ಮುಹಿಮ್ಮಾತ್ ದಅವಾ ಕಾಲೇಜ್ ಹಳೆ ವಿದ್ಯಾರ್ಥಿಗಳ ಒಕ್ಕೂಟ IMDAD (Integrated Muhimmath Dawa Alumni Desk) ಹಮ್ಮಿಕೊಂಡ DI-Talk Series ಇಂದಿನಿಂದ ಆರಂಭ

ಮುಹಿಮ್ಮಾತ್ ದಅವಾ ಕಾಲೇಜ್ ಹಳೆ ವಿದ್ಯಾರ್ಥಿಗಳ ಒಕ್ಕೂಟ IMDAD (Integrated Muhimmath Dawa Alumni Desk) ಹಮ್ಮಿಕೊಂಡ DI-Talk Series ಇಂದಿನಿಂದ ಆರಂಭ


ಕಾಸರಗೋಡು: ಉತ್ತರ ಕೇರಳದ ಅತ್ಯುನ್ನತ ಮತ ಲೌಕಿಕ ವಿದ್ಯಾ ಕೇಂದ್ರ  ಮುಹಿಮ್ಮಾತುಲ್ ಮುಸ್ಲಿಮೀನ್ ಎಜುಕೇಷನಲ್ ಸೆಂಟರ್ ಅದೀನ ಸಂಸ್ಥೆ ಮುಹಿಮ್ಮಾತ್ ದಅವಾ ಕಾಲೇಜ್ ಇದರ ಹಳೆ ವಿದ್ಯಾರ್ಥಿಗಳ ಒಕ್ಕೂಟ IMDAD (Integrated Muhimmath Dawa Alumni Desk) ಇದರ ಉಪ ಸಮಿತಿ 'ದಿರಾಸತುಲ್ ಇಸ್ಲಾಮಿಯ್ಯಾ' ಝೂಮ್ ಆಪ್ ಮೂಲಕ ಹಮ್ಮಿಕೊಂಡ 'ಟಾಕ್ ಸಿರೀಸ್' ಇಂದಿನಿಂದ ಆರಂಭವಾಗಲಿದೆ. 


ಜೂನ್ 14 ರಿಂದ 18 ವರೆಗೆ ನಡೆಯುವ ಐದು ದಿನಗಳ ತರಗತಿಗಳಲ್ಲಿ ಕೇರಳ ಕಂಡ ಅತ್ಯುನ್ನತ ವಿದ್ವಾಂಸರು ವಿಷಯ ಮಂಡಿಸಲಿದ್ದಾರೆ. 



ಇಂದು ರಾತ್ರಿ 8 ಕ್ಕೆ ಆರಂಭವಾಗುವ ತರಗತಿ ಪರಂಪರೆಯ ಉದ್ಘಾಟನಾ ಕಾರ್ಯಕ್ರಮವನ್ನು ಮುಹಿಮ್ಮತ್ ಸೆಕ್ರೆಟರಿ ಸಯ್ಯದ್ ಮುನೀರುಲ್ ಅಹ್ದಲ್ ಹಿಮಮಿ ಅಹ್ಸನಿ ಅಲ್ ಕಾಮಿಲ್ ನೆರವೇರಿಸಲಿದ್ದಾರೆ. ನಂತರ ಎಸ್ಸೆಸ್ಸೆಫ್ ಅಖಿಲ ಭಾರತ ಅಧ್ಯಕ್ಷರಾದ ಡಾ. ಫಾರೂಖ್ ನಈಮಿ ಕೊಲ್ಲಂ ತರಗತಿ ನಡೆಸಲಿದ್ದಾರೆ.

ರಹಮತಲ್ಲಾ ಸಖಾಫಿ ಎಳಮರಂ, ಇಬ್ರಾಹಿಮ್ ಸಖಾಫಿ ಪುಝಕಾಟಿರಿ, ಅನಸ್ ಅಮಾನಿ ಕಣ್ಣೂರು, ಮುಹ್ಯುದ್ದೀನ್ ಸಅದಿ ಕೊಟ್ಟುಕ್ಕರ ಕ್ರಮವಾಗಿ ಜೂನ್ 15, 16, 17, 18 ತಾರೀಕುಗಳಲ್ಲಿ ವಿವಿಧ ವಿಷಯಗಳಲ್ಲಿ ತರಗತಿ ಮಂಡಿಸಲಿದ್ದಾರೆ. 

ಮುಹಿಮ್ಮಾತ್ ದಅವಾ ಅಲುಮ್ನಿ ವಿದ್ಯಾರ್ಥಿಗಳು ಸಹಿತವಿರುವ ಎಲ್ಲಾ ಮತ ಪಂಡಿತರುಗಳು ಇದರ ಸದುಪಯೋಗ ಪಡೆಯಲು IMDAD ಕರೆ ನೀಡಿದೆ.
Previous Post Next Post