಜಮ್ಮು ಕಾಶ್ಮೀರ ತೃತೀಯ ಸ್ಥಾನವನ್ನು ಪಡೆದುಕೊಂಡಿತ್ತು.