ಬೆಂಗಳೂರು ಸೇರಿ ಇಂದಿನಿಂದ ಅರ್ಧ ರಾಜ್ಯ ಅನ್ ಲಾಕ್: ಯಾವುದಕ್ಕಿದೆ ಅನುಮತಿ!!?? 19 ಜಿಲ್ಲೆಗಳಲ್ಲಿ ಇಂದಿನಿಂದ ಸೆಮಿ ಲಾಕ್ ಡೌನ್, ಹೊಸ ಮಾರ್ಗಸೂಚಿ ಅನ್ವಯ, ಹಳೆ ಮಾರ್ಗಸೂಚಿಯಲ್ಲಿ 11 ಜಿಲ್ಲೆ ಮುಂದುವರಿಕೆ

ಬೆಂಗಳೂರು ಸೇರಿ ಇಂದಿನಿಂದ ಅರ್ಧ ರಾಜ್ಯ ಅನ್ ಲಾಕ್: ಯಾವುದಕ್ಕಿದೆ ಅನುಮತಿ??

19 ಜಿಲ್ಲೆಗಳಲ್ಲಿ ಇಂದಿನಿಂದ ಸೆಮಿ ಲಾಕ್ ಡೌನ್, ಹೊಸ ಮಾರ್ಗಸೂಚಿ ಅನ್ವಯ, ಹಳೆ ಮಾರ್ಗಸೂಚಿಯಲ್ಲಿ 11 ಜಿಲ್ಲೆ ಮುಂದುವರಿಕೆ


ಬೆಂಗಳೂರು : ಇಂದಿನಿಂದ ಬೆಂಗಳೂರು ಸೇರಿದಂತೆ 19 ಜಿಲ್ಲೆಗಳು 'ಅನ್ ಲಾಕ್' ಆಗಲಿದ್ದು, ರಾಜ್ಯ ಸರ್ಕಾರ ಜಾರಿಗೊಳಿಸಿರುವಂತ ಅನ್ ಲಾಕ್ ಮಾರ್ಗಸೂಚಿ ಕ್ರಮಗಳು ಜಾರಿಗೊಳ್ಳಲಿವೆ. 11 ಜಿಲ್ಲೆಗಳಲ್ಲಿ ಲಾಕ್, 19 ಜಿಲ್ಲೆಗಳಲ್ಲಿ ಅನ್ ಲಾಕ್ ಜಾರಿಗೊಳ್ಳಲಿದೆ. ಹಾಗಾದರೆ ಇಂದಿನಿಂದ ಯಾವುದಕ್ಕೆ ಅನುಮತಿ.? 

ರಾಜ್ಯದಲ್ಲಿ ಸೋಂಕು ಪ್ರಮಾಣ ಹೆಚ್ಚಿರುವ ಜಿಲ್ಲೆಗಳಾದ ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ, ಮೈಸೂರು, ಚಾಮರಾಜನಗರ, ಹಾಸನ, ದಕ್ಷಿಣ ಕನ್ನಡ, ಬೆಂಗಳೂರು ಗ್ರಾಮಾಂತರ, ಮಂಡ್ಯ, ಬೆಳಗಾವಿ ಹಾಗೂ ಕೊಡಗು ಜಿಲ್ಲೆಗಳಲ್ಲಿ ಇಂದಿನಿಂದ 1 ವಾರ ಲಾಕ್​ಡೌನ್ ಮುಂದುವರೆಯಲಿದೆ. ಉಳಿದ ಜಿಲ್ಲೆಗಳಲ್ಲಿ ಸೆಮಿ ಲಾಕ್​ಡೌನ್ ಘೋಷಣೆ ಮಾಡಲಾಗಿದೆ.

 • ರಾಜ್ಯದಲ್ಲಿನ ಕಾರ್ಖಾನೆಗಳು ಶೇ.50ರಷ್ಟು ನೌಕರರೊಂದಿಗೆ ತೆರೆಯೋದಕ್ಕೆ, ಗಾರ್ಮೆಂಟ್ಸ್ ಗಳು ಶೇ.30ರಷ್ಟು ನೌಕರರೊಂದಿಗೆ ತೆರೆಯೋದಕ್ಕೆ ಅವಕಾಶ
 • ಅಗತ್ಯ ವಸ್ತು ಖರೀದಿಗೆ ಬೆಳಿಗ್ಗೆ 6 ರಿಂದ 10ರವರೆಗೆ ಇದ್ದಂತ ಸಮಯವನ್ನು ಲಾಕ್ ಡೌನ್ ಮುಂದುವರೆಸಿರುವಂತ ಜಿಲ್ಲೆಗಳಲ್ಲಿ ಯಥಾಸ್ಥಿತಿ ಮುಂದುವರೆಸಿದ್ದರೇ, ಅನ್ ಲಾಕ್ ಜಿಲ್ಲೆಗಳಲ್ಲಿ ಮಧ್ಯಾಹ್ನ 2 ಗಂಟೆಯವರೆಗೆ ವಿಸ್ತರಣೆ ಮಾಡಲಾಗಿದೆ.
 • ಮದ್ಯದ ಅಂಗಡಿಗಳನ್ನು ಕೂಡ ಮಧ್ಯಾಹ್ನ 2 ಗಂಟೆಯವರೆಗೆ ತೆರೆಯೋದಕ್ಕೆ ಅವಕಾಶ ನೀಡಲಾಗಿದ್ದು, ಕೇವಲ ಪಾರ್ಸಲ್ ಗೆ ಮಾತ್ರವೇ ಅವಕಾಶ ನೀಡಿದೆ.
 • ಕಟ್ಟಡ ನಿರ್ಮಾಣ ಕಾಮಗಾರಿ ಆರಂಭಿಸಲು ಅವಕಾಶ ನೀಡಲಾಗಿದ್ದು, ಪಾರ್ಕ್ ಗಳು ಬೆಳಿಗ್ಗೆ 5 ರಿಂದ 10 ಗಂಟೆಯವರೆಗೆ ಕೊರೋನಾ ಮಾರ್ಗಸೂಚಿ ಕ್ರಮಗಳನ್ನು ಅನುಸರಿಸಿ ತೆರೆಯೋದಕ್ಕೆ ಅವಕಾಶ ನೀಡಲಾಗಿದೆ.
 • ಟ್ಯಾಕ್ಸಿ, ಆಟೋ ಆರಂಭಕ್ಕೂ ಅವಕಾಶ ನೀಡಲಾಗಿದ್ದು, ಕೇವಲ ಇಬ್ಬರು ಪ್ರಾಯಾಣಿಕರಿಗೆ ಮಾತ್ರವೇ ಅವಕಾಶ ನೀಡಿದೆ.
 • ಸರ್ಕಾರಿ ಕಚೇರಿಗಳಲ್ಲಿ ಶೇ.50ರಷ್ಟು ನೌಕರರೊಂದಿಗೆ ತೆರೆಯೋದಕ್ಕೆ ಅವಕಾಶ ನೀಡಲಾಗಿದೆ.
 • ಆರೋಗ್ಯ ಇಲಾಖೆಯ ಸ್ಕಿಲ್ ಟ್ರೈನಿಂಗ್ ಸೆಕ್ಟರ್ ತೆರೆಯೋದಕ್ಕೆ ಅವಕಾಶ ನೀಡಲಾಗಿದೆ. ಕಣ್ಣಿನ ಮಸೂರದ ಅಂಗಡಿಗಳು ಬೆಳಿಗ್ಗೆ 6 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ತೆರೆಯಲು ಅವಕಾಶ ನೀಡಲಾಗಿದೆ.
 • ರಾತ್ರಿ ಕರ್ಪ್ಯೂ ಸಂಜೆ 7 ಗಂಟೆಯಿಂದ ಬೆಳಿಗ್ಗೆ 5 ಗಂಟೆಯವರೆಗೆ ಜಾರಿಯಲ್ಲಿದ್ದರೇ, ವಾರಾಂತ್ಯ ಕರ್ಪ್ಯೂ ಶುಕ್ರವಾರ ಸಂಜೆ 7 ಗಂಟೆಯಿಂದ ಸೋಮವಾರ ಬೆಳಿಗ್ಗೆ 5 ಗಂಟೆಯವರೆಗೆ ಜಾರಿಯಲ್ಲಿ ಇರಲಿದೆ.
 • ರಾತ್ರಿ ಕರ್ಪ್ಯೂ ಹಾಗೂ ವಾರಾಂತ್ಯ ಕರ್ಪ್ಯೂ ಸಂದರ್ಭದಲ್ಲಿ ತುರ್ತು ಸಂದರ್ಭದಲ್ಲಿ ಮಾತ್ರವೇ ವಾಹನಗಳ ಓಡಾಟಕ್ಕೆ ಅವಕಾಶ ನೀಡಲಾಗಿದೆ. ಇದಲ್ಲದೇ ಕೆಲ ನೌಕರರು, ಟೆಲಿಕಾಂ ವಾಹನಗಳು, ಇಂಟರ್ ನೆಟ್ ಸರ್ವಿಸ್ ಪ್ರವೈಡರ್ ಗಳು ಐಡಿ ಕಾರ್ಡ್ ತೋರಿಸಿ ಸಂಚರಿಸಲು ಅವಕಾಶ ನೀಡಲಾಗಿದೆ.
 • ನೈಟ್ ಹಾಗೂ ವಾರಾಂತ್ಯ ಕರ್ಪ್ಯೂ ಸಂದರ್ಭದಲ್ಲಿ ಮೆಡಿಕಲ್ ಶಾಪ್, ವೈದ್ಯಕೀಯ ತುರ್ತು ಸೇವೆಗೆ ಅವಕಾಶ ನೀಡಲಾಗಿದೆ. ಜೊತೆಗೆ ಇ-ಕಾಮರ್ಸ್ ಸರ್ವಿಸ್ ಗೂ ರಾಜ್ಯ ಸರ್ಕಾರ ಅನುಮತಿ ನೀಡಿದೆ.
 • ವಾರಾಂತ್ಯ ರಾತ್ರಿ ಕರ್ಪ್ಯೂ ನಡುವೆಯೂ ವಿವಾಹ ಕಾರ್ಯಕ್ರಮಕ್ಕೆ ಅವಕಾಶ ನೀಡಿರುವಂತ ರಾಜ್ಯ ಸರ್ಕಾರ, ಕೇವಲ 40 ಜನರು ಭಾಗವಹಿಸೋದಕ್ಕೆ ನಿರ್ಬಂಧ ಹೇರಿ ಅನುಮತಿ ನೀಡಿದೆ. ಅಲ್ಲದೇ ಅಂತ್ಯ ಸಂಸ್ಕಾರ ಕಾರ್ಯಕ್ರಮಕ್ಕೆ 5 ಜನರಿಗೆ ಮಾತ್ರವೇ ಭಾಗವಹಿಸಲು ಅವಕಾಶ ನೀಡಿದೆ.
 • ರಾತ್ರಿ ಕರ್ಪ್ಯೂ, ವಾರಾಂತ್ಯ ಕರ್ಪ್ಯೂ ಸಂದರ್ಭದಲ್ಲಿ ರೈಲು, ವಿಮಾನ ಸಂಚಾರಕ್ಕೆ ಅವಕಾಶ ನೀಡಲಾಗಿದ್ದು, ಸಾರ್ವಜನಿಕರು ರೈಲು, ವಿಮಾನ ನಿಲ್ದಾಣಕ್ಕೆ ತೆರಳೋದಕ್ಕೆ ಟ್ಯಾಕ್ಸಿ ಮೂಲಕ ತೆರಳಬಹುದಾಗಿ.
 • ವಾರಾಂತ್ಯ ನೈಟ್ ಕರ್ಪ್ಯೂ ಸಂದರ್ಭದಲ್ಲಿ ಹಣ್ಣು, ತರಕಾರಿ, ಹಾಲು, ಮೀನು, ಮಾಂಸ ಮಾರಾಟಕ್ಕೆ ಬೆಳಿಗ್ಗೆ 6 ರಿಂದ 2 ಗಂಟೆಯವರೆಗೆ ಅವಕಾಶ ನೀಡಲಾಗಿದೆ. ಜೊತೆಗೆ ಮದ್ಯ ಮಾರಾಟಕ್ಕೂ ಮಧ್ಯಾಹ್ನ 2 ಗಂಟೆಯವರೆಗೆ ಅನುಮತಿಸಲಾಗಿದೆ. ಹೋಟೆಲ್, ರೆಸ್ಟೋರೆಂಟ್ ಗಳಿಗೆ ಹೋಂ ಡಿಲಿವರಿಗೆ ಮಾತ್ರವೇ ಅವಕಾಶ ನೀಡಲಾಗಿದೆ.

#ಮಾಸ್ಕ್ ಧರಿಸಿ ಅಂತರ ಕಾಪಾಡಿ
Previous Post Next Post