ಮದನೀಯಂ-313 ನೇ ಮಜ್ಲಿಸ್, 313 ಲಕ್ಷ ರೂ ವಿಶ್ವವಿಖ್ಯಾತ ಮರ್ಕಝ್ ಸಂಸ್ಥೆಗೆಂದು ಎಪಿ ಉಸ್ತಾದರ ಕೈಗೆ ಸಮರ್ಪಿಸಿದ ಮದನೀಯಂ
ಜೂ.17: ವಿಶ್ವಾಸಿ ಸಮೂಹವನ್ನು ಆಧ್ಯಾತ್ಮಿಕ ಲೋಕಕ್ಕೆ ಕೊಂಡೊಯ್ಯುವ ಅಬ್ದುಲ್ ಲತೀಫ್ ಸಖಾಫಿ ಕಾಂದಪುರಂ ಮುನ್ನಡೆಸುವ 'ಮದನೀಯಂ' ಇಂದು ತನ್ನ 313 ನೇ ದಿನವನ್ನು ಪೂರ್ತಿಗೊಳಿಸಿತು.
ಲಕ್ಷಗಟ್ಟಲೆ ವಿಶ್ವಾಸಿ ಸಮೂಹವು ವೀಕ್ಷಿಸುತ್ತಿರುವ ಮದನೀಯಂ ಮಜ್ಲಿಸ್ ಗೆ ಇಂದು ಇಂಡಿಯನ್ ಗ್ರಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎಪಿ ಉಸ್ತಾದ್ ಮುಖ್ಯಅಥಿತಿಯಾಗಿದ್ದರು.
ಮರ್ಕಝ್ ಸಂಸ್ಥೆಗೆ ಮದನೀಯಂ ಸಂಗ್ರಹಿಸಿದ 3 ಕೋಟಿ 13 ಲಕ್ಷ ರೂ, ಮರ್ಕಝ್ ಅಧ್ಯಕ್ಷರು ಅಲೀ ಬಾಫಕೀ ತಙಳ್, ಜನರಲ್ ಮ್ಯಾನೇಜರ್ ಸಿ ಮುಹಮ್ಮದ್ ಫೈಝಿ, ಸುಲ್ತಾನುಲ್ ಉಲಮಾ ಎಪಿ ಉಸ್ತಾದ್ ಸಹಿತವಿರುವ ಟೀಮ್ ಮರ್ಕಝ್ ಬೃಹತ್ ಮೊತ್ತವನ್ನು ಸ್ವೀಕರಿಸಿದರು. ಸಯ್ಯದ್ ಹಸನುಲ್ ಅಹ್ದಲ್ ತಙಳ್ ಮುಹಿಮ್ಮಾತ್ ಉಪಸ್ಥಿತರಿದ್ದರು.
ರೋಗಗಳು ಮತ್ತು ಹಲಾವಾರು ಕಷ್ಟಗಳನ್ನು ಅನುಭವಿಸುತ್ತಿರುವ ಹಲವು ಜನರಿಗೆ ಅಭಯ ತಾಣವಾಗಿದೆ ಮದನೀಯಂ. ಮದನೀಯಂ ಆಧ್ಯಾತ್ಮಿಕ ಮಜ್ಲಿಸನ್ನು ಮುನ್ನಡೆಸುವ ಅಬ್ದುಲ್ ಲತೀಫ್ ಸಖಾಫಿ ಉಸ್ತಾದರನ್ನು ಸುಲ್ತಾನುಲ್ ಉಲಮಾ ಕಾಂತಪುರಂ ಉಸ್ತಾದ್ ವಿಶೇಷವಾಗಿ ಅಭಿನಂದಿಸಿದರು ಮತ್ತು ಮದನೀಯಂ ಕುಟುಂಬಕ್ಕಾಗಿ ಪ್ರಾರ್ಥಿಸಿದರು.
ವಿಶೇಷ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ