ರಾಜ್ಯದಲ್ಲಿ ಇಂದು ಕೊರೋನ ಭಾರೀ ಇಳಿಕೆ, 3709 ಪಾಸಿಟಿವ್, 8,111 ಡಿಸ್ಚಾರ್ಜ್, ಇಂದಿನ ಪಾಸಿಟಿವಿಟಿ ದರ ಶೇಕಡ 2.87

ರಾಜ್ಯದಲ್ಲಿ ಇಂದು ಕೊರೋನ ಭಾರೀ ಇಳಿಕೆ, 3709  ಪಾಸಿಟಿವ್, 8,111 ಡಿಸ್ಚಾರ್ಜ್, ಇಂದಿನ ಪಾಸಿಟಿವಿಟಿ ದರ ಶೇಕಡ 2.87


ಬೆಂಗಳೂರು: ರಾಜ್ಯದಲ್ಲಿ ಇಂದು ಕೊರೋನಾ ಭಾರಿ ಇಳಿಕೆ ಕಂಡಿದ್ದು, 3709 ಜನರಿಗೆ ಹೊಸದಾಗಿ ಸೋಂಕು ತಗುಲಿದೆ. ರಾಜ್ಯದಲ್ಲಿಂದು 139 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ. 8,111 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ, ರಾಜ್ಯದಲ್ಲಿ 1,18,592 ಸಕ್ರಿಯ ಪ್ರಕರಣಗಳಿವೆ. ಪಾಸಿಟಿವಿಟಿ ದರ ಶೇಕಡ 2.87 ರಷ್ಟು ಇದೆ.


ಸೋಂಕಿತರ ಜಿಲ್ಲಾವಾರು ಲೆಕ್ಕ ದಕ ಜಿಲ್ಲೆ ಸೇರಿ ಮತ್ತೆ ನಾಲ್ಕು ಜಿಲ್ಲೆಗಳಲ್ಲಿ ನಿಯಮ ಸಡಿಲಿಸಿದ ರಾಜ್ಯಸಕಾರ


ಕೋವಿಡ್ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಕಡಿಯಾಗುತ್ತಿರುವ ಕಾರಣದಿಂದ ರಾಜ್ಯ ಸರ್ಕಾರ ಮತ್ತೆ ನಾಲ್ಕು ಜಿಲ್ಲೆಗಳಲ್ಲಿ ಕಠಿಣ ನಿಯಮಗಳನ್ನು ಸಡಿಲಿಕೆ ಮಾಡಿದೆ.


ದಕ್ಷಿಣ ಕನ್ನಡ, ಹಾಸನ, ದಾವಣಗೆರೆ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಲಾಕ್ ಡೌನ್ ನಿಯಮವನ್ನು ಸಡಿಲಿಕೆ ಮಾಡಲಾಗಿದೆ.


ಈ ಜಿಲ್ಲೆಗಳಲ್ಲಿ ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಎಲ್ಲಾ ರೀತಿಯ ಅಂಗಡಿ ಮಳಿಗೆಗಳನ್ನು ತೆರೆದಿಡಲು ಅನುಮತಿ ನೀಡಲಾಗಿದೆ. ಆದರೆ ಹವಾನಿಯಂತ್ರಕ (ಎಸಿ) ಇರುವ ಅಂಗಡಿಗಳು, ಶಾಪಿಂಗ್ ಮಾಲ್ ಗಳನ್ನು ತೆರೆಯಲು ಅನುಮತಿ ಅವಕಾಶವಿಲ್ಲ.


ಸೂಚನೆ: ಕೊರೊನ ಗೆಲ್ಲೋಣ, ಮಾಸ್ಕ್ ಧರಿಸಿ, ಅಂತರ ಕಾಪಾಡಿ

Previous Post Next Post