2021 ಹಜ್: ಭಾರತ ಹಜ್ ಸಮಿತಿಯಿಂದ ಹಜ್ ಯಾತ್ರೆಯ ಎಲ್ಲಾ ಅರ್ಜಿ ರದ್ದು
ಹೊಸದಿಲ್ಲಿ, ಜೂ. 15: ಕೊರೋನ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ವಿದೇಶಗಳಿಂದ ಬರುವ ಜನರಿಗೆ ಸೌದಿ ಅರೇಬಿಯಾ ನಿಷೇಧ ವಿಧಿಸಿರುವುದರಿಂದ ಭಾರತದ ಹಜ್ ಸಮಿತಿ ಮಂಗಳವಾರ ಹಜ್ 2021ಕ್ಕೆ ನಿಗದಿಪಡಿಸಿದ್ದ ಎಲ್ಲ ಅರ್ಜಿಗಳನ್ನು ರದ್ದುಗೊಳಿಸಿದೆ ಎಂದು ತಿಳಿದು ಬಂದಿದೆ.
ಕೊರೋನ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾ ಸರಕಾರ ವಿದೇಶಿಗರಿಗೆ ಹಜ್ ಯಾತ್ರೆಗೆ ಅವಕಾಶ ನೀಡಿಲ್ಲ. ತನ್ನ ದೇಶದ ಪ್ರಜೆಗಳು ಹಾಗೂ ನಿವಾಸಿಗಳಿಗೆ ಮಾತ್ರ ಸೀಮಿತ ಸಂಖ್ಯೆಯಲ್ಲಿ ಹಜ್ ಯಾತ್ರೆ ಕೈಗೊಳ್ಳಲು ಅವಕಾಶ ನೀಡಿದೆ. ಆದುದರಿಂದ ಹಜ್ 2021ರ ಎಲ್ಲ ಅರ್ಜಿಯನ್ನು ರದ್ದುಪಡಿಸಲು ನಿರ್ಧರಿಸಲಾಗಿದೆ ಎಂದು ಭಾರತದ ಹಜ್ ಸಮಿತಿ ಸುತ್ತೋಲೆಯಲ್ಲಿ ತಿಳಿಸಿದೆ.
ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕ್ ಮಾಡಿ