ರಾಜ್ಯದಲ್ಲಿ ಇಂದು 14,785 ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್, 5041 ಜನರಿಗೆ ಪಾಸಿಟಿವ್, ಪಾಸಿಟಿವಿಟಿ ದರ ಶೇಕಡ % 3.8ಕ್ಕೆ ಇಳಿಕೆ,
ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 5041 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದ್ದು, ಇವತ್ತು 115 ಸೋಂಕಿತರು ಸಾವನ್ನಪ್ಪಿದ್ದಾರೆ.
ಇವತ್ತು 14,785 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದು, ರಾಜ್ಯದಲ್ಲಿ ಒಟ್ಟು 1,62,282 ಸಕ್ರಿಯ ಪ್ರಕರಣಗಳಿವೆ. ಇಂದು ಪಾಸಿಟಿವಿಟಿ ದರ ಶೇಕಡ % 3.8ಕ್ಕೆ ಇಳಿಕೆಯಾಗಿದೆ.,
ಬೆಂಗಳೂರಿನಲ್ಲಿ ಎರಡು ತಿಂಗಳುಗಳಲ್ಲಿ ಮೊದಲ ಬಾರಿಗೆ ಕೋವಿಡ್ ಪ್ರಕರಣಗಳು 1000 ಕ್ಕಿಂತ ಕಡಿಮೆಯಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಮಾಹಿತಿ ನೀಡಿದ್ದಾರೆ
ಜಿಲ್ಲಾವಾರು ಪ್ರಕರಣಗಳ ಸಂಖ್ಯೆ :
ಬಾಗಲಕೋಟೆ-23, ಬಳ್ಳಾರಿ-122, ಬೆಳಗಾವಿ-95, ಬೆಳಗಾವಿ ಗ್ರಾಮಾಂತರ-133, ಬೆಂಗಳೂರು ನಗರ-985, ಬೀದರ್-2,ಚಾಮರಾಜನಗರ-79, ಚಿಕ್ಕಬಳ್ಳಾಪುರ-65,ಚಿಕ್ಕಮಗಳೂರು-224, ಚಿತ್ರದುರ್ಗ-95, ದಕ್ಷಿಣ ಕನ್ನಡ-482, ದಾವಣಗೆರೆ-183, ಧಾರವಾಡ-65,ಗದಗ-21, ಹಾಸನ-522, ಹಾವೇರಿ-29, ಕಲಬುರಗಿ-26, ಕೊಡುಗು-64, ಕೋಲಾರ-162, ಕೊಪ್ಪಳ-30, ಮಂಡ್ಯ-213, ಮೈಸೂರು-490,ರಾಯಚೂರು-5, ರಾಮನಗರ-25, ಶಿವಮೊಗ್ಗ-282, ತುಮಕೂರು-329, ಉಡುಪಿ-107, ಉತ್ತರ ಕನ್ನಡ-122, ವಿಜಯಪುರ-50, ಯಾದಗಿರಿ-11.
#ಮಾಸ್ಕ್ ಧರಿಸಿ ಅಂತರ ಕಾಪಾಡಿ, ಕೊರೋನ ಗೆಲ್ಲೋಣ