ರಾಜ್ಯದಲ್ಲಿ ಇಂದು 5,983 ಜನರಿಗೆ ಸೋಂಕು ದೃಢ, 10685 ಗುಣಮುಖರಾಗಿ ಡಿಸ್ಚಾರ್ಜ್. ಖಚಿತ ಪ್ರಕರಣಗಳ ಶೇಕಡಾವಾರು ಪ್ರಮಾಣ 3.77%

ರಾಜ್ಯದಲ್ಲಿ ಇಂದು 5,983 ಜನರಿಗೆ ಸೋಂಕು ದೃಢ, 10685 ಗುಣಮುಖರಾಗಿ ಡಿಸ್ಚಾರ್ಜ್. ಖಚಿತ ಪ್ರಕರಣಗಳ ಶೇಕಡಾವಾರು ಪ್ರಮಾಣ 3.77%

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಸತತವಾಗಿ ಇಳಿಯುತ್ತಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಗುರುವಾರ ವರದಿಯಾಗಿರುವ ಒಟ್ಟು ಸೋಂಕಿತರ ಸಂಖ್ಯೆ 6 ಸಾವಿರಕ್ಕೆ ಕಡಿಮೆ. ಕರ್ನಾಟಕದಲ್ಲಿ ಇಂದು ಒಂದೇ ದಿನ 5,983 ಜನರಿಗೆ ಸೋಂಕು ದೃಢಪಟ್ಟಿದ್ದು, ಇಂದು 10685 ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. 138 ಜನರು ಸಾವನ್ನಪ್ಪಿದ್ದಾರೆ. ಇಂದಿನ ಖಚಿತ ಪ್ರಕರಣಗಳ ಶೇಕಡಾವಾರು ಪ್ರಮಾಣ 3.77%.


ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ


ಕರ್ನಾಟಕದಲ್ಲಿ ಈವರೆಗೆ ಒಟ್ಟು 27,90,338 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 26,101,57 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ರಾಜ್ಯದಲ್ಲಿ ಪ್ರಸ್ತುತ 1,46,726 ಸಕ್ರಿಯ ಪ್ರಕರಣಗಳಿವೆ. 


ಯಾವ ಜಿಲ್ಲೆಯಲ್ಲಿ ಎಷ್ಟು ಮಂದಿಗೆ ಸೋಂಕು?
ಕರ್ನಾಟಕದಲ್ಲಿ ಇಂದು ಹೊಸದಾಗಿ 5,983 ಜನರಿಗೆ ಕೊರೊನಾ ದೃಢಪಟ್ಟಿದೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ಅತಿಹೆಚ್ಚು, ಅಂದರೆ 1209 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಉಳಿದಂತೆ ಬಾಗಲಕೋಟೆ 22, ಬಳ್ಳಾರಿ 128, ಬೆಳಗಾವಿ 172, ಬೆಂಗಳೂರು ಗ್ರಾಮಾಂತರ 226, ಬೀದರ್ 8, ಚಾಮರಾಜನಗರ 98, ಚಿಕ್ಕಬಳ್ಳಾಪುರ 119, ಚಿಕ್ಕಮಗಳೂರು 198, ಚಿತ್ರದುರ್ಗ 110, ದಕ್ಷಿಣ ಕನ್ನಡ 679, ದಾವಣಗೆರೆ 153, ಧಾರವಾಡ 86, ಗದಗ 34, ಹಾಸನ 424, ಹಾವೇರಿ 42, ಕಲಬುರಗಿ 25, ಕೊಡಗು 152, ಕೋಲಾರ 145, ಕೊಪ್ಪಳ 48, ಮಂಡ್ಯ 309, ಮೈಸೂರು 596, ರಾಯಚೂರು 16, ರಾಮನಗರ 37, ಶಿವಮೊಗ್ಗ 229, ತುಮಕೂರು 289, ಉಡುಪಿ 166, ಉತ್ತರ ಕನ್ನಡ 169, ವಿಜಯಪುರ 83, ಯಾದಗಿರಿ 11 ಪ್ರಕರಣಗಳು ಪತ್ತೆಯಾಗಿವೆ.


ಸೂಚನೆ: ಕೊರೊನ ಗೆಲ್ಲೋಣ, ಮಾಸ್ಕ್ ಧರಿಸಿ, ಅಂತರ ಕಾಪಾಡಿ
Previous Post Next Post