ಕರ್ನಾಟಕದಲ್ಲಿ ಇಂದು ಕೋವಿಡ್ ಗಣನೀಯ ಇಳಿಕೆ, ಪಾಸಿಟಿವಿಟಿ ರೇಟ್ 4.86ಕ್ಕೆ ಕುಸಿತ, 8,249 ಜನರಿಗೆ ಸೋಂಕು, 14,975 ಜನರು ಗುಣಮುಖರು

ಕರ್ನಾಟಕದಲ್ಲಿ ಇಂದು ಕೋವಿಡ್ ಗಣನೀಯ ಇಳಿಕೆ, ಪಾಸಿಟಿವಿಟಿ ರೇಟ್  4.86ಕ್ಕೆ ಕುಸಿತ, 8,249 ಜನರಿಗೆ ಸೋಂಕು, 14,975 ಜನರು ಗುಣಮುಖರು


ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಕೊವಿಡ್ ಸೋಂಕು ಪ್ರಕರಣಗಳು ಶುಕ್ರವಾರ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ. 2ನೇ ಅಲೆ ವ್ಯಾಪಕವಾಗಿ ಹರಡಿದ ನಂತರ ಇದೇ ಮೊದಲ ಬಾರಿಗೆ ಸೋಂಕಿತರ ಒಟ್ಟು ಸಂಖ್ಯೆ 9 ಸಾವಿರದ ಗಡಿಯಿಂದ ಕೆಳಗಿಳಿದಿದೆ. ಒಟ್ಟು 8,249 ಜನರಿಗೆ ಸೋಂಕು ದೃಢಪಟ್ಟಿದ್ದು, 159 ಮಂದಿ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಇಂದು 14,975 ಜನರು ಗುಣಮುಖರಾಗಿದ್ದು ಪಾಸಿಟಿವಿಟಿ ದರವು ಶೇ 4.86ಕ್ಕೆ ಇಳಿದಿದೆ. ಪಾಸಿಟಿವಿಟಿ ದರ ಶೇ 5ರ ಒಳಗೆ ಇರಬೇಕು ಎಂಬುದು ರಾಜ್ಯದ ಗುರಿಯಾಗಿತ್ತು.


ರಾಜ್ಯದ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 27,47,539ಕ್ಕೆ ಏರಿಕೆಯಾಗಿದೆ. ಸೋಂಕಿತರ ಪೈಕಿ 25,11,105 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಈವರೆಗೆ ಕೊರೊನಾದಿಂದ ಒಟ್ಟು 32,644 ಜನರು ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಒಟ್ಟು 2,03,769 ಸಕ್ರಿಯ ಪ್ರಕರಣಗಳಿವೆ.


#ಮನೆಯಲ್ಲಿರಿ ಆರೋಗ್ಯವಾಗಿರಿ
Previous Post Next Post