ಭದ್ರತಾ ಕಾರಣ: ಧರ್ಮಶಾಲಾದಲ್ಲಿ ನಡೆಯುತ್ತಿದ್ದ ಪಂಜಾಬ್ ದಿಲ್ಲಿ ಐಪಿಎಲ್ ಪಂದ್ಯ ಅರ್ಧದಲ್ಲೇ ರದ್ದು

ಭದ್ರತಾ ಕಾರಣ: ಧರ್ಮಶಾಲಾದಲ್ಲಿ ನಡೆಯುತ್ತಿದ್ದ ಪಂಜಾಬ್ ದಿಲ್ಲಿ ಐಪಿಎಲ್ ಪಂದ್ಯ ಅರ್ಧದಲ್ಲೇ ರದ್ದು


ಧರ್ಮಶಾಲಾ: ಪಾಕಿಸ್ತಾನ ಸೇನೆಯು ಜಮ್ಮು ಸೇರಿದಂತೆ ದೇಶದ ಹಲವು ನಗರಗಳ ಮೇಲೆ ಡ್ರೋನ್ ದಾಳಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಇಂದು ಧರ್ಮಶಾಲಾದಲ್ಲಿ ನಡೆಯುತ್ತಿದ್ದ ಐಪಿಎಲ್ ಪಂದ್ಯವನ್ನು  ಅರ್ಧದಲ್ಲೇ ರದ್ದು ಮಾಡಲಾಗಿದೆ.

ಇಂದು ಧರ್ಮಶಾಲಾದಲ್ಲಿ ನಡೆಯುತ್ತಿದ್ದ ದೆಹಲಿ ಮತ್ತು ಪಂಜಾಬ್ ನಡುವಿನ ಐಪಿಎಲ್ ಪಂದ್ಯವನ್ನು ರದ್ದುಗೊಳಿಸಲಾಗಿದೆ.

ಪಾಕಿಸ್ತಾನವು ಜಮ್ಮು ಸೇರಿದಂತೆ ದೇಶದ ಹಲವು ಭಾಗಗಳ ಮೇಲೆ ದಾಳಿ ಮಾಡಿದೆ.ಈ ಹಿನ್ನೆಲೆಯಲ್ಲಿ ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯವನ್ನು ಅರ್ಧಕ್ಕೆ ನಿಲ್ಲಿಸಲಾಗಿದೆ. ಎಲ್ಲಾ ಆಟಗಾರರು ಡ್ರೆಸ್ಸಿಂಗ್ ಕೋಣೆಗೆ ಮರಳಿದ್ದಾರೆ ಮತ್ತು ಫ್ಲಡ್‌ಲೈಟ್‌ಗಳನ್ನು ಸಹ ಆಫ್ ಮಾಡಲಾಗಿದೆ.ಧರ್ಮಶಾಲಾದಲ್ಲಿ ಸಂಪೂರ್ಣ ವಿದ್ಯುತ್ ಕಡಿತಗೊಂಡಿದೆ. ಧರ್ಮಶಾಲಾದಲ್ಲಿ ಸಂಪೂರ್ಣ ಬ್ಲಾಕ್ ಔಟ್ ಕ್ರಮ ಅನುಸರಿಸಿದ್ದರ ಹಿನ್ನೆಲೆಯಲ್ಲಿ ಪಂದ್ಯವನ್ನು ಅರ್ಧದಲ್ಲೇ ರದ್ದುಗೊಳಿಸಿದೆ.

ಈ ಮೊದಲು ಮಳೆಯಿಂದಾಗಿ ಪಂದ್ಯ ಒಂದು ತಾಸು ವಿಳಂಬವಾಗಿ ಆರಂಭವಾಗಿತ್ತು. ಬಳಿಕ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಪಂಜಾಬ್ 10.1 ಓವರ್‌ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ 122 ರನ್ ಗಳಿಸಿತ್ತು.

ಪ್ರಿಯಾಂಶ್ ಆರ್ಯ 70 ಹಾಗೂ ಪ್ರಭಸಿಮ್ರನ್ ಸಿಂಗ್ ಅಜೇಯ 50 ರನ್ ಗಳಿಸಿದ್ದರು.

أحدث أقدم