ಕೆನರಾ ಸಿಂಡಿಕೇಟ್ ಬ್ಯಾಂಕ್ ಗ್ರಾಹಕರಿಗೆ ಮಹತ್ವದ ಸೂಚನೆ , ಜುಲೈ 1ರಿಂದ ಸಂಸ್ಥೆಯ ಐಎಫ್‌ಎಸ್‌ಸಿ ಕೋಡ್ ಬದಲಾಗಲಿದೆ
ಕೆನರಾ ಬ್ಯಾಂಕ್ ಜೊತೆ ವಿಲೀನಗೊಂಡಿರುವ ಸಿಂಡಿಕೇಟ್ ಬ್ಯಾಂಕ್ ಗ್ರಾಹಕರು ಮುಖ್ಯವಾಗಿ ಇಂಡಿಯ ಫೈನಾನ್ಶಿಯಲ್ ಸಿಸ್ಟಮ್ ಕೋಡ್(IFSC), swift ಕೋಡ್, ಚೆಕ್ ಬುಕ್ ಬಗ್ಗೆ ಗಮನ ಹರಿಸಿ, ಬದಲಾವಣೆ ಬಗ್ಗೆ ತಿಳಿದುಕೊಂಡು ವ್ಯವಹರಿಸಲು ಸೂಚಿಸಲಾಗಿದೆ. ಇಲ್ಲದಿದ್ದರೆ, ಹಳೆ ಚೆಕ್ ಬುಕ್, ಕೋಡ್ ಜುಲೈ 1ರಿಂದ ಕಾರ್ಯನಿರ್ವಹಿಸುವುದಿಲ್ಲ.
ವಿಲೀನದ ಬಳಿಕ ಸಿಂಡಿಕೇಟ್ ಬ್ಯಾಂಕ್ IFSC ಕೋಡ್ (SYNB) ಇನ್ಮುಂದೆ ಕೆನರಾಬ್ಯಾಂಕಿನ CNRB ಆಗಿ ಬದಲಾಗಲಿದೆ. NEFT/RTGS/IMPS ಮೂಲಕ ವ್ಯವಹರಿಸುವಾಗ ದಯವಿಟ್ಟು ಹೊಸ IFSC ಕೋಡ್(CNRB) ಎಂದು ತನ್ನ ಗ್ರಾಹಕರಿಗೆ ಕೆನರಾಬ್ಯಾಂಕ್ ಸೂಚಿಸಿದೆ.