ತಂಝೀಲ್ ಹಿಝ್'ಬ್ ಅಕಾಡಮಿ: ಮಹಿಳಾ ಓನ್ಲೈನ್ ಹಿಝ್'ಬ್ ತರಗತಿಗೆ ನಾಳೆ ಚಾಲನೆ
ರಬ್ಬಾನಿ ಎಜೂ ಗ್ರೂಪ್ (ರಿ) ಮಂಗಳೂರು ಇದರ ಅಧೀನದಲ್ಲಿ ನಡೆದು ಬರುತ್ತಿರುವ 'ತಂಝೀಲ್ ಹಿಝ್ಬ್ ಅಕಾಡೆಮಿ' ಫರ್ ವೂಮೆನ್: ಮಹೀಳಾ ಓನ್ಲೈನ್ ಹಿಝ್'ಬ್ ತರಗತಿಗೆ ನಾಳೆ (14/06) ಚಾಲನೆ ದೊರಕಲಿದೆ. ಉದ್ಘಾಟನಾ ಕಾರ್ಯಕ್ರಮ ನಾಳೆ ಬೆಳಿಗ್ಗೆ 10.30 ಕ್ಕೆ ಝೂಂ ಆಪ್ ಮೂಲಕ ನಡೆಯಲಿದ್ದು ಇದು ಕೇವಲ ಮಹಿಳೆಯರಿಗಿರುವ ಖಾಸಗಿ ಕಾರ್ಯಕ್ರಮವಾಗಿರುತ್ತದೆ.
ಕಂಝುಲ್ ವರಾ ಹಿಫ್ಝ್ ಮತ್ತು ಶರೀಅತ್ ಕಾಲೇಜ್ ಚೇಯರ್ ಪರ್ಸನ್ ಸಯ್ಯದತ್ ತಾಹಿರಾ ಅಲ್ ಅಯ್ದರೂಸಿಯ್ಯಾ ಎರಣಾಕುಲಂ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಲಿದ್ದಾರೆ. 'ತಂಝೀಲ್ ಹಿಝ್ಬ್ ಅಕಾಡೆಮಿ' ಪ್ರಿನ್ಸಿಪಾಲ್ ಹಾಫಿಝಾ ಸಯ್ಯಿದತ್ ಆಫಿಯಾ ಯಾಸೀನ್ ಕಾಸರಗೋಡು ಕಾರ್ಯಕ್ರಮದಲ್ಲಿ ಸ್ವಾಗತಿಸಲಿದ್ದು, 'ಖಮರಿಯ್ಯಾ ವುಮೆನ್ಸ್ ಅಕಾಡೆಮಿ ಮಂಗಳೂರು' ಪ್ರಿನ್ಸಿಪಾಲ್ ಸಈದಾ ಫಾತಿಮಾ ಅಲ್ ಮಾಹಿರಾ ಮುನ್ನುಡಿ ಭಾಷಣ ಮಾಡಲಿದ್ದಾರೆ. ಮುಖ್ಯ ಅತಿಥಿಯಾಗಿ ಹಿಝ್'ಬ್ ಟ್ರೈನರ್ ಖಾರಿಅ: ಖದೀಜ ಶಿವಪುರಂ ಭಾಗವಹಿಸಲಿದ್ದಾರೆ ಎಂದು ರಬ್ಬಾನಿ ಎಜೂ ಗ್ರೂಪ್ (ರಿ) ಚಯರ್ ಮ್ಯಾನ್ ಡಾಕ್ಟರ್ ಝೈನಿ ಕಾಮಿಲ್ ತಿಳಿಸಿದ್ದಾರೆ
Visit Our Site Click here
'ಖಮರಿಯ್ಯಾ ವುಮೆನ್ಸ್ ಅಕಾಡಮಿ' ಓನ್ಲೈನ್ ತರಗತಿ ನಾಳೆ ಆರಂಭ
ರಬ್ಬಾನಿ ಎಜೂ ಗ್ರೂಪ್ (ರಿ) ಮಂಗಳೂರು ಇದರ ಅಧೀನದಲ್ಲಿ ನಡೆದು ಬರುತ್ತಿರುವ ಖಮರಿಯ್ಯಾ ಮಹಿಳಾ ಓನ್ಲೈನ್ ತರಗತಿ ನಾಳೆ (14/06) ಆರಂಭವಾಗಲಿದ್ದು, ಅಂತಾರಾಷ್ಟ್ರೀಯ ಖ್ಯಾತಿಯ ವಿದ್ವಾಂಸ ಬದ್ರುಸ್ಸಾದಾತ್ ಸಯ್ಯದ್ ಖಲೀಲ್ ಬುಖಾರಿ ತಙಳ್ ವೀಡಿಯೋ ಸಂದೇಶದ ಮೂಲಕ ಬೆಳಿಗ್ಗೆ 7 ಕ್ಕೆ ಕಾರ್ಯಕ್ರಮ ಉದ್ಘಾಟಿಸಿದ್ದಾರೆ. ಎಲ್ಲಾ ಲೆವೆಲ್ ಗಳನ್ನು ಪೂರ್ತಿಗೊಳಿಸುವ ಮಹಿಳೆಯರಿಗೆ 'ಖಮರಿಯ್ಯಾ' ಬಿರುದು ನೀಡಲಿದ್ದೇವೆ ಎಂದು ರಬ್ಬಾನಿ ಎಜೂ ಗ್ರೂಪ್ (ರಿ) ಚಯರ್ ಮ್ಯಾನ್ ಡಾಕ್ಟರ್ ಎಮ್ಮೆಸ್ಸೆಂ ಝೈನಿ ಕಾಮಿಲ್ ತಿಳಿಸಿದ್ದಾರೆ.