ರಾಜ್ಯದಲ್ಲಿ ಕೊರೊನ ಇಳಿಕೆ, ಇಂದು 3,979 ಪಾಸಿಟಿವ್, 9768 ಸೋಂಕಿತರು ಗುಣಮುಖರು, ಇಂದಿನ ಪಾಸಿಟಿವಿಟಿ ದರ 2.46%

ರಾಜ್ಯದಲ್ಲಿ ಕೊರೊನ ಇಳಿಕೆ, ಇಂದು 3,979 ಪಾಸಿಟಿವ್, 9768 ಸೋಂಕಿತರು ಗುಣಮುಖರು, ಇಂದಿನ ಪಾಸಿಟಿವಿಟಿ ದರ 2.46%


ಬೆಂಗಳೂರು: ರಾಜ್ಯದಲ್ಲಿ ಕೋವಿಡ್-19 ಎರಡನೇ ಅಲೆ ಕ್ಷೀಣಿಸುತ್ತಲೇ ಇದೆ. ಕಳೆದ 24 ಗಂಟೆಯಲ್ಲಿ 3,979 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದ್ದು 138 ಜನ ಬಲಿಯಾಗಿದ್ದಾರೆ. 


ರಾಜ್ಯದಲ್ಲಿ ಇಂದು 9,768 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇನ್ನು 1,10,523 ಸಕ್ರಿಯ ಪ್ರಕರಣಗಳಿವೆ. ಇನ್ನು ಕಳೆದ 24 ಗಂಟೆಗಳಲ್ಲಿ ಪಾಸಿಟಿವಿಟಿ ದರ 2.46%ನಷ್ಟಿದೆ. 


ಜಿಲ್ಲಾವಾರು ಪ್ರಕರಣಗಳ ಸಂಖ್ಯೆ :

ಬಾಗಲಕೋಟೆ-07, ಬಳ್ಳಾರಿ-67, ಬೆಳಗಾವಿ-98, ಬೆಂಗಳೂರು ಗ್ರಾಮಾಂತರ-81, ಬೆಂಗಳೂರು ನಗರ-969, ಬೀದರ್-18,ಚಾಮರಾಜನಗರ-64, ಚಿಕ್ಕಬಳ್ಳಾಪುರ-44, ಚಿಕ್ಕಮಗಳೂರು-110, ಚಿತ್ರದುರ್ಗ-33, ದಕ್ಷಿಣ ಕನ್ನಡ-498, ದಾವಣಗೆರೆ-118, ಧಾರವಾಡ-62, ಗದಗ-18,ಹಾಸನ-336,ಹಾವೇರಿ-28, ಕಲಬುರಗಿ-31, ಕೊಡಗು-115,ಕೋಲಾರ-103, ಕೊಪ್ಪಳ-18, ಮಂಡ್ಯ-137, ಮೈಸೂರು-404, ರಾಯಚೂರು-16, ರಾಮನಗರ-32, ಶಿವಮೊಗ್ಗ-206, ತುಮಕೂರು-128, ಉಡುಪಿ-123, ಉತ್ತರ ಕನ್ನಡ-104, ವಿಜಯಪುರ-4, ಯಾದಗಿರಿ-07.


ಸೂಚನೆ- ದೇಶದಲ್ಲಿ ಕೊರೋನಾ ಸೋಂಕಿನ ಹಾವಳಿ ಕಡಿಮೆಯಾಗಿದ್ದರೂ ಸಂಪೂರ್ಣವಾಗಿ ನಿಂತಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಇದು ‌ಈಗಿನ ಸುದ್ದಿಯ ಕಳಕಳಿ.

Previous Post Next Post