ಆಪರೇಷನ್ ಸಿಂಧೂರ್- ಪಿಒಕೆ ಮೇಲೆ ಭಾರತದ ಕ್ಷಿಪಣಿ ದಾಳಿ, ಒಂಬತ್ತು ಉಗ್ರರ ತಾಣ ಉಡೀಸ್

ಆಪರೇಷನ್ ಸಿಂಧೂರ್- ಪಿಒಕೆ ಮೇಲೆ ಭಾರತದ ಕ್ಷಿಪಣಿ ದಾಳಿ, ಒಂಬತ್ತು ಉಗ್ರರ ತಾಣ ಉಡೀಸ್

ಭಾರತವು ಪಿಒಕೆ (ಪಾಕ್‌ ಆಕ್ರಮಿತ ಕಾಶ್ಮೀರದ ಮೇಲೆ) ಮೇ 7ರ ತಡರಾತ್ರಿ 1.44ಕ್ಕೆ ಭಾರೀ ಕ್ಷಿಪಣೆ ದಾಳಿಯನ್ನು ನಡೆಸಿದೆ. ಉಗ್ರರ ಅಡಗು ತಾಣಗಳನ್ನು ಗುರಿಯಾಗಿಸಿಕೊಂಡು 9 ಕಡೆಗಳಲ್ಲಿ ದಾಳಿ ನಡೆಸಲಾಗಿದೆ. ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಾರತೀಯರ ಮೇಲೆ ಉಗ್ರರು ನಡೆಸಿದ ದಾಳಿಗೆ ಪ್ರತೀಕಾರವಾಗಿ ಈ ದಾಳಿಯನ್ನು ಭಾರತೀಯ ಸೇನೆ ನಡೆಸಿದೆ. ಭಾರತೀಯ ಸೇನೆಯು ಇದಕ್ಕೆ "ಆಪರೇಷನ್ ಸಿಂಧೂರ" ಎಂದು ಹೆಸರು ಇರಿಸಿದೆ. 

ಇಂದು ಮೊಕ್ ಡ್ರಿಲ್ : ಸೈರನ್ ಮೊಳಗಿಸಲಿರುವ ಕಾರಣಕ್ಕೆ ಏನೇನು ನಡೆಯುತ್ತೆ ಎನ್ನುವುದನ್ನು ನೋಡುವುದಾದರೆ...


>> ವಾಯು ದಾಳಿ ವೇಳೆಯಲ್ಲಿ ಸೈರನ್ ಹೇಗೆ ಕಾರ್ಯನಿರ್ವಹಿಸುತ್ತದೆ ಎನ್ನುವುದನ್ನು ಪರೀಕ್ಷಿಸಲಾಗುತ್ತದೆ.
>> ರಕ್ಷಣಾ ತಜ್ಞರು ಯುದ್ಧದ ವೇಳೆ ಯಾವ ರೀತಿ ವರ್ತಿಸಬೇಕು ಎಂದು ಸಾರ್ವಜನಿಕರಿಗೆ ಮಾಹಿತಿ ನೀಡುತ್ತಾರೆ.
>> ಯುದ್ಧ ಮಾಡುವ ದೇಶಗಳ ವಿಮಾನಗಳಿಗೆ ಸ್ಥಳ, ಪ್ರಮುಖವಾಗಿ ನಗರಗಳನ್ನು ಗುರುತಿಸಲು ಸಾಧ್ಯವಾಗಬಾರದೆಂದು ರಾತ್ರಿಯಿಡೀ ವಿದ್ಯುತ್ ಕಟ್ ಮಾಡಲಾಗುತ್ತದೆ.
>> ಭಾರತೀಯ ವಾಯುಪಡೆಯ ಹಾಟ್ ಲಿಂಕ್ ಮತ್ತು ರೇಡಿಯೋ ಸಂವಹನಗಳ ಕಾರ್ಯವೈಖರಿಯನ್ನು ಪರೀಕ್ಷೆ ಮಾಡಲಾಗುತ್ತದೆ.
>> ತುರ್ತು ಸೇವೆ ಮತ್ತು ಸಮನ್ವಯಗಳಿಗೆ ರೂಪಿಸಲಾಗುವ ನಿಯಂತ್ರಣ ಕೊಠಡಿಗಳು ಹೇಗೆ ಕಾರ್ಯನಿರ್ವಹಿಸಬೇಕು ಎಂಬುದನ್ನು ಪರೀಕ್ಷಿಸಲಾಗುತ್ತದೆ.
>> ಅಗ್ನಿಶಾಮಕ ದಳ, ಪೊಲೀಸ್ ಪಡೆ, ವಿಪತ್ತು ನಿರ್ವಹಣಾ ಪಡೆ ಮತ್ತು ಆರೋಗ್ಯ ಸೇವಾ ಸಂಸ್ಥೆಗಳ ಕಾರ್ಯವೈಖರಿಯನ್ನು ಖಾತರಿಪಡಿಸಿಕೊಳ್ಳಲಾಗುತ್ತದೆ.

ರಾಜ್ಯದ ಮಟ್ಟಿಗೆ ಹೇಳುವುದಾದರೆ ಕೈಗಾ ಅಣುಸ್ಥಾವರ ಇರುವ ಉತ್ತರ ಕನ್ನಡ, ಉಷ್ಣವಿದ್ಯುತ್ ಸ್ಥಾವರಗಳನ್ನು ಹೊಂದಿರುವ ರಾಯಚೂರಿನಲ್ಲಿ ನಡೆಸಬೇಕಾಗಿದ್ದ ವಾರ್ ಸೈರನ್ ಅನ್ನು ಕಡೆಯ ಘಳಿಗೆಯಲ್ಲಿ ಮುಂದೂಡಲಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ ಅಣಕು ಡ್ರಿಲ್ ಅಥವಾ ವಾರ್ ಸೈರನ್ ನಡೆಯಲಿದೆ ಎಂದು ತಿಳಿದುಬಂದಿದೆ.

ದೇಶಾದ್ಯಂತ ಒಟ್ಟು 244 ಜಿಲ್ಲೆಗಳ 259 ಸ್ಥಳಗಳಲ್ಲಿ ವಾರ್ ಸೈರನ್ ಮಾಡಲಾಗಿದ್ದು, ಅಲ್ಲೆಲ್ಲಾ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ತಿಳಿಸಲಾಗಿದೆ.



Previous Post Next Post