ಸಿಂಡಿಕೇಟ್ ಬ್ಯಾಂಕ್ ಗ್ರಾಹಕರಾಗಿದ್ದವರಿಗೆ ಬಹುಮುಖ್ಯ ಮಾಹಿತಿ, ಜುಲೈ 1 ರಿಂದ ಈ ಎಲ್ಲವೂ ಬದಲಾವಣೆ!!
ನವದೆಹಲಿ : ಈ ಮೊದಲು ಸಿಂಡಿಕೇಟ್ ಬ್ಯಾಂಕ್ ಆಗಿದ್ದು, ಈಗ ಕೆನರಾ ಬ್ಯಾಂಕ್ ನೊಂದಿಗೆ ವಿಲೀನಗೊಂಡಿದೆ. ಹೀಗೆ ವಿಲೀನಗೊಂಡಿರುವಂತ ಬ್ಯಾಂಕ್ ಗ್ರಾಹಕರಿಗೆ ಸಿಂಡಿಕೇಟ್ ಬ್ಯಾಂಕ್ ನಿಂದ ನೀಡಿದ್ದಂತ ಚೆಕ್ ಬುಕ್ ಜುಲೈ.1ಕ್ಕೆ ಅಮಾನ್ಯವಾಗಲಿದ್ದು, ಜುಲೈ 1ರಿಂದ ಹೊಸ ಚೆಕ್ ಬುಕ್ ಪಡೆಯುವಂತೆ ಬ್ಯಾಂಕ್ ತನ್ನ ಗ್ರಾಹಕರಿಗೆ ಮಾಹಿತಿ ನೀಡಿದೆ.
ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವಂತ ಕೆನರಾ ಬ್ಯಾಂಕ್, ತನ್ನ ಬ್ಯಾಂಕ್ ಜೊತೆಗೆ ವಿಲೀನಗೊಂಡಿರುವಂತ ಸಿಂಡಿಕೇಟ್ ಬ್ಯಾಂಕ್ ನ ಗ್ರಾಹಕರಿಗೆ ಜುಲೈ.1ರಿಂದ ಹೊಸ ಐಎಫ್‌ಎಸ್ ಸಿ ಕೋಡ್ ನೀಡಲಿದೆ. ಈ ಹಿಂದೆ ಬಳಕೆ ಮಾಡಲಾಗುತ್ತಿದ್ದಂತ SYNB ಬದಲಾಗಿ, CNRB ಲೆಟರ್ ನಿಂದ ಜುಲೈ.1ರಿಂದ ಐಎಫ್‌ಎಸ್ ಸಿ ಕೋಡ್ ಶುರುವಾಗಲಿದೆ ಎಂಬುದಾಗಿ ತಿಳಿಸಿದೆ.
ಈ ತಿಂಗಳ ಅಂತ್ಯದವರೆಗೆ ಮಾತ್ರವೇ ಹಳೆಯ ಸಿಂಡಿಕೇಟ್ ಬ್ಯಾಂಕ್ ನಿಂದ ನೀಡಲಾಗಿದ್ದಂತ ಚೆಕ್ ಮಾನ್ಯವಿರಲಿದೆ. ಜುಲೈ.1ರಿಂದ ಹೊಸ ಚೆಕ್ ಬುಕ್ ವಿತರಿಸಲಾಗುತ್ತಿದ್ದು, ಗ್ರಾಹಕರು ಹೊಸ ಚೆಕ್ ಬುಕ್ ಪಡೆಯಬೇಕು. ಅಲ್ಲದೇ ಸಿಂಡಿಕೇಟ್ ಬ್ಯಾಂಕ್ ನಿಂದ ನೀಡಲಾಗಿರುವಂತ ಕಸ್ಟಮರ್ ಐಡಿ ಕೂಡ ಬದಲಾಗಲಿದ್ದು, ಬ್ಯಾಂಕ್ ಗ್ರಾಹಕರು ಹೊಸ ಕಸ್ಟಮರ್ ಐಡಿ ಕೂಡ ಪಡೆಯುವಂತೆ ಮನವಿ ಮಾಡಿದೆ.
ಹೆಚ್ಚಿನ ಸುದ್ದಿಗಳು ಇಲ್ಲಿದೆ