ಜೂನ್ 14 ರಿಂದ ಮೊದಲ ಹಂತದ ಅನ್ ಲಾಕ್, ಸರಕಾರದಿಂದ ಹೊಸ ಮಾರ್ಗಸೂಚಿ ಪ್ರಕಟ,

ಜೂನ್ 14 ರಿಂದ ಮೊದಲ ಹಂತದ ಅನ್ ಲಾಕ್, ಸರಕಾರದಿಂದ ಹೊಸ ಮಾರ್ಗಸೂಚಿ ಪ್ರಕಟ


ಬೆಂಗಳೂರು: ಕೊರೋನಾ ಎರಡನೇ ಅಲೆಯಿಂದಾಗಿ ತತ್ತರಿಸಿದ್ದ ಕರ್ನಾಟಕದಲ್ಲಿ ಲಾಕ್ ಡೌನ್ ಘೋಷಿಸಲಾಗಿತ್ತು. ಇದೀಗ ಒಂದೂವರೆ ತಿಂಗಳ ಬಳಿಕ ಕೆಲ ನಿರ್ಬಂಧಗಳೊಂದಿಗೆ ಅನ್ ಲಾಕ್ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದ್ದು ಇದಕ್ಕಾಗಿ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.


ಜು. 14ರಿಂದ 21ರವರೆಗೆ ಮಾರ್ಗಸೂಚಿಯಲ್ಲಿ ಬದಲಾವಣೆ ಮಾಡಿದ್ದು ವಾರಾಂತ್ಯದ ಕರ್ಫ್ಯೂ ಜಾರಿ ಮಾಡಿದೆ. ಇನ್ನು ಪರಿಸ್ಥಿತಿ ನೋಡಿಕೊಂಡು ಹಂತ ಹಂತವಾಗಿ ಅನ್ ಲಾಕ್ ಮಾಡಲಾಗುತ್ತದೆ. ಪ್ರತಿ ದಿನ ರಾತ್ರಿ 7 ಗಂಟೆಯಿಂದ ಬೆಳಗ್ಗೆ 5ಗಂಟೆಯವರೆಗೆ ರಾತ್ರಿ ಕರ್ಫ್ಯೂ ಇರಲಿದೆ.


ಸೋಂಕು ಇಳಿಮುಖವಾಗದ 11 ಜಿಲ್ಲೆಗಳಲ್ಲಿ ನಿರ್ಬಂಧ ಮಾರ್ಗಸೂಚಿಗಳು ಯಥಾಸ್ಥಿತಿಯಲ್ಲಿ ಮುಂದುವರಿಯಲಿವೆ. ಅದರಂತೆ ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ, ಚಾಮರಾಜನಗರ, ಮೈಸೂರು, ಹಾಸನ, ದಕ್ಷಿಣ ಕನ್ನಡ, ಬೆಂಗಳೂರು ಗ್ರಾಮಾಂತರ, ಮಂಡ್ಯ, ಬೆಳಗಾವಿ ಹಾಗೂ ಕೊಡಗು ಜಿಲ್ಲೆಗಳಲ್ಲಿ ಹಳೆಯ ಮಾರ್ಗಸೂಚಿಯಲ್ಲಿ ಯಾವುದೇ ಬದಲಾವಣೆ ಇರಲ್ಲ.  ಯಥಾಸ್ಥಿತಿ ಮುಂದುವರಿಯಲಿದೆ. ಕೆಲ ಜಿಲ್ಲೆಗಳಲ್ಲಿ ಇನ್ನು ಪಾಸಿಟಿವಿಟಿ ದರ ಶೇಕಡ 5ಕ್ಕಿಂತ ಜಾಸ್ತಿ ಇರುವುದರಿಂದ ಸದ್ಯಕ್ಕೆ ಅಂತಾರಾಜ್ಯ ಬಸ್ ಸಂಚಾರಕ್ಕೆ ಅವಕಾಶವಿಲ್ಲ.


ನಿಷೇಧಾಜ್ಞೆ ನಿಯಮಗಳು
> ವಾರಾಂತ್ಯಗಳಲ್ಲಿ ಕಠಿಣ ಕರ್ಫ್ಯೂ ಇರುವುದರಿಂದ ಅನಗತ್ಯ ಓಡಾಟಕ್ಕೆ ಬ್ರೇಕ್.
> ಅನಾರೋಗ್ಯ ಪೀಡಿತ ರೋಗಿಗಳ ತುರ್ತು ಸಂಚಾರಕ್ಕೆ ಅವಕಾಶ.
> ಮೆಡಿಕಲ್ ಸಿಬ್ಬಂದಿಗೆ ಅವಕಾಶ
> ಸರಕು ಸಾಗಣೆ ಮತ್ತು ಆನ್ ಲೈನ್ ಸೇವೆಗಳಿಗೆ ಅವಕಾಶ
> ಅಂತರ್ಜಾಲ, ಟೆಲಿಕಾಂ ಸೇವೆ ಸಿಬ್ಬಂದಿ ಓಡಾಟಕ್ಕೆ ಅವಕಾಶ
> ರಾತ್ರಿಪಾಳಿಯಲ್ಲಿ ಕೆಲಸ ಮಾಡುವ ಸಿಬ್ಬಂದಿ ಐಡಿ ಕಾರ್ಡ್ ಇಟ್ಟುಕೊಂಡು ಸಂಚಾರಕ್ಕೆ ಅವಕಾಶ.
> ವಿಮಾನ ಮತ್ತು ರೈಲು ಸಂಚಾರಕ್ಕೆ ಅವಕಾಶ. ಟಿಕೆಟ್ ತೋರಿಸಿ ಪ್ರಯಾಣಿಸಬಹುದು.


19 ಜಿಲ್ಲೆಯಗಳಲ್ಲಿ ಮೊದಲ ಹಂತದ ಸಡಿಲಿಕೆ
> ಆಹಾರ, ಹಣ್ಣು ತರಕಾರಿ, ಮಾಂಸ, ಮೀನು, ಡೈರಿ ಪ್ರಾಡೆಕ್ಟ್, ದಿನಸಿ ಅಂಗಡಿಗಳು ಬೆಳಗ್ಗೆ 6ರಿಂದ 2 ಗಂಟೆಯವರೆಗೆ ತೆರೆಯಲು ಅವಕಾಶ
> ಸ್ಟೀಲ್, ಸಿಮೆಂಟ್ ಅಂಗಡಿ ತೆರೆಯಲು 6ರಿಂದ 2 ಗಂಟೆಯವರೆಗೆ ಅವಕಾಶ
> ಎಲ್ಲಾ ಕಾರ್ಖಾನೆಗಳು ಶೇ. 50ರಷ್ಟು ಸಿಬ್ಬಂದಿ ಕೆಲಸಕ್ಕೆ ಅವಕಾಶ
> ಗಾರ್ಮೆಂಟ್ಸ್ ಗಳಲ್ಲಿ ಶೇ. 30ರಷ್ಟು ಸಿಬ್ಬಂದಿಗೆ ಅವಕಾಶ
> ಬೆಳಗ್ಗೆ 5 ರಿಂದ 10 ಗಂಟೆಯವರೆಗೆ ವಾಯುವಿಹಾರಕ್ಕಾಗಿ ಪಾಕ್ ಗಳ ಓಪನ್ ಗೆ ಅವಕಾಶ
> ಆಟೋ, ಟ್ಯಾಕ್ಸಿಯಲ್ಲಿ ಇಬ್ಬರ ಪ್ರಯಾಣಕ್ಕೆ ಮಾತ್ರ ಅವಕಾಶ
> ಆರೋಗ್ಯ ಕಾರ್ಯಕರ್ತರಿಗೆ ಕೌಶಲ್ಯ ತರಬೇತಿ ನೀಡಲು ಅವಕಾಶ
> ಬೆಳಗ್ಗೆ 6ರಿಂದ 2 ಗಂಟೆಯವರೆಗೆ ಕನ್ನಡಕದ ಅಂಗಡಿ ತೆರೆಯಲು ಅವಕಾಶ

Visit our Site Click Here  


ಮುಂಜಾನೆ 6 ರಿಂದ 12 ವರೆಗೆ ಗ್ಯಾರೇಜ್, ಅಧಿಕೃತ ವಾಹನ ಸೇವಾ ಕೇಂದ್ರ, ಆಪ್ಟಿಕಲ್ ಶಾಫ್ ತೆರೆಯಲು ಅವಕಾಶ ದ.ಕ ಜಿಲ್ಲಾಧಿಕಾರಿ ಆದೇಶ..!!ಮಂಗಳೂರು, ಜೂ.11: ರಾಜ್ಯ ಸರಕಾರದ ನಿರ್ದೇಶನದಂತೆ ಕೋವಿಡ್ ಸೋಂಕಿನ ಪ್ರಮಾಣವನ್ನು ಕಡಿಮೆಗೊಳಿಸಲು ಜೂ.21ರ ಮುಂಜಾನೆ 6 ಗಂಟೆಯವರೆಗೆ ಲಾಕ್‌ಡೌನ್ ಮುಂದುವರಿಯಲಿದೆ. ಈ ಸಂದರ್ಭ ಕೋವಿಡ್ -19 ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಮನವಿ ಮಾಡಿರುವ ದ.ಕ.ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಜಿಲ್ಲೆಯಲ್ಲಿ ವಾಹನ ಶೋ ರೂಂ ಹೊರತುಪಡಿಸಿ ಎಲ್ಲಾ ಗ್ಯಾರೇಜ್‌ಗಳು ಮತ್ತು ಅಧಿಕೃತ ವಾಹನ ಸೇವಾ ಕೇಂದ್ರಗಳನ್ನು ಮುಂಜಾನೆ 6ರಿಂದ ಮಧ್ಯಾಹ್ನ 12ರವರೆಗೆ ತೆರೆಯಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.

ಅದಲ್ಲದೆ ಮುಂಜಾನೆ 6ರಿಂದ ಮಧ್ಯಾಹ್ನ 12ರವರೆಗೆ ಕನ್ನಡಕದ ಅಂಗಡಿಗಳನ್ನು ಕೂಡ ತೆರೆದಿಡಬಹುದು ಎಂದು ಸೂಚನೆ ನೀಡಿದ್ದಾರೆ.


#ಸೂಚನೆ: ನಮ್ಮ ಆರೋಗ್ಯದ ರಕ್ಷಣೆ ನಮ್ಮ ಹೊಣೆ, ಮನೆಯಲ್ಲಿರಿ ಆರೋಗ್ಯವಾಗಿರಿ, ಅಗತ್ಯಕ್ಕಾಗಿ ಹೊರಬಂದರೆ ಮಾಸ್ಕ್ ಧರಿಸಿ ಅಂತರ ಕಾಪಾಡಿ 

Previous Post Next Post